AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಶನಿಯ ವಕ್ರದೃಷ್ಟಿ?

Weekly Horoscope: 2026ರ ಜುಲೈ 26ರಿಂದ ಆಗಸ್ಟ್ 01ರವರೆಗೆ ವಾರ ಭವಿಷ್ಯ ಇಲ್ಲಿದೆ. ಜುಲೈ 26ರಿಂದ ಆಗಷ್ಟ್ 01ರವರೆಗೆ ​ಏರಿಳವಿಲ್ಲದ ಮಾರ್ಗದಲ್ಲಿ ವ್ಯತ್ಯಾಸ, ಕುಟುಂಬ ಸುಧಾರಣೆ, ಶತ್ರುಪರಾಜಯ, ಅಪಘಾತದ ಭಯ, ದೇವತಾರ್ಚನೆ, ನಗೆಪಾಟಲು, ವಿದೇಶದ ಕನಸು ಇವೆಲ್ಲ ಈ ವಾರದ ಭವಿಷ್ಯ. ಸಂಕಲ್ಪಸಿದ್ಧಿರಸ್ತು.

ವಾರ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಶನಿಯ ವಕ್ರದೃಷ್ಟಿ?
ವಾರ ಭವಿಷ್ಯImage Credit source: google
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 25, 2026 | 8:51 PM

Share

ಮೇಷ ರಾಶಿ: ​ಉದ್ಯೋಗ ಹಾಗೂ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ. ಹೊಸ ಹೂಡಿಕೆಗಳಿಗೆ ಸೂಕ್ತ ಸಮಯ ಹಾಗೂ ಆರ್ಥಿಕವಾಗಿ ಶುಭ ಫಲಗಳು ದೊರೆಯಲಿವೆ. ಕೋಪ ಮತ್ತು ಅವಸರದ ನಿರ್ಧಾರಗಳಿಂದ ಕುಟುಂಬದಲ್ಲಿ ಮನಸ್ತಾಪಗಳು ಉಂಟಾಗಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ​ ವೃಷಭ ರಾಶಿ: ​ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ದು, ಆಸ್ತಿ ಖರೀದಿಗೆ ಯೋಗವಿದೆ. ಅನಗತ್ಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣದ ಸಮಯದಲ್ಲಿ ಎಚ್ಚರಿಕೆ ವಹಿಸಿ.

ಮಿಥುನ ರಾಶಿ: ಬುದ್ಧಿವಂತಿಕೆಯಿಂದ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಾ. ವ್ಯಾಪಾರ-ವಹಿವಾಟಿನಲ್ಲಿ ಉತ್ತಮ ಲಾಭ ಮತ್ತು ಹೊಸ ಸವಾಲುಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಕೆಲಸದಲ್ಲಿ ಗೊಂದಲ ಹಾಗೂ ಅನಗತ್ಯ ಚಿಂತೆಗಳು ಮನಸ್ಸನ್ನು ಕಾಡಬಹುದು. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡುವುದು ಒಳಿತು. ​ ಕರ್ಕಾಟಕ ರಾಶಿ: ​ಸೂರ್ಯ ಮತ್ತು ಗುರು ಗ್ರಹಗಳ ಅನುಕೂಲದಿಂದಾಗಿ ಕಾರ್ಯಸಿದ್ದಿ ಉಂಟಾಗಲಿದೆ. ಸಮಾಜದಲ್ಲಿ ಗೌರವ-ಆದರಗಳು ವೃದ್ಧಿಯಾಗುತ್ತವೆ. ​ನಿಕಟ ಸಂಬಂಧಿಕರೊಂದಿಗೆ ಮಾತನಾಡುವಾಗ ತಾಳ್ಮೆ ವಹಿಸಿ, ಇಲ್ಲದಿದ್ದರೆ ಸಣ್ಣ ವಿಷಯಕ್ಕೆ ಜಗಳವಾಗಬಹುದು. ​ ಸಿಂಹ ರಾಶಿ: ​ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸೃಜನಶೀಲ ರಂಗದಲ್ಲಿದ್ದವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಆರೋಗ್ಯ ಸಮಸ್ಯೆಗಳು ಅದಲ್ಲಿಯೂ ವಿಶೇಷವಾಗಿ ಉದರ ಸಂಬಂಧಿ ರೋಗಗಳು ಬಾಧಿಸಬಹುದು. ಖರ್ಚುಗಳ ಮೇಲೆ ನಿಯಂತ್ರಣವಿರಲಿ. ​ ಕನ್ಯಾ ರಾಶಿ: ​ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವಿದೆ. ಸಾಲದ ಬಾಕಿ ಹಣ ಮರಳಿ ಬರುವ ಸಾಧ್ಯತೆ ಇದೆ. ಸಣ್ಣಪುಟ್ಟ ನಿರ್ಲಕ್ಷ್ಯವೂ ಕೆಲಸದಲ್ಲಿ ವಿಳಂಬ ತರಬಹುದು. ಸಹೋದ್ಯೋಗಿಗಳೊಂದಿಗೆ ನಯವಾಗಿ ವರ್ತಿಸಿ. ​ ತುಲಾ ರಾಶಿ: ​ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಪ್ರೇಮಿಗಳಿಗೆ ಮತ್ತು ಹೊಸ ಸಂಬಂಧಗಳನ್ನು ಪ್ರಾರಂಭಿಸುವವರಿಗೆ ಶುಭ ದಿನಗಳು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅಂಧವಾಗಿ ನಂಬಬೇಡಿ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಏರಿಳಿತವಾಗಬಹುದು. ​ ವೃಶ್ಚಿಕ ರಾಶಿ: ​ವೃತ್ತಿಬದುಕಿನಲ್ಲಿ ಹಠಾತ್ ಧನಲಾಭ ಅಥವಾ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಆಲೋಚನೆಗಳಿಗೆ ಸಮಾಜದಲ್ಲಿ ಬೆಂಬಲ ಸಿಗುತ್ತದೆ. ಕೆಲಸದ ಒತ್ತಡ ಹೆಚ್ಚಾಗುವುದರಿಂದ ಆಯಾಸ ಕಾಡಬಹುದು. ವಾದ-ವಿವಾದಗಳಿಂದ ದೂರವಿರಿ. ​ ಧನು ರಾಶಿ: ​ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಗಳು ಹಾಗೂ ವಿದೇಶಿ ಪ್ರಯಾಣದ ಯೋಗವಿದೆ. ಯೋಜಿತ ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ. ​ ಮಕರ ರಾಶಿ: ​ಕಠಿಣ ಸವಾಲುಗಳನ್ನು ಎದುರಿಸಿ ಗೆಲ್ಲುವ ಸಾಮರ್ಥ್ಯ ನಿಮಗಿರುತ್ತದೆ. ವ್ಯಾಪಾರಿಗಳಿಗೆ ಹೊಸ ಪಾಲುದಾರಿಕೆಗಳಿಂದ ಲಾಭ. ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ನಿಧಾನಗತಿ ಇರಬಹುದು. ವಾಹನ ಚಾಲನೆ ಮಾಡುವಾಗ ಜಾಗ್ರತೆ ಅಗತ್ಯ. ​ ಕುಂಭ ರಾಶಿ: ​ಸಕಾರಾತ್ಮಕ ಅಂಶ: ಸಮಾಜಸೇವೆ ಮತ್ತು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಒಳ್ಳೆಯ ಸಮಯ. ಆರ್ಥಿಕ ಚೇತರಿಕೆ ಕಂಡುಬರಲಿದೆ. ಶರೀರದಲ್ಲಿ ಆಲಸ್ಯ ಮತ್ತು ನಿರಾಸಕ್ತಿ ಉಂಟಾಗಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ವೈಮನಸ್ಸು ಬರಬಹುದು.

ಮೀನ ರಾಶಿ: ​ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಾ. ಶನಿ ವಕ್ರ ದೃಷ್ಟಿಯಿಂದ ಹಣಕಾಸಿನ ವೆಚ್ಚ ಹೆಚ್ಚಬಹುದು ಮತ್ತು ಮಾನಸಿಕ ತಂಟೆ-ತಕರಾರುಗಳು ಉಂಟಾಗಬಹುದು.

ಲೋಹಿತ್ ಹೆಬ್ಬಾರ್

Follow Us
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ
ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿದ ಸಿಜೆಪಿಯ ಮುಂದಿನ ನಡೆ ಏನು?
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿದ ಸಿಜೆಪಿಯ ಮುಂದಿನ ನಡೆ ಏನು?
ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ 'ಜಿರಲೆ
ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ 'ಜಿರಲೆ