Jog Falls: ಧುಮ್ಮುಕ್ಕಿ ಹರಿಯುತ್ತಿರೋ ಜೋಗ ಜಲಪಾತ!
ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಸಂಪೂರ್ಣವಾಗಿ ಭೋರ್ಗರೆಯುತ್ತಿದೆ. ನಿರಂತರ ಮಳೆಯಿಂದಾಗಿ ಶರಾವತಿ ನದಿಯ ಒಡಲು ತುಂಬಿ ಹರಿದು ಜೋಗ ಜಲಪಾತದ ವೈಭವವನ್ನು ಇಮ್ಮಡಿಗೊಳಿಸಿದೆ. ಅಮೋಘವಾದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಶಿವಮೊಗ್ಗ, ಜುಲೈ 26: ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಸಂಪೂರ್ಣವಾಗಿ ಭೋರ್ಗರೆಯುತ್ತಿದೆ. ನಿರಂತರ ಮಳೆಯಿಂದಾಗಿ ಶರಾವತಿ ನದಿಯ ಒಡಲು ತುಂಬಿ ಹರಿದು ಜೋಗ ಜಲಪಾತದ ವೈಭವವನ್ನು ಇಮ್ಮಡಿಗೊಳಿಸಿದೆ. ಅಮೋಘವಾದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಸಾಮಾನ್ಯವಾಗಿ ಪ್ರತಿ ವರ್ಷ ಉತ್ತಮ ಮಳೆಯಾದಾಗ ಜೋಗ ಜಲಪಾತ ತುಂಬಿ ಹರಿಯುತ್ತದೆ. ಆಗ ರಾಜಾ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಜಲಧಾರೆಗಳು ಒಂದಾಗಿ ಹರಿಯುವ ಮನಮೋಹಕ ದೃಶ್ಯವನ್ನು ವೀಕ್ಷಿಸಲು ಜನಸಾಗರವೇ ಹರಿದುಬರುತ್ತದೆ. ಈ ವರ್ಷವೂ ಮಳೆ ಉತ್ತಮವಾಗಿದ್ದು, ಜಲಪಾತ ಸಂಪೂರ್ಣ ಮೈದುಂಬಿ ಹರಿಯುತ್ತಿದೆ. ಮಳೆ ನಡುವೆಯೂ ಸಾವಿರಾರು ಪ್ರವಾಸಿಗರು ಜಲಪಾತದ ಸೌಂದರ್ಯವನ್ನು ಸವಿಯಲು ತಂಡೋಪತಂಡವಾಗಿ ಆಗಮಿಸಿ, ಜೋಗ ಜಲಪಾತದ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ. ಮಲೆನಾಡಿನ ಈ ಅದ್ಭುತ ಪ್ರಾಕೃತಿಕ ವೈಭವವು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jul 26, 2026 12:23 PM
ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧೀಜಿ ಸಮಾಧಿಗೆ ಪ್ರಧಾನಿ ಮೋದಿ ಪುಷ್ಪ ನಮನ
Live: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ನಿಷೇಧ ನಿರ್ಧಾರ ನಮ್ಮದಲ್ಲ, FSSAI ಸೂಚನೆ
ಇಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರಾವಣ ಶನಿವಾರ

