ಹಾಲಿವುಡ್ ಸಿನಿಮಾಕ್ಕಾಗಿ ಉಚಿತವಾಗಿ ನಟಿಸಲು ಸಿದ್ಧವಾದ ವಿಜಯ್ ಸೇತುಪತಿ
ವಿಜಯ್ ಸೇತುಪತಿ ಬಾಲಿವುಡ್ನ ಕೆಲವಾರು ನಟ-ನಟಿಯರು ಈಗಾಗಲೇ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಬಂದಿದ್ದಾರೆ. ಆದರೆ ದಕ್ಷಿಣದ ಕಲಾವಿದರಿಗೆ ಅವಕಾಶ ಬರುವುದು ಬಲು ವಿರಳ. ಧನುಶ್ ಎರಡು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವಿಜಯ್ ಸೇತುಪತಿ ಸಹ ಹಾಲಿವುಡ್ ಸಿನಿಮಾನಲ್ಲಿ ನಟಿಸಲು ತಯಾರಾಗಿದ್ದು, ಹಾಲಿವುಡ್ ಅವಕಾಶಕ್ಕಾಗಿ ಉಚಿತವಾಗಿ ಸಿನಿಮಾನಲ್ಲಿ ನಟಿಸಲು ಸಿದ್ಧ ಎಂದಿದ್ದಾರೆ.

ಹಾಲಿವುಡ್ ಸಿನಿಮಾನಲ್ಲಿ ಅದರಲ್ಲೂ ಹಾಲಿವುಡ್ ಎ ಲಿಸ್ಟೆಡ್ ತಾರೆಯರೊಟ್ಟಿಗೆ ಸಿನಿಮಾನಲ್ಲಿ ನಟಿಸಬೇಕೆನ್ನುವುದು ಭಾರತದ ಹಲವಾರು ಕಲಾವಿದರು ಕನಸು. ಆದರೆ ಕೆಲವು ನಟರಿಗಷ್ಟೆ ಈ ಕನಸು ನನಸಾಗುತ್ತದೆ. ಬಾಲಿವುಡ್ನ ಕೆಲವಾರು ನಟ-ನಟಿಯರು ಈಗಾಗಲೇ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಬಂದಿದ್ದಾರೆ. ಆದರೆ ದಕ್ಷಿಣದ ಕಲಾವಿದರಿಗೆ ಅವಕಾಶ ಬರುವುದು ಬಲು ವಿರಳ. ಧನುಶ್ ಎರಡು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವಿಜಯ್ ಸೇತುಪತಿ ಸಹ ಹಾಲಿವುಡ್ ಸಿನಿಮಾನಲ್ಲಿ ನಟಿಸಲು ತಯಾರಾಗಿದ್ದು, ಹಾಲಿವುಡ್ ಅವಕಾಶಕ್ಕಾಗಿ ಉಚಿತವಾಗಿ ಸಿನಿಮಾನಲ್ಲಿ ನಟಿಸಲು ಸಿದ್ಧ ಎಂದಿದ್ದಾರೆ.
ವಿಜಯ್ ಸೇತುಪತಿ ನಟಿಸಿರುವ ‘ಮಹಾರಾಜ’ ಸಿನಿಮಾ 2024 ರಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಹಿಟ್ ಆಗಿದ್ದು ಮಾತ್ರವೇ ಅಲ್ಲ ವಿಮರ್ಶಕರು, ಸಿನಿಮಾ ಕರ್ಮಿಗಳ ಗಮನ ಸೆಳೆದಿತ್ತು. ‘ಮಹಾರಾಜ’ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ಜಪಾನ್ ಸೇರಿದಂತೆ ವಿದೇಶಗಳಲ್ಲೂ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಹಾಲಿವುಡ್‌ಗೆ ರೀಮೇಕ್ ಆಗುತ್ತಿದೆ. ಇತ್ತೀಚೆಗಷ್ಟೆ ಸಿನಿಮಾದ ನಿರ್ಮಾಪಕರು ‘ಮಹಾರಾಜ’ ಸಿನಿಮಾದ ರೀಮೇಕ್ ಹಕ್ಕುಗಳನ್ನು ಹಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಅದೇ ಸಿನಿಮಾನಲ್ಲಿ ನಟಿಸುವ ಆಸೆಯನ್ನು ವಿಜಯ್ ಸೇತುಪತಿ ವ್ಯಕ್ತಪಡಿಸಿದ್ದಾರೆ.
‘ಮಹಾರಾಜ’ ಸಿನಿಮಾ ಇಷ್ಟು ದೂರ ಸಾಗುತ್ತದೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ಸಿನಿಮಾ ಚೆನ್ನಾಗಿತ್ತು, ಆದರೆ ಕೆಲವರಿಗೆ ಅದರ ಮೇಲೆ ನಂಬಿಕೆ ಇರಲಿಲ್ಲ. ನನಗೆ ಆ ನಂಬಿಕೆ ಇತ್ತು, ಆದರೆ ಈ ಮಟ್ಟದ ಯಶಸ್ಸನ್ನು ನಾನು ನಿರೀಕ್ಷಿಸಿರಲಿಲ್ಲ. ನಿರ್ಮಾಪಕರು ಫೋನ್ ಮಾಡಿ ಚಿತ್ರದ ಹಾಲಿವುಡ್ ಹಕ್ಕುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದರು. ಆಗ ನಾನು ಅವರಿಗೆ, ‘ನಾನು ನಿಮ್ಮ ಒಂದು ಸಿನಿಮಾದಲ್ಲಿ ಉಚಿತವಾಗಿ ನಟಿಸುತ್ತೇನೆ, ಆ ಹಾಲಿವುಡ್ ರಿಮೇಕ್‌ನಲ್ಲಿ ನನಗೆ ಒಂದು ಪಾತ್ರ ಕೊಡಿಸಿ, ನಾನು ಹಾಲಿವುಡ್‌ಗೆ ಹೋಗುತ್ತೇನೆ ಎಂದೆ. ಇದು ನನಗೆ ಅಚ್ಚರಿ ಹಾಗೂ ಸಂತೋಷ ತಂದಿದೆ. ಹಾಲಿವುಡ್‌ನಲ್ಲಿ ಕೆಲಸ ಮಾಡಬೇಕೆಂಬ ಆಸೆ ನನಗೆ ಯಾವಾಗಲೂ ಇತ್ತು, ಆದರೆ ಅದಕ್ಕಿಂತ ಹೆಚ್ಚಾಗಿ ನನ್ನ ಸಿನಿಮಾ ಹಾಲಿವುಡ್‌ಗೆ ಹೋಗುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ’ ಎಂದರು.
ಇದನ್ನೂ ಓದಿ:ಹಾಲಿವುಡ್ ಪದಾರ್ಪಣೆಗೆ ಸಜ್ಜಾಗುತ್ತಿದ್ದಾರೆ ನಟಿ ಜಾನ್ಹವಿ ಕಪೂರ್
ಇದೇ ಸಮಯದಲ್ಲಿ ಅವರು ‘ಮಹಾರಾಜ 2’ ಸಿನಿಮಾ ಬರುತ್ತಿರುವುದನ್ನು ಖಾತ್ರಿ ಪಡಿಸಿದರು. ನಿರ್ದೇಶಕ ನಿತಿಲನ್ ಸ್ವಾಮಿನಾಥನ್ ಅವರು ಈ ಸೀಕ್ವೆಲ್‌ನ ಕಥೆಯನ್ನು ತಮಗೆ ಈಗಾಗಲೇ ವಿವರಿಸಿದ್ದು, ಅದು “ತುಂಬಾ ಸುಂದರವಾಗಿದೆ. ನಿತಿಲನ್ ಅತ್ಯುತ್ತಮ ನಿರ್ದೇಶಕರು. ಅವರಿಗೆ ಬರವಣಿಗೆಯ ಮೇಲೆ ಉತ್ತಮ ಹಿಡಿತವಿದೆ. ಅವರು ಇತ್ತೀಚೆಗೆ ನನಗೆ ‘ಮಹಾರಾಜ 2’ ಕಥೆಯನ್ನು ಹೇಳಿದರು. ಅದು ತುಂಬಾ ಸುಂದರವಾಗಿತ್ತು. ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ” ಎಂದು ಹೇಳುವ ಮೂಲಕ, ಈ ಸೀಕ್ವೆಲ್ ಕೇವಲ ಪ್ರಾಥಮಿಕ ಚರ್ಚೆಗಳನ್ನು ಮೀರಿದ್ದು, ಸಂಪೂರ್ಣ ಕಥೆ ಸಿದ್ಧವಾಗಿದೆ ಎಂಬುದನ್ನು ಖಚಿತಪಡಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




