AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?

ಅಕ್ಷತಾ ವರ್ಕಾಡಿ
|

Updated on: Mar 07, 2026 | 4:25 PM

Share

ಡಾ. ಬಸವರಾಜ ಗುರೂಜಿ ಅವರು 2026ರ ಯುಗಾದಿಯ ವೃಷಭ ರಾಶಿ ಭವಿಷ್ಯವನ್ನು ವಿವರಿಸಿದ್ದಾರೆ. ಈ ವರ್ಷ ಆದಾಯದಲ್ಲಿ ಏರಿಕೆ, ಆರ್ಥಿಕವಾಗಿ ಸುಧಾರಣೆ, ಹೊಸ ಯೋಜನೆಗಳಿಗೆ ಬೆಂಬಲ, ಹಾಗೂ ರಾಜಕೀಯ ಮತ್ತು ವೃತ್ತಿಪರ ಪ್ರಗತಿ ನಿರೀಕ್ಷಿಸಲಾಗಿದೆ. ಮಹಿಳೆಯರಿಗೆ ವಿಶೇಷವಾಗಿ ಶುಭ ಫಲಗಳು ದೊರೆಯಲಿದ್ದು, ಆರೋಗ್ಯ ಮತ್ತು ಸಂಬಂಧಗಳಲ್ಲಿ ಎಚ್ಚರಿಕೆ ಅಗತ್ಯ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಪರಾಭವನಾಮ ಸಂವತ್ಸರದ ವೃಷಭ ರಾಶಿಯ ವಾರ್ಷಿಕ ಭವಿಷ್ಯವನ್ನು ಇಲ್ಲಿ ವಿವರಿಸಿದ್ದಾರೆ. ಈ ವರ್ಷದಲ್ಲಿ ಗುರು ಗ್ರಹವು ಎರಡರಿಂದ ಮೂರನೇ ಮನೆಗೆ, ಶನಿ ಹನ್ನೊಂದರಲ್ಲಿ, ರಾಹು ಹತ್ತರಿಂದ ಒಂಬತ್ತಕ್ಕೆ ಮತ್ತು ಕೇತು ನಾಲ್ಕರಿಂದ ಮೂರನೇ ಮನೆಗೆ ಸಂಚರಿಸಲಿದೆ.

ವೃಷಭ ರಾಶಿಯವರಿಗೆ ಈ ವರ್ಷ ಆದಾಯದಲ್ಲಿ ಏರಿಕೆ ಕಂಡುಬರಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಯೋಜನೆಗಳಿಗೆ ಮನ್ನಣೆ ಸಿಗುತ್ತದೆ ಹಾಗೂ ಗುತ್ತಿಗೆದಾರರು, ಸಂಗೀತಗಾರರು, ಶಿಕ್ಷಕರು, ಎಂಜಿನಿಯರ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಸರ್ಕಾರಿ ನೌಕರರಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ರಾಜಕೀಯದಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ ಸಹ ಸಾಧ್ಯ. ಮಹಿಳೆಯರಿಗೆ ವೃತ್ತಿ ಕ್ಷೇತ್ರದಲ್ಲಿ ಬಡ್ತಿ, ಆಸ್ತಿ ವಿಷಯದಲ್ಲಿ ಶುಭ ಫಲಗಳು ದೊರೆಯಲಿವೆ. ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದಾದರೂ, ದೈವಾನುಗ್ರಹ ಉತ್ತಮವಾಗಿದೆ. ವರ್ಷದ ಉತ್ತರಾರ್ಧವು ಹೆಚ್ಚು ಶುಭಕರವಾಗಿರುತ್ತದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us