AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಅಪಘಾತದಲ್ಲಿ ಬಾಲಕ ಸಾವು: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ!

ಬಿಎಂಟಿಸಿ ಅಪಘಾತದಲ್ಲಿ ಬಾಲಕ ಸಾವು: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ!

ಗಂಗಾಧರ​ ಬ. ಸಾಬೋಜಿ
|

Updated on: Aug 25, 2025 | 1:26 PM

Share

ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಬಳಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ನಡೆದ ಬಿಎಂಟಿಸಿ ಅಪಘಾತದಲ್ಲಿ 11 ವರ್ಷದ ಶಬರೀಶ್ ಮೃತಪಟ್ಟಿದ್ದಾನೆ. ಬೈಕ್ ಅಪಘಾತದಲ್ಲಿ ಬಿದ್ದ ಕುಟುಂಬದ ಪಕ್ಕದಿಂದ ಹೋಗುತ್ತಿದ್ದ ಬಿಎಂಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರು, ಆಗಸ್ಟ್​ 25: ನಿನ್ನೆ ಸಜೆ 5 ಗಂಟೆ ಸುಮಾರಿಗೆ ಕೆ.ಆರ್​ ಮಾರ್ಕೆಟ್ ಬಳಿ ನಡೆದಿದ್ದ ಬಿಎಂಟಿಸಿ ಅಪಘಾತದ (BMTC bus accident) ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಪಘಾತದ ದೃಶ್ಯ ಎದೆ ಝಲ್​ ಎನ್ನುವಂತ್ತಿದೆ. ಬಿಎಂಟಸಿ ಚಕ್ರ ಹರಿದು 11 ವರ್ಷದ ಶಬರೀಶ್ ಮೃತಪಟ್ಟಿದ್ದ. ಚಿಕ್ಕಪ್ಪನ ಜೊತೆ ಹೂ ತರಲು ಬೈಕ್‌ನಲ್ಲಿ ಬಂದಿದ್ದಾಗ ಘಟನೆ ಸಂಭವಿಸಿತ್ತು. ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.