AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕೇಸರಿ ಟವೆಲ್​ ಹಾಕಿಕೊಂಡಿದ್ದಕ್ಕೆ ಯುವಕನ ಮೇಲೆ ಹಲ್ಲೆ; ಮೂವರ ಬಂಧನ

ಕೇಸರಿ ಬಣ್ಣದ ಟವೆಲ್ ಹಾಕಿಕೊಂಡಿದ್ದಕ್ಕೆ ಸ್ಲಿಂದರ್ ಕುಮಾರ್ ಎಂಬುವವರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಘಟನೆ ನಡೆದಿದೆ. ಆರೋಪಿಗಳು ತಬ್ರೇಜ್, ಇಮ್ರಾನ್ ಖಾನ್ ಮತ್ತು ಅಜೀಝ್ ಖಾನ್. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ನಗರದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಕೇಸರಿ ಟವೆಲ್​ ಹಾಕಿಕೊಂಡಿದ್ದಕ್ಕೆ ಯುವಕನ ಮೇಲೆ ಹಲ್ಲೆ; ಮೂವರ ಬಂಧನ
ಬಂಧಿತ ಆರೋಪಿಗಳು
ವಿವೇಕ ಬಿರಾದಾರ
|

Updated on:Aug 26, 2025 | 1:22 PM

Share

ಬೆಂಗಳೂರು, ಆಗಸ್ಟ್​ 26: ಕೇಸರಿ ಟವೆಲ್ (Saffron towel)​ ಹಾಕಿಕೊಂಡಿದ್ದಕ್ಕೆ ಸ್ಲಿಂದರ್ ಕುಮಾರ್ ಎಂಬುವರ ಮೇಲೆ ಮೂವರು ಯುವಕರು ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಕಲಾಸಿಪಾಳ್ಯದಲ್ಲಿನ (Kalasipalya) ರಾಯಲ್​ ಟ್ರಾವೆಲ್ಸ್​ ಕಂಪನಿಯಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿದ ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ತಬ್ರೇಜ್, ಇಮ್ರಾನ್ ಖಾನ್, ಅಜೀಝ್ ಖಾನ್ ಬಂಧಿತರು.

ಆರೋಪಿಗಳು ಆಗಸ್ಟ್​ 24ರ ರಾತ್ರಿ 9:30ರ ಸುಮಾರಿಗೆ ಸ್ಲಿಂದರ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆ.24 ರ ರಾತ್ರಿ 9:30ರ ಸುಮಾರಿಗೆ ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ಹಲ್ಲೆಗೊಳಗಾದ ಸ್ಲಿಂದರ್ ಕುಮಾರ್ ಮತ್ತು ಹರಿಕೃಷ್ಣ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಇವರ ಬಳಿಗೆ ಬಂದು, ಸ್ವಿಂದರ್ ಕುಮಾರ್ ಅವರನ್ನು ನಿಲ್ಲಿಸಿಕೊಂಡು “ನೀನು ಯಾಕೆ ಕೇಸರಿ ಟಾವೆಲ್ ಹಾಕಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ತಳ್ಳಿದ್ದಾರೆ.

ಇದನ್ನು, ನೋಡಿದ ಹರಿಕೃಷ್ಣ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾರೆ. ಆಗ, ಆರೋಪಿಗಳು ಇಬ್ಬರಿಗೂ ಅವ್ಯಾಚ್ಯ ಶಬ್ದಗಳಿಂದ ಬೈದು ಹರಿಕೃಷ್ಣ ಅವರ ಶರ್ಟ್​ ಅನ್ನು ಹರಿದು ಕೈಯಿಂದ ಹೊಡೆದಿದ್ದಾರೆ. ಬಳಿಕ, ಆರೋಪಿಗಳು “ನಿಮ್ಮ ಕೂಲಿ ಮಾಡುವ ಹುಡುಗ ಯಾಕೆ ಕೇಸರಿ ಟಾವೆಲ್ ಹಾಕಿದ್ದಾನೆ. ಅದನ್ನು ತಗಿಸಿ” ಎಂದು ಏರುದನಿಯಲ್ಲಿ ಹರಿಕೃಷ್ಣ ಅವರಿಗೆ ಹೇಳಿ ಅಲ್ಲಿಂದ ಹೋರಟು ಹೋಗಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ ಎನ್ಐಎ ತನಿಖೆಗೆ ಒಪ್ಪಿಸಬೇಕು: ವಿಜಯೇಂದ್ರ

ಈ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ನಮ್ಮ ಜೊತೆ ಮತ್ತೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ನೀಡಬೆಕೇಂದು ಹರಿಕೃಷ್ಣ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ದೂರುದಾರ ಹರಿಕೃಷ್ಣ ಮಾತನಾಡಿ, ನಮ್ಮಲ್ಲಿ ಕೆಲಸ ಮಾಡುವ ಹುಡುಗ ಭಾನುವಾರ ಸಂಜೆ ತಲೆಗೆ ಕೇಸರಿ ಟವಲ್​ ಹಾಕೊಂಡಿದ್ದನು. ಅದೂ ಬೆವರು ಒರೆಸಿಕೊಳ್ಳಲು ಅಂತ ಹಾಕಿದ್ದು. ಆ ಸಮಯದಲ್ಲಿ ಒಬ್ಬ ಬಂದು ಯಾಕೆ ಕೇಸರಿ ಟವಲ್​ ಹಾಕೊಂಡಿದೀಯಾ ಅಂತ ಪ್ರಶ್ನೆ ಮಾಡಿದ್ದಾನೆ. ನಾನು ಕೂಡಲೆ ಹೋಗಿ ಗಲಾಟೆ ತಡಿಯುವ ಪ್ರಯತ್ನ ಮಾಡಿದೆ. ನಂತರ, ಏಕಾಏಕಿ ಹೊಡೆಯಲು ಶುರು ಮಾಡಿದರು. ನಾವು ಅನೇಕ ವರ್ಷಗಳಿಂದ ಬ್ಯುಸಿನೆಸ್ ಮಾಡುತ್ತಿದ್ದೇವೆ. ನಮ್ಮ ಏರಿಯಾದಲ್ಲಿ ನಾವು ಎಲ್ಲರೂ ಸಹಬಾಳ್ಬೆಯಿಂದ ಬದುಕುತ್ತಿದ್ದೇವೆ. ಇವರು ಯಾವ್ದೋ ಬೇರೆ ಏರಿಯಾದಿಂದ ಬಂದವರು, ಈ ಮುಂಚೆ ನಾವು ಅವರನ್ನ ಏರಿಯಾದಲ್ಲಿ ನೋಡಿಲ್ಲ. ಈಗ ನಮ್ಮ ಜೊತೆ ಅನೇಕರು ನಿಂತುಕೊಂಡಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದರು.

ವರದಿ: ವಿಕಾಸ್​ ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:23 am, Tue, 26 August 25