AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರ ಮೇಲೆ ಎಲ್ಲರಿಗೂ ನಂಬಿಕೆ ಹೆಚ್ಚು ಉಂಟಾಗಲಿದೆ

Daily Horoscope Mach 08: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ ಭಾನುವಾರ ಮಾತಿನಂದ ಘಾಸಿ, ತಪ್ಪಿನ ಅರಿವು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕರ್ತವ್ಯದಲ್ಲಿ ಚ್ಯುತಿ, ದಾನದಿಂದ ಹೆಮ್ಮೆ, ಆದಾಯಕ್ಕೆ ಪ್ರತಿಕೂಲ ಇವೆಲ್ಲ ಇಂದಿನ ಭವಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರ ಮೇಲೆ ಎಲ್ಲರಿಗೂ ನಂಬಿಕೆ ಹೆಚ್ಚು ಉಂಟಾಗಲಿದೆ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Mar 08, 2026 | 12:55 AM

Share

ಮೇಷ ರಾಶಿ :

ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ಕಂಡುಕೊಳ್ಳುವುದು ಅವಶ್ಯಕ. ಶಾರೀರಿಕ ಅಸೌಖ್ಯದ ಕೊರತೆ ಕಾಡಲಿದ್ದು ಔಷಧೋಪಚಾರವನ್ನು ಮಾಡುವಿರಿ. ಒಪ್ಪಂದವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಸ್ಥಿರತೆ‌ಯು ಕಾಣದ ಕಾರಣ ಬದಲಿಸುವಿರಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ನಿಮ್ಮ ಪಾಲಿಗೆ ಬಂದಿದ್ದನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ. ಬಂಧುಗಳ ಅನಿರೀಕ್ಷಿತ ಭೇಟಿಯಾಗಬಹುದು.

ವೃಷಭ ರಾಶಿ :

ಬಹುದಿನಗಳಿಂದ ಇದ್ದ ಚಿಂತೆ ದೂರವಾಗಲಿದೆ. ದಾನ ಕಾರ್ಯಗಳಲ್ಲಿ ಭಾಗಿಯಾಗಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ.‌ ಯಾರನ್ನೋ ಹಿಂದಿಕ್ಕಿ ಮುಂಬರುವ ಯೋಚನೆ ಸಾಧುವಾಗದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಅನಪೇಕ್ಷಿತ ವಿಚಾರದಲ್ಲಿ ಮೂಗುತೂರಿಸುವುದು ಬೇಡ.‌ ನಿಮ್ಮ‌ ಮಾತನಿಂದ ಇನ್ನೊಬ್ಬರನ್ನು ಘಾಸಿ ಮಾಡುವಿರಿ. ಕಿವಿಯ ನೋವಿನಿಂದ ಸಂಕಟವಾಗುವುದು. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸಿ ಸಿಗದೇ ಬೇಸರಗೊಳ್ಳುವಿರಿ.

ಮಿಥುನ ರಾಶಿ :

ಇಂದು ನಿಮಗೆ ಪ್ರಗತಿಯ ಹೊಸ ಮಾರ್ಗಗಳನ್ನು ಕಾಣುತ್ತವೆ. ಸಹಿಸಲಾಗದ ದೇಹಪೀಡೆಯಿಂದ ಒದ್ದಾಡುವಿರಿ. ಕೆಲವರು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ವೃತ್ತಿಯನ್ನು ಬಿಟ್ಟು ಹೆಚ್ಚಿನ ಆದಾಯದ ಕಡೆಗೆ ಗಮನಹರಿಸುವಿರಿ. ಎಲ್ಲರಿಂದ ದೂರವಾಗಲು ಬಯಸುವಿರಿ. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನೀವು ಮನೆಯನ್ನು ಖರೀದಿಸುವ ಅಲೋಚನೆಯಲ್ಲಿ ಇರುವಿರಿ.

ಕರ್ಕಾಟಕ ರಾಶಿ :

ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಮನಸ್ಸು ಚಂಚಲವಾಗಿ ಇರಬಹುದು. ಕುಟುಂಬ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಕಾರಣವಿಲ್ಲದೆ ಯಾರೊಂದಿಗೂ ಜಗಳವಾಡಬೇಡಿ. ಕೆಲವು ಸನ್ನಿವೇಶವನ್ನು ನೀವು ನಗಣ್ಯ ಮಾಡುವುದು ಉತ್ತಮ. ಸಂಗಾತಿಯ ಸಲಹೆಯನ್ನೂ ಪಡೆದು ಉತ್ತಮ ನಿರ್ಧಾರಕ್ಕೆ ಬನ್ನಿ. ಇಂದು ಸ್ತ್ರೀಯರಿಗೆ ಸೌಂದರ್ಯಪ್ರಜ್ಞೆಯು ಅಧಿಕವಾಗಿ ಇರುವುದು.

ಸಿಂಹ ರಾಶಿ :

ಉದ್ಯೋಗದಲ್ಲಿ ಅಭಿವೃದ್ಧಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಪಾಲುದಾರಿಕೆಯಲ್ಲಿ ಅಸಹಜ ಮಾತುಕತೆಗಳು ಬರಬಹುದು. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾದೀತು. ಕಣ್ಣಿನ ತೊಂದರೆಯು ಹೆಚ್ಚಾಗಬಹುದು. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಅಸಮಾಧಾನಗೊಳ್ಳಬಹುದು.

ಕನ್ಯಾ ರಾಶಿ :

ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ ಇಂದಿನ ಲಾಭವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸುಮ್ಮನೇ ನಿಮ್ಮಷ್ಟಕ್ಕೆ ಇರಿ. ವಾಹನದ ಕಾರಣ ಕಲಹವಾಗುವುದು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಇಟ್ಟುಕೊಳ್ಳುವುದು ಉತ್ತಮ. ಹಿರಿಯರ ತಿಳಿವಳಿಕೆಯು ಅಪಮಾನದಂತೆ ಕಾಣಬಹುದು.

ತುಲಾ ರಾಶಿ:

ಉದ್ಯೋಗ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ದಾಯಾದಿಗಳು ನಿಮ್ಮ ಮೇಲೆ ಅಪವಾದವನ್ನು ಮಾಡಬಹುದು. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ಇಂದು ಮೌಲ್ಯಯುತವಾದ ವಸ್ತುಗಳನ್ನು ಖರೀದಿಸುವಿರಿ.

ವೃಶ್ಚಿಕ ರಾಶಿ:

ಅನಿರೀಕ್ಷಿತ ಗೆಲುವಿನಿಂದ ಹಿಗ್ಗುವ ಅವಶ್ಯಕತೆ ಇಲ್ಲ. ವಿವಾಹಿತರ ಸಂಬಂಧ ಬಲಗೊಳ್ಳುತ್ತದೆ. ಪ್ರೇಮಿಗಳಿಗೆ ಈ ದಿನ ಆಹ್ಲಾದಕರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಪ್ರೀತಿ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸಿದ್ಧರಿರುವಿರಿ. ತಪ್ಪನ್ನು ನೀವು ಒಪ್ಪಿಕೊಳ್ಳಲಾರಿರಿ. ಸಹೋದರರ ನಡುವೆ ವಾಗ್ವಾದವು ಆಗಬಹುದು. ಇಂದಿನ ವ್ಯವಹಾರವು ಎಚ್ಚರಿಕೆಯಿಂದ ಇರಲಿ.

ಧನು ರಾಶಿ:

ನಿಮ್ಮ ಸಂಗಾತಿಯಿಂದ ನಿಮಗೆ ಕೆಲಸದಲ್ಲಿ ಬೆಂಬಲ ಸಿಗುತ್ತದೆ. ಮನಸ್ಸು ಅಪರಿಚಿತ ಭಯಗಳಿಂದ ಪೀಡಿತವಾಗಬಹುದು. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯದು. ಬಹಳ ದಿನಗಳ ಅನಂತರ ಮನೆಯಲ್ಲಿ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಬರಬಹುದು. ಸಣ್ಣ ವಿಚಾರಕ್ಕೆ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ.

ಮಕರ ರಾಶಿ:

ಆಪ್ತರಿಂದ ಅಮೂಲ್ಯ ಉಡುಗೊರೆ ಪಡೆಯುವ ಅವಕಾಶವಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನ ಬರಬಹುದು. ಸತ್ಯಸಂಗತಿಯನ್ನು ನಂಬುವ ಸ್ಥಿತಿಯಲ್ಲಿ ನೀವಿರಲಾರಿರಿ. ಇಂದು ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿ ಎಂಬ ನಿರೀಕ್ಷೆ ಬೇಡ. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿ ಅವರ ಮನಸ್ಸನ್ನು ನೋಯಿಸುವಿರಿ.

ಕುಂಭ ರಾಶಿ:

ಹೊಸ ಹೂಡಿಕೆಗಳನ್ನು ಮಾಡಲು ಈ ಸಮಯ ಶುಭವಾಗಿರುತ್ತದೆ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಇದರಿಂದಾಗಿ ಮನೆಯ ವಾತಾವರಣ ಸಂತೋಷವಾಗಿರುತ್ತದೆ. ನೀವು ಪ್ರೀತಿಯ ಮನಃಸ್ಥಿತಿಯಲ್ಲಿರುವಿರಿ. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ತೊಂದರೆ ಆಗಬಹುದು. ಬಂದ ಅವಕಾಶವನ್ನು ಬಿಟ್ಟು ಅನಂತರ ದುಃಖಿಸುವುದರಲ್ಲಿ ಅರ್ಥವಿರದು.

ಮೀನ ರಾಶಿ:

ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ಮುಟ್ಟುವ ಅವಕಾಶ ನಿಮಗೆ ಸಿಗಬಹುದು. ನೀವು ಉದ್ಯೋಗ ಮಾಡುತ್ತಿದ್ದರೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಸಾಧ್ಯತೆಯಿದೆ. ವ್ಯಾಪಾರ ಮಾಡುವವರು ಸಹ ದೊಡ್ಡ ಲಾಭ ಗಳಿಸಬಹುದು. ಸ್ವಾದಿಷ್ಟವಾದ ಭೋಜನದಿಂದ ಸಂತೃಪ್ತಿ ಇರಲಿದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಆತ್ಮೀಯರ ಭೇಟಿಯಿಂದ ನಿಮಗೆ ಸಮಾಧಾನ ಸಿಗಲಿದೆ. ಸಹೋದ್ಯೋಗಿಗಳ‌ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಶತ್ರುತ್ವ ಬರಬಹುದು. ಸಂತೋಷದ ಸಮಯವನ್ನು ನೆನಪಿಸಿಕೊಳ್ಳುವಿರಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಧ್ರುವ, ಕರಣ : ತೈತಿಲ, ಸೂರ್ಯೋದಯ – 06 – 37 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:03 – 18:33, ಯಮಗಂಡ ಕಾಲ 12:35 – 14:05, ಗುಳಿಕ ಕಾಲ 15:34 – 17:03

-ಲೋಹಿತ ಹೆಬ್ಬಾರ್ – 8762924271 (what’s app only)

Follow Us
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಸಿನಿಮಾ ಜರ್ನಿಗೆ ಬೆಂಬಲವಾಗಿ ನಿಂತ ಶಿವಣ್ಣನಿಗೆ ಧನ್ಯವಾದ ಹೇಳಿದ ವಿಜಯ್
ಸಿನಿಮಾ ಜರ್ನಿಗೆ ಬೆಂಬಲವಾಗಿ ನಿಂತ ಶಿವಣ್ಣನಿಗೆ ಧನ್ಯವಾದ ಹೇಳಿದ ವಿಜಯ್
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?