ಜನರ ವಿಶ್ವಾಸ ಉಳಿಸಿಕೊಳ್ಳಬೇಕಾದರೆ ರಾಜ್ಯಸರ್ಕಾರ ಧರ್ಮಸ್ಥಳ ಪ್ರಕರಣ ಎನ್ಐಎ ತನಿಖೆಗೆ ಒಪ್ಪಿಸಬೇಕು: ವಿಜಯೇಂದ್ರ
ಹಿಂದೂಗಳ ಭಾವನೆಗೆ ಧಕ್ಕೆಯುಂಟಾದಾಗ ಬಿಜೆಪಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದೆ, ಧರ್ಮಸ್ಥಳ ಹೂತಿಟ್ಟ ಶವಗಳ ಪ್ರಕರಣದಲ್ಲಿ ರಾಜಕಾರಣ ಮಾಡುವ ಉದ್ದೇಶ ಖಂಡಿತವಾಗಿಯೂ ಬಿಜೆಪಿ ನಾಯಕರಿಗಿಲ್ಲ, ಈ ಮಾತನ್ನು ನಾನು ಪದೇಪದೆ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ ವಿಜಯೇಂದ್ರ ಹಿಂದೂಗಳ ಭಾವನೆಗೆ ಘಾಸಿಯಾಗಿರುವುದಕ್ಕೆ ಧರ್ಮಸ್ಥಳದಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದರು.
ಬೆಂಗಳೂರು, ಆಗಸ್ಟ್ 25: ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದರೆ ಮತ್ತು ಧರ್ಮಸ್ಥಳ ಶವ ಹೂತಿಟ್ಟ ಆರೋಪ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕಾದರೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರವನ್ನು ಬಗ್ಗಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ, ಅದು ಹೇಗೆ ಎನ್ಐಎ ತನಿಖೆಗೆ ಸರ್ಕಾರ ಒಪ್ಪುವುದಿಲ್ಲ ಅಂತ ನಾವೂ ನೋಡ್ತೀವಿ ಅಂತ ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಎಚ್ಚರಿಜೆ ನೀಡಿದರು. ಬಾಯಿ ಮುಚ್ಚಿಕೊಂಡು ಕೂರಲು ನಾವೇನೂ ಕಾಂಗ್ರೆಸ್ ಪಕ್ಷವಲ್ಲ, ಕಾಂಗ್ರೆಸ್ಸಿಗರು ತಮ್ಮ ನಾಯಕರ ಬಾಯಿ ಮುಚ್ಚಿಸುವಲ್ಲಿ ನಿಸ್ಸೀಮರು ಎಂದು ವಿಜಯೇಂದ್ರ ಹೇಳಿದರು.
ಇದನ್ನು ಓದಿ: ಅನನ್ಯಾ ಭಟ್ ನಾಪತ್ತೆ ಪ್ರಕರಣ: ಎಸ್ಐಟಿಯಿಂದ ನೋಟಿಸ್ ಬರ್ತಿದ್ದಂತೆಯೇ ಕೇಸ್ ವಾಪಸ್ ಪಡೆಯುವೆ ಎಂದ ಸುಜಾತಾ ಭಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

