AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಮಾಸ್ಕ್​ಮ್ಯಾನ್ ಬಂಧನ; ನಮ್ಮ ಸರ್ಕಾರ ಯಾರ ಪರವೂ ಅಲ್ಲ, ಕೇವಲ ನ್ಯಾಯದ ಪರ: ಶಿವಕುಮಾರ್

ಧರ್ಮಸ್ಥಳ ಮಾಸ್ಕ್​ಮ್ಯಾನ್ ಬಂಧನ; ನಮ್ಮ ಸರ್ಕಾರ ಯಾರ ಪರವೂ ಅಲ್ಲ, ಕೇವಲ ನ್ಯಾಯದ ಪರ: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 23, 2025 | 12:02 PM

Share

Dharmasthala Masked Man Arrested: ತಮ್ಮ ಸರ್ಕಾರ ಯಾರ ಪರವೂ ಇಲ್ಲ, ಕೇವಲ ನ್ಯಾಯದ ಪರ, ಅದನ್ನು ಮೊದಲಿಂದ ಸ್ಪಷ್ಟಪಡಿಸಿದ್ದೇವೆ, ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ, ಅದು ಕೊನೆಗೊಂಡ ಮೇಲೆ ಎಲ್ಲ ನಿಚ್ಚಳವಾಗಲಿದೆ ಎಂದು ಶಿವಕುಮಾರ್ ಹೇಳಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ ಮತ್ತು ಗಿರೀಶ್ ಮಟ್ಟಣ್ಣನವರ್ ಮತ್ತು ಇತರರ ವಿರುದ್ಧ ಎಫ್​ಐಅರ್ ದಾಖಲಾಗಿದೆ.

ಬೆಂಗಳೂರು, ಆಗಸ್ಟ್ 23: ಅತ್ತ ಧರ್ಮಸ್ಥಳದಲ್ಲಿ ಮಾಸ್ಕ್​ಮ್ಯಾನ್ ಚಿನ್ನಯ್ಯನನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸುತ್ತಿದ್ದಂತೆಯೇ ರಾಜಕೀಯ ನಾಯಕರ (political leaders) ಪ್ರತಿಕ್ರಿಯೆಗಳು ಬರಲಾರಂಭಿಸಿವೆ, ನಗರದಲ್ಲಿ ಮಾಧ್ಯಮಗಳೊಡನೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ಹೂತಿಟ್ಟಿದ್ದಾಗಿ ಚಿನ್ನಯ್ಯ ಕ್ಲೇಮ್ ಮಾಡಿದಾಗ, ಬಿಜೆಪಿಯವರು ಏನೂ ಮಾತಾಡಿರಲಿಲ್ಲ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ತಾನು ಮತ್ತು ಸದನದಲ್ಲಿ ಬಾಲಕೃಷ್ಣ ಪ್ರಸ್ತಾಪ ಮಾಡಿದ ಬಳಿಕ ಫೆನ್ಸ್ ಸಿಟ್ಟರ್​ಗಳಾಗಿರುವ ಬಿಜೆಪಿಯವರು ಹೇಳಿಕೆ ನೀಡತೊಡಗಿದರು. ಅಸಲಿಗೆ ಧರ್ಮಸ್ಥಳದವರೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತನಿಖೆಗಾಗಿ ಆಗ್ರಹಿಸಿದ್ದರು ಮತ್ತು ತನಿಖೆಯ ವೇಳೆ ಸಹಕರಿಸಿದರು, ತಪ್ಪಿತಸ್ಥರ ವಿರುದ್ಧ ಕ್ರಮ ಖಂಡಿತವಾಗಿ ಜರುಗುತ್ತದೆ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವ ಸದನದಲ್ಲಿ ಹೇಳಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:   ಮಾಸ್ಕ್‌ಮ್ಯಾನ್ ಬಂಧನ: ಕೆಲ ಹೊತ್ತಲ್ಲೇ ಕೋರ್ಟ್​ಗೆ ಹಾಜರು ಸಾಧ್ಯತೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ