ಗಣೇಶ ಮೆರವಣಿಗೆ: ಬೆಂಗಳೂರಿನ ಈ ಏರಿಯಾಗಳಿಂದ ಯಲಹಂಕಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ಬಂದ್
ಯಲಹಂಕ ನ್ಯೂಟೌನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಆಗಸ್ಟ್ 31 ರಂದು ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಇದರಿಂದಾಗಿ ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ. ಬೆಳಿಗ್ಗೆ 9 ರಿಂದ ರಾತ್ರಿ 10 ರವರೆಗೆ ಯಲಹಂಕಕ್ಕೆ ಹೋಗುವ ಹಲವು ರಸ್ತೆಗಳನ್ನು ಮುಚ್ಚಲಾಗಿದೆ. ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಜಾಲಹಳ್ಳಿ, ಪೀಣ್ಯ, ಯಶವಂತಪುರ ಮುಂತಾದ ಪ್ರದೇಶಗಳಿಂದ ಬರುವವರು ಪರ್ಯಾಯ ಮಾರ್ಗಗಳನ್ನು ಬಳಸುವುದು ಅವಶ್ಯಕ.

ಬೆಂಗಳೂರು, ಆಗಸ್ಟ್ 28: ಯಲಹಂಕ (Yalahanka) ನ್ಯೂಟೌನ್, ಸಿಂಗಾಪುರ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ, ವಿದ್ಯಾರಣ್ಯಪುರ ಪ್ರದೇಶಗಳ ಆಗಸ್ಟ್ 31 ರಂದು ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ (Ganesh Procession) ನಡೆಯಲಿದೆ. ಸಿಂಗಾಪುರ ಲೇಔಟ್ನಿಂದ ದೊಡ್ಡಬೊಮ್ಮಸಂದ್ರ ಕೆರೆಯವರೆಗೆ ಎರಡು ಪ್ರತ್ಯೇಕ ಗಣೇಶ ವಿಸರ್ಜನಾ ಮೆರವಣಿಗೆ ಸಾಗಲಿದೆ. ಮತ್ತು ಸಂಭ್ರಮ್ ಕಾಲೇಜು ಆರ್ಚ್ನಿಂದ ಅಲ್ಲಾಳಸಂದ್ರ ಕೆರೆಯವರೆಗೆ ಮತ್ತೊಂದು ಮೆರವಣಿಗೆ ಸಾಗಲಿದೆ. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಸಂಚಾರ ದಟ್ಟಣೆಯನ್ನು ತಪ್ಪಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಬೆಳಿಗ್ಗೆ 09 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಸಂಚಾರ ನಿರ್ಬಂಧ
ಜಾಲಹಳ್ಳಿ, ಪೀಣ್ಯ, ಯಶವಂತಪುರ, ವಿಜಯನಗರ, ಕೆಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಯಲಹಂಕಕ್ಕೆ ಚಲಿಸುವ ಎಲ್ಲ ವಾಹನಗಳನ್ನು ನಿರ್ಬಂಧಿಸಲಾಗಿದೆ. ಎಂಎಸ್ ಪಾಳ್ಯ-ಜೆಲ್ಲಿ ಮಿಷನ್ ಕ್ರಾಸ್-ಜಿಕೆವಿಕೆ ಬ್ಯಾಕ್ ಗೇಟ್ – ತಿರುಮಲ ಧಾಬಾ – ಅತ್ತೂರು ಜಂಕ್ಷನ್ ಮದರ್ ಡೈರಿ ಜಂಕ್ಷನ್ ನಿಂದ ಬೆಳಿಗ್ಗೆ 09 00 ರಿಂದ ರಾತ್ರಿ 10 00 ರವರೆಗೆ ಚಲಿಸುವುದನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಅಪಘಾತಕ್ಕೆ ಬ್ರೇಕ್ ಹಾಕಲು ಬಿಎಂಟಿಸಿಯ ಬಸ್ ಚಾಲಕರಿಗೆ ವಿಶೇಷ ತರಬೇತಿ
ಟ್ವಿಟರ್ ಪೋಸ್ಟ್
Sunday 31 Aug full day Ganesha procession at yelanka Hegde nagar Nagavara junction…there will be traffic restrictions @blrcitytraffic @DCPTrNorthBCP @Hennurutrps1234 @yelahankatrfps @BlrCityPolice pic.twitter.com/ULWW0sulJJ
— ACP Traffic Northeast Pradeep (@acpnortheasttr) August 27, 2025
ಬದಲಿ ಮಾರ್ಗಗಳು
- ಜಾಲಹಳ್ಳಿ, ಪೀಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಯಲಹಂಕ ಕಡೆಗೆ ಚಲಿಸುವ ಎಲ್ಲಾ ವಾಹನಗಳು ಗಂಗಮ್ಮ ವೃತ್ತದಲ್ಲಿ ಬಲ ತಿರುವು ಪಡೆಯಬೇಕು – ಬಿಇಎಲ್ ವೃತ್ತ – ಎಡ ತಿರುವು ಪಡೆದು – ದೊಡ್ಡಬೊಮ್ಮಸಂದ್ರ ಕಮಾನು – ನಂಜಪ್ಪ ವೃತ್ತ – ತಿಂಡ್ಲು ಮುಖ್ಯ ರಸ್ತೆ – ಜಿಕೆವಿಕೆ ಡಬಲ್ ರಸ್ತೆಯಲ್ಲಿ ಎಡ ತಿರುವು ಪಡೆದು – ಜಿಕೆವಿಕೆ ಬ್ಯಾಕ್ ಗೇಟ್ ಬಲ ತಿರುವು ಪಡೆಯಬೇಕು – ಉನ್ನಿಕೃಷ್ಣ ಮುಖ್ಯ ರಸ್ತೆ ಮೂಲಕ ಯಲಹಂಕ ತಲುಪಬಹುದು.
- ಯಶವಂತಪುರ, ವಿಜಯನಗರ, ಕೆಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಯಲಹಂಕ ಕಡೆಗೆ ಚಲಿಸುವ ಎಲ್ಲ ವಾಹನಗಳು ಬಿಇಎಲ್ ವೃತ್ತದಲ್ಲಿ ಬಲ ತಿರುವು ಪಡೆಯಬೇಕು – ದೊಡ್ಡಬೊಮ್ಮಸಂದ್ರ ಕಮಾನು – ನಂಜಪ್ಪ ವೃತ್ತ – ತಿಂಡ್ಲು ಮುಖ್ಯ ರಸ್ತೆ – ಜಿಕೆವಿಕೆ ಡಬಲ್ ರಸ್ತೆ ಎಡ ತಿರುವು ಪಡೆಯಬೇಕು – ಜಿಕೆವಿಕೆ ಬ್ಯಾಕ್ ಗೇಟ್ ಬಲ ತಿರುವು ಪಡೆಯಬೇಕು – ಉನ್ನಿಕೃಷ್ಣ ಮುಖ್ಯ ರಸ್ತೆ ಮೂಲಕ ಯಲಹಂಕ ತಲುಪಬೇಕು.
- ಯಲಹಂಕದಿಂದ ಯಶವಂತಪುರ, ವಿಜಯನಗರ, ಕೆಂಗೇರಿ, ಜಾಲಹಳ್ಳಿ, ಪೀಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಯಲಹಂಕ ಕಡೆಗೆ ಹೋಗುವಾಗ ಜಿಕೆವಿಕೆ ಹಿಂಭಾಗದ ಗೇಟ್ ಜಿಕೆವಿಕೆ ಡಬಲ್ ರಸ್ತೆ ತಿಂಡ್ಲು ಕ್ರಾಸ್ ಬಳಿ ಎಡ ತಿರುವು ಪಡೆದು ನಂಜಪ್ಪ ವೃತ್ತದ ಮುಖ್ಯ ರಸ್ತೆ – ದೊಡ್ಡಬೊಮ್ಮಸಂದ್ರ ಕಮಾನು – ಬಿಇಎಲ್ ವೃತ್ತ ಮೂಲಕ ಯಶವಂತಪುರ, ವಿಜಯನಗರ, ಕೆಂಗೇರಿ, ಜಾಲಹಳ್ಳಿ, ಪೀಣ್ಯ ತಲುಪಬಹುದು.




