AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರೆವ್ಹಾ..! ಬೆಂಗಳೂರಿನಲ್ಲಿ ಓದಿದ ಹುಡುಗ ನೇಪಾಳದ ಮುಂದಿನ ಪ್ರಧಾನಿ

ನೇಪಾಳದ ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ದೊಡ್ಡ ರಾಜಕೀಯ ಕ್ರಾಂತಿ ನಡೆದಿದೆ. ಮಾಜಿ ಕಾಠ್ಮಂಡು ಮೇಯರ್ ಬಲೇಂದ್ರ ಶಾ ಅವರ ನೂತನ ಆರ್‌ಎಸ್‌ಪಿ ಪಕ್ಷ ಭಾರಿ ಮುನ್ನಡೆ ಸಾಧಿಸಿದೆ. ಕಳೆದ 18 ವರ್ಷಗಳ ರಾಜಕೀಯ ಅಸ್ಥಿರತೆಯಿಂದ ಬೇಸತ್ತ ಯುವ ಮತದಾರರು ಮತ್ತು ಜನಸಾಮಾನ್ಯರು ಸ್ಥಾಪಿತ ಪಕ್ಷಗಳನ್ನು ತಿರಸ್ಕರಿಸಿ, 35 ವರ್ಷದ ಬಲೇಂದ್ರ ಶಾ ಅವರನ್ನು ಬೆಂಬಲಿಸಿದ್ದಾರೆ. ಇದು ನೇಪಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಯುಗದ ಆರಂಭ ಎಂದು ವಿಶ್ಲೇಷಿಸಲಾಗಿದೆ.

ವಾರೆವ್ಹಾ..! ಬೆಂಗಳೂರಿನಲ್ಲಿ ಓದಿದ ಹುಡುಗ ನೇಪಾಳದ ಮುಂದಿನ ಪ್ರಧಾನಿ
ಬಲೇಂದ್ರ ಶಾ
ಅಕ್ಷಯ್​ ಪಲ್ಲಮಜಲು​​
|

Updated on: Mar 07, 2026 | 8:45 PM

Share

ಕಾಠ್ಮಂಡು, ಮಾ.7: ಕಳೆದ ವರ್ಷ ನಡೆದ ತೀವ್ರ ಸ್ವರೂಪದ ‘ಜೆನ್-ಜಿ’ (Gen Z) ಪ್ರತಿಭಟನೆಗಳ ನಂತರ ನಡೆದ ನೇಪಾಳದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ದೊಡ್ಡ ರಾಜಕೀಯ ಕ್ರಾಂತಿ ಸಂಭವಿಸಿದೆ. ರಾಪರ್ ಹಾಗೂ ಇಂಜಿನಿಯರ್ ಆಗಿದ್ದ, ಕಾಠ್ಮಂಡುವಿನ ಮಾಜಿ ಮೇಯರ್ ಬಲೇಂದ್ರ ಶಾ ಅವರ ನೂತನ ಪಕ್ಷವಾದ ಆರ್‌ಎಸ್‌ಪಿ (RSP) ಕ್ಲೀನ್ ಸ್ವೀಪ್ ಮಾಡುವತ್ತ ಹೆಜ್ಜೆ ಹಾಕಿದೆ. ಇನ್ನು ಬಲೇಂದ್ರ ಶಾ ಹಾಗೂ ಕರ್ನಾಟಕಕ್ಕೂ ಒಂದು ಸಂಬಂಧವಿದೆ. ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿ, ಅಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದರು. 2016 ಮತ್ತು 2018 ರ ನಡುವೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು.

ಒಟ್ಟು 165 ನೇರ ಚುನಾವಣಾ ಕ್ಷೇತ್ರಗಳ ಪೈಕಿ 161 ಕ್ಷೇತ್ರಗಳ ಮಾಹಿತಿ ಲಭ್ಯವಿದ್ದು, ಆರ್‌ಎಸ್‌ಪಿ ಈಗಾಗಲೇ 6 ಕ್ಷೇತ್ರಗಳಲ್ಲಿ ಜಯಗಳಿಸಿದೆ ಮತ್ತು ಬರೋಬ್ಬರಿ 110 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಖುದ್ದು ಬಲೇಂದ್ರ ಶಾ ಅವರು ಝಾಪಾ-5 ಕ್ಷೇತ್ರದಲ್ಲಿ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಓಲಿ ಅವರ ವಿರುದ್ಧ ಭಾರಿ ಮುನ್ನಡೆ ಸಾಧಿಸಿದ್ದಾರೆ. ಬಲೇನ್ 15,000ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರೆ, ಓಲಿ ಕೇವಲ 3,300 ಮತಗಳನ್ನು ಪಡೆದು ಹಿನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ಚುನಾವಣೆ ಭರವಸೆ ಘೋಷಣೆ ಮಾಡಿದ ವಿಜಯ್: ಮಹಿಳೆಯರಿಗೆ ಉಚಿತ ಬಸ್, ಮಗುವಿಗೆ ಚಿನ್ನದ ಉಂಗುರ

ಕಳೆದ 18 ವರ್ಷಗಳಲ್ಲಿ ನೇಪಾಳ 14 ಸರ್ಕಾರಗಳನ್ನು ಕಂಡಿದೆ. ಈ ರಾಜಕೀಯ ಅಸ್ಥಿರತೆಯಿಂದ ಬೇಸತ್ತಿದ್ದ ಯುವಜನತೆ ಮತ್ತು ಮತದಾರರು ಸ್ಥಾಪಿತ ಪಕ್ಷಗಳನ್ನು ತಿರಸ್ಕರಿಸಿ, 35 ವರ್ಷದ ಬಲೇನ್ ಅವರ ಕೈಹಿಡಿದಿದ್ದಾರೆ.ಸದ್ಯದ ಟ್ರೆಂಡ್ ಗಮನಿಸಿದರೆ ಬಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದು ನೇಪಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಯುಗದ ಆರಂಭ ಎಂದು ವಿಶ್ಲೇಷಿಸಲಾಗುತ್ತಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಸಿನಿಮಾ ಜರ್ನಿಗೆ ಬೆಂಬಲವಾಗಿ ನಿಂತ ಶಿವಣ್ಣನಿಗೆ ಧನ್ಯವಾದ ಹೇಳಿದ ವಿಜಯ್
ಸಿನಿಮಾ ಜರ್ನಿಗೆ ಬೆಂಬಲವಾಗಿ ನಿಂತ ಶಿವಣ್ಣನಿಗೆ ಧನ್ಯವಾದ ಹೇಳಿದ ವಿಜಯ್
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ
ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ