AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ವಿರುದ್ಧ ಸಿಡಿದ ಕಾಂಗ್ರೆಸ್​​ ಹಿರಿಯ ಶಾಸಕ: ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ರೆ ರಾಜೀನಾಮೆ ಎಂದ ಹೆಚ್​​.ಕೆ. ಪಾಟೀಲ್​​

ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಅಕ್ಟೋಬರ್ 10ರ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕ ಹೆಚ್.ಕೆ. ಪಾಟೀಲ್ ಸ್ವಪಕ್ಷದ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ. ಗದಗ ತಾಲೂಕಿನಲ್ಲಿ ಶೇಕಡಾ 49ರಷ್ಟು ಮಳೆ ಕೊರತೆ ಆಗಿದ್ದರೂ ಬರಪೀಡಿತ ಪ್ರದೇಶವೆಂದು ಸರ್ಕಾರ ಯಾಕೆ ಘೋಷಿಸಿಲ್ಲ? ಬರಪೀಡಿತ ತಾಲೂಕು ಎಂದು ಘೋಷಿಸಲು ಯಾರು ಅಡ್ಡಿಯಾದರು? ಎಂದವರು ಪ್ರಶ್ನಿಸಿದ್ದಾರೆ.

ಸರ್ಕಾರದ ವಿರುದ್ಧ ಸಿಡಿದ ಕಾಂಗ್ರೆಸ್​​ ಹಿರಿಯ ಶಾಸಕ: ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ರೆ ರಾಜೀನಾಮೆ ಎಂದ ಹೆಚ್​​.ಕೆ. ಪಾಟೀಲ್​​
ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ರೆ ರಾಜೀನಾಮೆ ಎಂದ ಹೆಚ್​​.ಕೆ. ಪಾಟೀಲ್​​ Image Credit source: HK Patil Facebook Page
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Sep 20, 2026 | 3:22 PM

Share

ಗದಗ, ಸೆಪ್ಟೆಂಬರ್​​ 20: ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಗದಗ ತಾಲೂಕಿನ ಮುಳಗುಂದದಲ್ಲಿ ಮಾತನಾಡಿದ ಕಾಂಗ್ರೆಸ್​​ ಶಾಸಕ, ಬರ ಪಟ್ಟಿಯಲ್ಲಿ ಗದಗ ತಾಲೂಕಿನ ಹೆಸರನ್ನು ಸರ್ಕಾರ ಘೋಷಣೆ ಮಾಡದ ಕಾರಣ ರೈತರ ಆಕ್ರೋಶದ ಕಟ್ಟೆ ಒಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಸಭೆ ಮಾಡಿದ್ದೆವು. ಗದಗ ಬರಪೀಡಿತ ಪ್ರದೇಶವೆಂದು ಸ್ಪಷ್ಟವಾದ ಚಿತ್ರಣ ನಮ್ಮದಾಗಿತ್ತು. ಅಧಿಕಾರಿಗಳ ವರದಿ ನಂತರ ಮುಖ್ಯಮಂತ್ರಿಗಳು ಧಾವಿಸಿ ಬಂದರು. ಕದಂಪುರದಿಂದ ಕುರ್ತಕೋಟಿವರೆಗೆ ಸಿಎಂ ಬೆಳೆ ವೀಕ್ಷಣೆ ಮಾಡಿದ್ರು. ಇಷ್ಟು ಆದ್ರು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ. ಹೀಗಾಗಿ ರೈತರು ರೊಚ್ಚಿಗೆದ್ದು ಹೋರಾಟ ಮಾಡುತ್ತಿದ್ದಾರೆ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.

‘ಬರಪೀಡಿತ ತಾಲೂಕು ಎಂದು ಘೋಷಿಸಲು ಯಾರು ಅಡ್ಡಿಯಾದರು?’

ಗದಗ ತಾಲೂಕಿನಲ್ಲಿ ಶೇಕಡಾ 49ರಷ್ಟು ಮಳೆ ಕೊರತೆ ಆಗಿದ್ದರೂ ಬರಪೀಡಿತ ಪ್ರದೇಶವೆಂದು ಸರ್ಕಾರ ಯಾಕೆ ಘೋಷಿಸಿಲ್ಲ? ಬರಪೀಡಿತ ತಾಲೂಕು ಎಂದು ಘೋಷಿಸಲು ಯಾರು ಅಡ್ಡಿಯಾದರು? ಅನ್ಯಾಯ, ಮೋಸ ಸಹಿಸೋದಕ್ಕೆ ಸಾಧ್ಯವಿಲ್ಲ. ತಾನು ರೈತರ ಪರ ಇದ್ದವನು, ಜೊತೆಗೆ ನಮ್ಮದೂ ರೈತ ಕುಟುಂಬ. ರೈತರ ಪರಿಸ್ಥಿತಿ ಬಗ್ಗೆ ನನಗೆ ಅರಿವಿದೆ. ತನ್ನನ್ನು ಶಾಸಕರನ್ನಾಗಿ ಮಾಡಿದ ನಾಯಕರು ಕೂಡ ಇಲ್ಲಿದ್ದಾರೆ. ಬರಪೀಡಿತ ತಾಲೂಕು ಎಂದು ಘೋಷಿಸಲು ಪ್ರಯತ್ನ ಮಾಡ್ತೇನೆ. ಅದು ಸಾಧ್ಯವಾಗದಿದ್ರೆ ಅಕ್ಟೋಬರ್ 10ರವರೆಗೆ ಶಾಸನಸಭೆಯ ಮೂಲಕ ರಾಜ್ಯ ಸರ್ಕಾರಕ್ಕೆ ಗಡುವು ಕೊಡುತ್ತೇನೆ. ಅಷ್ಟರೊಳಗೆ ಬರಪೀಡಿತ ತಾಲೂಕು ಎಂದು ಗದಗವನ್ನು ಘೋಷಣೆ ಮಾಡದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಅವರು ಹೇಳಿದ್ದಾರೆ.

LIVE TV

ಇದನ್ನೂ ಓದಿ: ಕರ್ನಾಟಕದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸಂಖ್ಯೆ 124ಕ್ಕೆ ಏರಿಕೆ

ಉತ್ತರ ಕರ್ನಾಟಕ ಭಾಗದ 73 ತಾಲೂಕುಗಳ ಪೈಕಿ 27 ತಾಲೂಕುಗಳ ಬರಪೀಡಿತ ಪ್ರದೇಶ ಅಲ್ಲವೆಂದು ಕೈಬಿಟ್ಟಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗದ ಆ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಮುಂದುವರಿದಿರುವ ಮಳೆ ಕೊರತೆ ಹಾಗೂ ಒಣಹವೆ ಪರಿಸ್ಥಿತಿಯ ನಡುವೆ ಕರ್ನಾಟಕ ಸರ್ಕಾರ ಮೊದಲ ಹಂತದಲ್ಲಿ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಅದಾದ ಬಳಿಕ ಮತ್ತೆ 23 ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಿ ಒಟ್ಟು 124 ತಾಲೂಕುಗಳು ಬರಪೀಡಿತ ಎಂದು ಪರಿಗಣಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ