AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ!

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ!

ಭಾವನಾ ಹೆಗಡೆ
|

Updated on: Jul 26, 2026 | 10:39 AM

Share

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಸಚಿವಾಕಾಂಕ್ಷಿ ಶಾಸಕರು ನವದೆಹಲಿಯತ್ತ ಮುಖ ಮಾಡಿದ್ದಾರೆ. ಅಶೋಕ್ ಪಟ್ಟಣ್, ಬಸವರಾಜ ರಾಯರೆಡ್ಡಿ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಸುಧಾಮ್ ದಾಸ್, ಮಂಜುನಾಥ ಭಂಡಾರಿ, ಶರಣಗೌಡ ಬಯ್ಯಾಪುರ, ವಿಜಯಾನಂದ ಕಾಶಪ್ಪನವರ್, ಬ್ಯಾಡಗಿ ಶಿವಣ್ಣನವರ್, ಗುಬ್ಬಿ ವಾಸು, ಪುಟ್ಟಣ್ಣ, ಎಂ.ಆರ್.ಸೀತಾರಾಮ್ ಹಾಗೂ ಬಿ.ಆರ್.ಪಾಟೀಲ್ ಸೇರಿದಂತೆ ಹಲವು ನಾಯಕರು ಹೈಕಮಾಂಡ್ ಭೇಟಿಗೆ ಸಜ್ಜಾಗಿದ್ದಾರೆ.

ಬೆಂಗಳೂರು, ಜುಲೈ 26: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಸಚಿವಾಕಾಂಕ್ಷಿ ಶಾಸಕರು ನವದೆಹಲಿಯತ್ತ ಮುಖ ಮಾಡಿದ್ದಾರೆ. ಅಶೋಕ್ ಪಟ್ಟಣ್, ಬಸವರಾಜ ರಾಯರೆಡ್ಡಿ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಸುಧಾಮ್ ದಾಸ್, ಮಂಜುನಾಥ ಭಂಡಾರಿ, ಶರಣಗೌಡ ಬಯ್ಯಾಪುರ, ವಿಜಯಾನಂದ ಕಾಶಪ್ಪನವರ್, ಬ್ಯಾಡಗಿ ಶಿವಣ್ಣನವರ್, ಗುಬ್ಬಿ ವಾಸು, ಪುಟ್ಟಣ್ಣ, ಎಂ.ಆರ್.ಸೀತಾರಾಮ್ ಹಾಗೂ ಬಿ.ಆರ್.ಪಾಟೀಲ್ ಸೇರಿದಂತೆ ಹಲವು ನಾಯಕರು ಹೈಕಮಾಂಡ್ ಭೇಟಿಗೆ ಸಜ್ಜಾಗಿದ್ದಾರೆ.

ಇನ್ನೊಂದೆಡೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಿ ಅಂತಿಮ ಪಟ್ಟಿ ಕುರಿತು ಚರ್ಚಿಸಲಿದ್ದಾರೆ. ಚಿತ್ರದುರ್ಗ ಪ್ರವಾಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಇಂದಿನ ದೆಹಲಿ ಪ್ರಯಾಣ ರದ್ದಾಗಿದ್ದು, ನಾಳೆ ಅವರು ದೆಹಲಿಗೆ ತೆರಳಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us