ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.
ಬರದಲ್ಲಿ ಭಾರವಾದ ಜಾನುವಾರುಗಳು: ಮೇವು, ನೀರಿಲ್ಲದೇ ಮಾರಾಟಕ್ಕೆ ಮುಂದಾದ ರೈತರು
ಈ ಬಾರಿ ಕರ್ನಾಟಕದಲ್ಲಿ ಭೀಕರ ಬರ ಆವರಿಸಿದೆ. ಮುಂಗಾರು ಕೈಕೊಟ್ಟಿದ್ದರಿಂದ ಬೆಳೆಗಳಿಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವು-ನೀರಿನ ಕೊರತೆ ತಲೆದೋರಿದ್ದು, ತಮ್ಮ ಮಕ್ಕಳಂತೆ ಸಾಕಿದ್ದ ಜಾನುವಾರುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಗೋಶಾಲೆ, ಮೇವು ಬ್ಯಾಂಕ್ ಆರಂಭಿಸುವಂತೆ ಆಗ್ರಹಿಸಲಾಗಿದೆ.
- Sanjayya Chikkamath
- Updated on: Oct 8, 2026
- 4:01 pm
ನೈರುತ್ಯ ರೈಲ್ವೆಯಿಂದ ದಸರಾಗೆ ವಿಶೇಷ ಟ್ರೈನ್ ವ್ಯವಸ್ಥೆ: ಇಲ್ಲಿದೆ 5 ರೈಲುಗಳ ವೇಳಾಪಟ್ಟಿ
ನಾಡಿನೆಲ್ಲಡೆ ದಸರಾ ಹಬ್ಬದ ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅದರಲ್ಲೂ ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈರುತ್ಯ ರೈಲ್ವೆಯು ವಿವಿಧ ನಿಲ್ದಾಣಗಳ ನಡುವೆ ಹೆಚ್ಚುವರಿ ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಹಾಗಾದ್ರೆ, ದಸರಾ ಹಬ್ಬದ ಪ್ರಯುಕ್ತ ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರ ಎಲ್ಲಿಂದ ಎಲ್ಲಿಗೆ ಮಾಡಲಿವೆ ಎನ್ನುವ ಡಿಟೇಲ್ಸ್ ಇಲ್ಲಿದೆ.
- Sanjayya Chikkamath
- Updated on: Oct 6, 2026
- 9:49 pm
ಬೆಂಗಳೂರು – ಬೆಳಗಾವಿ ನಡುವೆ ವಿಶೇಷ ರೈಲು: ಆರೇಳು ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲ
ವಾರಾಂತ್ಯ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ನೈರುತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಬೆಳಗಾವಿ ನಡುವೆ ಎರಡೂ ಮಾರ್ಗಗಳಲ್ಲಿ ತಲಾ ಒಂದು ವಿಶೇಷ ಎಕ್ಸ್’ಪ್ರೆಸ್ ರೈಲು ಸಂಚಾರ ಓಡಿಸುತ್ತಿದೆ. ಯಾವಾಗಿನಿಂದ ರೈಲು ಸಂಚಾರ ಪ್ರಾರಂಭ ಎನ್ನುವ ವೇಳಾಪಟ್ಟಿ ಈ ಕೆಳಗಿನಂತಿದೆ.
- Sanjayya Chikkamath
- Updated on: Oct 6, 2026
- 9:01 pm
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಗಬ್ಬೂರಿನ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಮತ್ತೊಮ್ಮೆ ದುಸ್ಸಾಹಸ ನಡೆದಿದೆ. ಕಳ್ಳರು ಬೆಳ್ಳಿ ಆಭರಣ ಹಾಗೂ ಹಣ ಕದ್ದು, ಜೈನ ಮುನಿಗಳ ಮೂರ್ತಿಯ ಕಿರೀಟ ಧರಿಸಿ ನೃತ್ಯ ಮಾಡಿ ಅಪಹಾಸ್ಯ ಮಾಡಿದ್ದಾರೆ. ಇದು ಸಮುದಾಯದಲ್ಲಿ ಆತಂಕ ಮೂಡಿಸಿದ್ದು, ತಪ್ಪಿತಸ್ಥರ ಪತ್ತೆಗೆ ಜೈನ ಮುಖಂಡರು ಆಗ್ರಹಿಸಿದ್ದಾರೆ.
- Sanjayya Chikkamath
- Updated on: Oct 6, 2026
- 2:30 pm
ಹುಬ್ಬಳ್ಳಿ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಯುವತಿ ನೃತ್ಯಕ್ಕೆ ತೀವ್ರ ಆಕ್ರೋಶ; ಆಯೋಜಕರ ವಿರುದ್ಧ ದೂರು
ಹುಬ್ಬಳ್ಳಿ ನವನಗರದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಮಹಾರಾಷ್ಟ್ರ ಮೂಲದ ಯುವತಿಯಿಂದ ನೃತ್ಯ ಮಾಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನೃತ್ಯ ಕಾರ್ಯಕ್ರಮದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಯೋಜಕರು ಹಾಗೂ ನೃತ್ಯಗಾರ್ತಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
- Sanjayya Chikkamath
- Updated on: Oct 5, 2026
- 5:15 pm
ಹುಬ್ಬಳ್ಳಿಯ ಜೈನ ಮಂದಿರದಲ್ಲಿ ದರೋಡೆ: ಮುಸುಕುಧಾರಿಗಳಿಂದ ದೇವರ ಕಿರೀಟ, ಚಿನ್ನಾಭರಣ ಲೂಟಿ, ಮೂರ್ತಿ ಧ್ವಂಸ!
ಹುಬ್ಬಳ್ಳಿಯ ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಮುಸುಕುಧಾರಿಗಳಿಂದ ಕಳ್ಳತನ ನಡೆದಿದೆ. ಮೂವರು ಕಳ್ಳರು ರಾಡ್ ಬಳಸಿ ದ್ವಾರ ಮುರಿದು ಒಳನುಗ್ಗಿ, ದೇವರ ಚಿನ್ನಾಭರಣ, ಬೆಳ್ಳಿ ಮತ್ತು ನಗದನ್ನು ದೋಚಿದ್ದಾರೆ. ಮೂರ್ತಿಗೂ ಹಾನಿಯಾಗಿದ್ದು, ಇದು ಮೂರನೇ ಬಾರಿಗೆ ನಡೆದ ಕಳ್ಳತನವಾಗಿದೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- Sanjayya Chikkamath
- Updated on: Oct 5, 2026
- 2:13 pm
ಹುಬ್ಬಳ್ಳಿಯಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ!
ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಹುಬ್ಬಳ್ಳಿಯ ಸಾಯಿನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿ, ಪೊರಕೆ ಹಿಡಿದು ಕಸ ಗುಡಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತ ವಿಕಸಿತ ದೇಶವಾಗಲು ಸ್ವಚ್ಛತೆ ಮುಖ್ಯವಾಗಿದ್ದು, ಪ್ರಧಾನಿ ಮೋದಿ ಅವರ 25 ವರ್ಷಗಳ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಸೇವಾ ಸಪ್ತಾಹ' ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
- Sanjayya Chikkamath
- Updated on: Oct 2, 2026
- 10:22 am
ಎಂಎಸ್‌ಪಿ-ಎಫ್‌ಆರ್‌ಪಿ ಗೊಂದಲಕ್ಕೆ ಪ್ರಲ್ಹಾದ್ ಜೋಶಿ ಸ್ಪಷ್ಟನೆ; ಈ ವರ್ಷವೂ FRP ಹೆಚ್ಚಿಸುವ ಭರವಸೆ
ಕಬ್ಬು ಬೆಳೆಗಾರರ ಪ್ರತಿಭಟನೆ ಬೆನ್ನಲ್ಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಂಎಸ್‌ಪಿ ಮತ್ತು ಎಫ್‌ಆರ್‌ಪಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಎಂಎಸ್‌ಪಿ ಸಕ್ಕರೆಗೆ, ಎಫ್‌ಆರ್‌ಪಿ ಕಬ್ಬಿಗೆ ಅನ್ವಯಿಸುತ್ತದೆ ಎಂದಿರುವ ಅವರು, ಈ ವರ್ಷವೂ ಎಫ್‌ಆರ್‌ಪಿ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 12ರಂದು ರೈತ ಮುಖಂಡರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದೆ ಎಂದಿದ್ದಾರೆ.
- Sanjayya Chikkamath
- Updated on: Oct 1, 2026
- 7:31 am
ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧ ಎಂದ ಪ್ರಲ್ಹಾದ್ ಜೋಶಿ: ಸಮಸ್ಯೆಗಳ ಬಗ್ಗೆ ಚರ್ಚೆಗೆ ಆಹ್ವಾನ
ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತರ ಬೃಹತ್ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದ್ದು, ರೈತ ಮುಖಂಡರ ಜತೆ ಚರ್ಚೆಗೆ ಸಿದ್ಧ. ಅವರನ್ನು ಒಳಗೊಂಡಂತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವುದಾಗಿ ಜೋಶಿ ಹೇಳಿದ್ದಾರೆ.
- Sanjayya Chikkamath
- Updated on: Sep 29, 2026
- 2:17 pm
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ಗೆ 14 ದಿನ ನ್ಯಾಯಾಂಗ ಬಂಧನ, ಇಲ್ಲಿದೆ ಕೇಸಿನ ವಿವರ
ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ 2013ರಲ್ಲಿ ರೈಲು ತಡೆ ನಡೆಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದು, ಇಂದು (ಸೆಪ್ಟೆಂಬರ್ 28) ಹುಬ್ಬಳ್ಳಿ ಜೆಎಂಎಫ್ಸಿ ನ್ಯಾಯಾಲಯವು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
- Sanjayya Chikkamath
- Updated on: Sep 28, 2026
- 3:33 pm
ಭಾನುವಾರವೂ ಕಚೇರಿಗೆ ಹಾಜರ್! ಬಾಕಿ ಕಡತಗಳ ವಿಲೇವಾರಿ; ಕರ್ತವ್ಯ ಪ್ರಜ್ಞೆ ಮೆರೆದ ತಹಶೀಲ್ದಾರ್, ಸಿಬ್ಬಂದಿ
ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಭಾನುವಾರವೂ ಕೆಲಸಕ್ಕೆ ಹಾಜರಾಗಿ, ಬಾಕಿ ಉಳಿದಿದ್ದ ಸರ್ಕಾರಿ ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ರಜೆ ದಿನ ಸ್ವತಃ ತಹಶೀಲ್ದಾರ್ ಕೆಲಸಕ್ಕೆ ಹಾಜರಾಗಿದ್ದರೆ, ಅವರಿಗೆ 30ಕ್ಕೂ ಹೆಚ್ಚು ಸಿಬ್ಬಂದಿ ಸಾಥ್ ನೀಡಿದ್ದಾರೆ. ರಜಾ ದಿನವೂ ಕೆಲಸ ಮಾಡಲು ಕಾರಣವೇನು ಎಂದು ತಿಳಿಯಲು ಈ ಸ್ಟೋರಿ ಓದಿ.
- Sanjayya Chikkamath
- Updated on: Sep 27, 2026
- 6:32 pm
ಬರಗಾಲದ ನಡುವೆ ರೈತರಿಗೆ ವಂಚಕರ ಕಾಟ: ಸಬ್ಸಿಡಿ ಪೈಪ್ ಹೆಸರಲ್ಲಿ ಲಕ್ಷಾಂತರ ರೂ. ದೋಚುತ್ತಿರುವ ಜಾಲ!
ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ಸೈಬರ್ ವಂಚಕರ ಕಾಟ ಶುರುವಾಗಿದೆ. ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಪೈಪ್ ಮಂಜೂರಾಗಿದೆ ಎಂದು ಕರೆ ಮಾಡಿ, ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿರುವ ಜಾಲ ಪತ್ತೆಯಾಗಿದೆ. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ರೈತರು ಹಣ ಕಳೆದುಕೊಂಡಿದ್ದು, ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Sanjayya Chikkamath
- Updated on: Sep 27, 2026
- 8:24 am