AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಜನರೇ ಎಚ್ಚರ… ಹೆಸ್ಕಾಂ ಎಂದು ಹೇಳಿಕೊಂಡು ಮನೆಗೆ ಬರ್ತಾರೆ ನಕಲಿ ಬಿಲ್ ಕಲೆಕ್ಟರ್

ಹುಬ್ಬಳ್ಳಿಯ ಆನಂದ ನಗರದಲ್ಲಿ ಹೆಸ್ಕಾಂ ನಕಲಿ ಬಿಲ್ ಕಲೆಕ್ಟರ್ ಬಂಧನವಾಗಿದೆ. ಸಮವಸ್ತ್ರ ಧರಿಸಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದ ಈ ವಂಚಕನನ್ನು ಸಾರ್ವಜನಿಕರು ಸಮಯಪ್ರಜ್ಞೆಯಿಂದ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಣ ನೀಡಿ ರಸೀದಿ ಕೇಳಿದಾಗ ಸರ್ವರ್ ಡೌನ್ ಎಂದು ನಂಬಿಸುತ್ತಿದ್ದ. ಇಂತಹ ವಂಚನೆಗಳಿಂದ ರಕ್ಷಿಸಿಕೊಳ್ಳಲು, ಹೆಸ್ಕಾಂ ಸಿಬ್ಬಂದಿಯ ಗುರುತಿನ ಚೀಟಿ ಪರಿಶೀಲಿಸಿ ಮತ್ತು ಹಣ ಪಾವತಿಸಿದ ತಕ್ಷಣ ರಸೀದಿ ಪಡೆಯಿರಿ ಎಂದು ಇಲಾಖೆ ಎಚ್ಚರಿಸಿದೆ.

ಹುಬ್ಬಳ್ಳಿ ಜನರೇ ಎಚ್ಚರ... ಹೆಸ್ಕಾಂ ಎಂದು ಹೇಳಿಕೊಂಡು ಮನೆಗೆ ಬರ್ತಾರೆ ನಕಲಿ ಬಿಲ್ ಕಲೆಕ್ಟರ್
ನಕಲಿ ಬಿಲ್ ಕಲೆಕ್ಟರ್
ಸಂಜಯ್ಯಾ ಚಿಕ್ಕಮಠ
| Edited By: |

Updated on:Mar 02, 2026 | 3:00 PM

Share

ಹುಬ್ಬಳ್ಳಿ, ಮಾ.2: ಹುಬ್ಬಳ್ಳಿಯ ಆನಂದ ನಗರದಲ್ಲಿ ವಂಚನೆಯ ವಿಭಿನ್ನ ಹಾದಿ ತುಳಿದಿದ್ದ ಖದೀಮನೊಬ್ಬ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಪೊಲೀಸರ ಅತಿಥಿಯಾಗಿದ್ದಾನೆ. ತಾನು ಹೆಸ್ಕಾಂ (HESCOM) ಬಿಲ್ ಕಲೆಕ್ಟರ್ ಎಂದು ಸುಳ್ಳು ಹೇಳಿ ಮನೆಮನೆಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಕಲೆಕ್ಟರ್‌ನನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ಈ ಘಟನೆ ನಡೆದಿದೆ. ಖದೀಮನು ಖಾಕಿ ಸಮವಸ್ತ್ರ ಧರಿಸಿ, ತಾನು ವಿದ್ಯುತ್ ಬಿಲ್ ವಸೂಲಿ ಮಾಡಲು ಬಂದಿರುವುದಾಗಿ ನಂಬಿಸಿದ್ದಾನೆ.

ಮನೆ ಮನೆಗೆ ಹೋಗಿ ಬಿಲ್ ಬಾಕಿ ಇದೆ ಎಂದು ಹೇಳಿ 1,000 ರೂ. ದಿಂದ 2,000 ರೂ. ವರೆಗೆ ಹಣ ವಸೂಲಿ ಮಾಡುತ್ತಿದ್ದ. ಗ್ರಾಹಕರು ರಸೀದಿ ಕೇಳಿದಾಗ “ಈಗ ಸರ್ವರ್ ಡೌನ್ ಇದೆ, ನಾಳೆ ತಂದು ಕೊಡುತ್ತೇನೆ” ಎಂದು ನಂಬಿಸಿ ಹಣದೊಂದಿಗೆ ಪರಾರಿಯಾಗುತ್ತಿದ್ದ. ಹಲವು ಮನೆಗಳಲ್ಲಿ ಹಣ ಪಡೆದ ಬಳಿಕವೂ ರಸೀದಿ ನೀಡದಿದ್ದಾಗ ಅನುಮಾನಗೊಂಡ ಸ್ಥಳೀಯರು ಆತನನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಹೆಸ್ಕಾಂ ಸಿಬ್ಬಂದಿ ಅಲ್ಲ ಎಂಬುದು ಬಹಿರಂಗವಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಮುಳ್ಳುಹಂದಿಯ ಡೆಡ್ಲಿ ಅಟ್ಯಾಕ್​ಗೆ ಚಿರತೆ ಸಾವು!

ವಿಡಿಯೋ ಇಲ್ಲಿದೆ ನೋಡಿ:

ತಕ್ಷಣವೇ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹಳೆ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಹೆಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ಕಡ್ಡಾಯವಾಗಿ ಅಧಿಕೃತ ಗುರುತಿನ ಚೀಟಿ (ID Card) ಕೇಳಿ. ಹಣ ಪಾವತಿಸಿದ ತಕ್ಷಣ ಡಿಜಿಟಲ್ ಅಥವಾ ಭೌತಿಕ ರಸೀದಿ ಪಡೆಯಿರಿ. ಯಾವುದೇ ಅನುಮಾನವಿದ್ದರೆ ತಕ್ಷಣ ಸ್ಥಳೀಯ ಹೆಸ್ಕಾಂ ಕಚೇರಿ ಸಂಪರ್ಕಿಸಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 am, Mon, 2 March 26

Follow Us
ಉತ್ತರ ಪ್ರದೇಶದ ಸಹರಾನ್‌ಪುರದ ವನ್ಯಜೀವಿ ಕಾರಿಡಾರ್‌ಗೆ ಪ್ರಧಾನಿ ಮೋದಿ ಭೇಟಿ
ಉತ್ತರ ಪ್ರದೇಶದ ಸಹರಾನ್‌ಪುರದ ವನ್ಯಜೀವಿ ಕಾರಿಡಾರ್‌ಗೆ ಪ್ರಧಾನಿ ಮೋದಿ ಭೇಟಿ
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ