AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆ ಆಯ್ತು ಶಿವಣ್ಣನ ‘ಬೇಲ್’ ಸಿನಿಮಾ ಟ್ರೈಲರ್

ಶಿವರಾಜ್ ಕುಮಾರ್ ನಟನೆಯ ‘ಬೇಲ್’ ಸಿನಿಮಾದ ಪೋಸ್ಟರ್ ಈ ಹಿಂದೆ ಸಖತ್ ಗಮನ ಸೆಳೆದಿತ್ತು. ಇದೀಗ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾನಲ್ಲಿ ಶಿವಣ್ಣನ ಲುಕ್ ಸಖತ್ ಗಮನ ಸೆಳೆಯುತ್ತಿದೆ. ನಿವೃತ್ತ ಅಧಿಕಾರಿಯ ಪಾತ್ರದಲ್ಲಿ ಶಿವಣ್ಣ ನಟನೆ ಮಾಡಿದ್ದು, ಹೆಸರೇ ಹೇಳುವಂತೆ ನ್ಯಾಯಾಲಯ, ಕಾನೂನು ಹೋರಾಟಗಳ ಕತೆಯ ಜೊತೆಗೆ ಆಕ್ಷನ್ ಸಹ ಸಿನಿಮಾನಲ್ಲಿದೆ.

ಬಿಡುಗಡೆ ಆಯ್ತು ಶಿವಣ್ಣನ ‘ಬೇಲ್’ ಸಿನಿಮಾ ಟ್ರೈಲರ್
Bail Movie Trailer
ಮಂಜುನಾಥ ಸಿ.
|

Updated on: Sep 20, 2026 | 6:31 PM

Share

ಮುಖ್ಯಾಂಶಗಳು

  • ಶಿವರಾಜ್ ಕುಮಾರ್ ನಟನೆಯ ‘ಬೇಲ್’ ಸಿನಿಮಾ
  • ‘ಬೇಲ್’ ಸಿನಿಮಾದ ಟ್ರೈಲರ್ ರಿಲೀಸ್
  • ಅಕ್ಟೋಬರ್ 2ಕ್ಕೆ ರಿಲೀಸ್ ಆಗಲಿದೆ ಸಿನಿಮಾ

ಶಿವರಾಜ್ ಕುಮಾರ್ ನಟಿಸಿರುವ ಹೊಸ ಸಿನಿಮಾ ‘ಬೇಲ್’ನ ಪೋಸ್ಟರ್ ಕೆಲ ವಾರಗಳ ಹಿಂದೆ ಬಿಡುಗಡೆ ಆದಾಗ ಸಖತ್ ಗಮನ ಸೆಳೆದಿತ್ತು. ಇದೀಗ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ‘ಬೇಲ್’ ಸಿನಿಮಾ ಹೆಸರೇ ಹೇಳುವಂತೆ ಕಾನೂನು, ನ್ಯಾಯಗಳಿಗೆ ಸಂಬಂಧಿಸಿದ ಸಿನಿಮಾ ಆಗಿದ್ದು, ಈಗ ಬಿಡುಗಡೆ ಆಗಿರುವ ಟ್ರೈಲರ್ ಇದನ್ನು ಒತ್ತಿ ಹೇಳುತ್ತಿದೆ. ಹಾಗೆಂದು ಇದು ಕೇವಲ ಕೋರ್ಟ್ ರೂಂ ಡ್ರಾಮಾ ಅಲ್ಲ ಬದಲಿಗೆ ಒಳ್ಳೆಯ ಆಕ್ಷನ್ ಜೊತೆಗೆ ಎಮೋಷನಲ್​​ ಅಂಶಗಳು ಸಹ ಇರುವ ಕತೆ ಎಂಬುದನ್ನು ಟ್ರೈಲರ್ ಹೇಳುತ್ತಿದೆ.

ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಶಿವಣ್ಣನ ಲುಕ್ ಸಖತ್ ಗಮನ ಸೆಳೆಯುತ್ತಿದೆ. ಶಿವಣ್ಣನನ್ನು ಸಾಮಾನ್ಯವಾಗಿ ಯಂಗ್ ಲುಕ್​​ನಲ್ಲಿಯೇ ನಿರ್ದೇಶಕರು ತೋರಿಸುತ್ತಾರೆ ಆದರೆ ಈ ಸಿನಿಮಾನಲ್ಲಿ ಶಿವಣ್ಣನನ್ನು ವಯಸ್ಸಾದ ವ್ಯಕ್ತಿಯ ರೀತಿ ತೋರಿಸಲಾಗಿದೆ. ಶಿವಣ್ಣ ‘ಬೇಲ್’ ಸಿನಿಮಾನಲ್ಲಿ ನಿವೃತ್ತಿ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿರುವ ಸುಳಿವನ್ನು ಟ್ರೈಲರ್ ನೀಡುತ್ತಿದೆ.

ಸಿನಿಮಾನಲ್ಲಿ ಶಿವಣ್ಣನ ಜೊತೆಗೆ ಮಲಯಾಳಂ ನಟ ಜಯರಾಂ ಮತ್ತು ಸಾಯಿ ಕುಮಾರ್ ಅವರುಗಳು ಸಹ ನಟಿಸಿದ್ದು, ಮೂವರೂ ಗೆಳೆಯರು ಒಟ್ಟಿಗೆ ಸೇರಿ ಅನ್ಯಾಯದ ವಿರುದ್ಧ ಹೋರಾಡುವ ಕತೆಯನ್ನು ‘ಬೇಲ್’ ಸಿನಿಮಾ ಒಳಗೊಂಡಿರುವುದು ಟ್ರೈಲರ್​​ನಿಂದ ತಿಳಿದು ಬರುತ್ತಿದೆ. ಸಿನಿಮಾನಲ್ಲಿ ಸಖತ್ ಆಕ್ಷನ್ ಇರುವುದು ಟ್ರೈಲರ್​ನಿಂದಲೇ ತಿಳಿದು ಬರುತ್ತಿದೆ. ಲೂಸ್ ಮಾದ ಯೋಗಿ ವಿಲನ್ ಪಾತ್ರದಲ್ಲಿ ನಟಿಸಿದ್ದು, ಅವರ ಪಾತ್ರವನ್ನು ಬಲು ಖಡಕ್ ಆಗಿ ಟ್ರೈಲರ್​​ನಲ್ಲಿ ತೋರಿಸಲಾಗಿದೆ. ಸಿನಿಮಾನಲ್ಲಿ ದೀಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್​​ನಲ್ಲಿ ಅವರ ಪಾತ್ರವೂ ಗಮನ ಸೆಳೆಯುತ್ತದೆ.

‘ಬೇಲ್’ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಜೊತೆಗೆ ಲೂಸ್ ಮಾದ ಯೋಗಿ, ಜಯರಾಂ, ಸಾಯಿಕುಮಾರ್, ದೀಕ್ಷಿತ್ ಶೆಟ್ಟಿ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಅಕ್ಟೋಬರ್ 2ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ