AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

60 ಸಾವಿರದ ಕ್ಯಾಮರಾ ಆರ್ಡರ್​​ ಮಾಡಿದ್ದ ಉದ್ಯಮಿಗೆ ಶಾಕ್​​: ಬಾಕ್ಸ್​​ನಲ್ಲಿ ಬಂದಿದ್ದು ವಾಷಿಂಗ್​ ಪೌಡರ್​!

ಹುಬ್ಬಳ್ಳಿ ಮೂಲದ ಉದ್ಯಮಿಯೊಬ್ಬರು ಅಮೆಜಾನ್‌ನಲ್ಲಿ 60,990 ರೂ. ಬೆಲೆಯ ಕ್ಯಾಮರಾ ಆರ್ಡರ್ ಮಾಡಿದ್ದರು. ಆದರೆ ಡೆಲಿವರಿ ಆಗಿದ್ದು ಮಾತ್ರ ವಾಷಿಂಗ್ ಪೌಡರ್ ಪ್ಯಾಕೇಟ್‌ಗಳು. ಆನ್‌ಲೈನ್ ವಂಚನೆಯಿಂದ ಶಾಕ್ ಆಗಿರುವ ಉದ್ಯಮಿ ಈ ಬಗ್ಗೆ ಅಮೆಜಾನ್‌ಗೆ ದೂರು ನೀಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.

60 ಸಾವಿರದ ಕ್ಯಾಮರಾ ಆರ್ಡರ್​​ ಮಾಡಿದ್ದ ಉದ್ಯಮಿಗೆ ಶಾಕ್​​: ಬಾಕ್ಸ್​​ನಲ್ಲಿ ಬಂದಿದ್ದು ವಾಷಿಂಗ್​ ಪೌಡರ್​!
ಕ್ಯಾಮರಾ ಬದಲು ಬಂದ ವಾಷಿಂಗ್​​ ಪೌಡರ್​​ ತೋರಿಸುತ್ತಿರುವ ಉದ್ಯಮಿ
ಸಂಜಯ್ಯಾ ಚಿಕ್ಕಮಠ
| Edited By: |

Updated on:Feb 22, 2026 | 7:43 AM

Share

ಹುಬ್ಬಳ್ಳಿ, ಫೆಬ್ರವರಿ 22: ಏನೇ ವಸ್ತುಗಳನ್ನ ಖರೀದಿಸಬೇಕು ಅಂದ್ರೂ ಜನ ಅಂಗಡಿಗಳಿಗೆ ಹೋಗುವ ಬದಲು ಮೊಬೈಲ್​​ನಲ್ಲಿಯೇ ವಿವಿಧ ಶಾಪಿಂಗ್​​ ಆ್ಯಪ್​​ಗಳ ಮೂಲಕ ಅವನ್ನು ಆರ್ಡರ್​ ಮಾಡೋದು ಇತ್ತೀಚೆಗೆ ಟ್ರೆಂಡ್​​ ಆಗಿ ಮಾರ್ಪಟ್ಟಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವಂಚಕರು ವ್ಯವಸ್ಥೆಯ ದುರುಪಯೋಗವನ್ನೂ ದೊಡ್ಡ ಪ್ರಮಾಣದಲ್ಲಿಯೇ ಮಾಡುತ್ತಿದ್ದಾರೆ. ಆರ್ಡರ್​​ ಮಾಡಿರೋದು ಒಂದು ವಸ್ತುವಾದರೆ, ಗ್ರಾಹಕರ ಕೈಗೆ ತಲುಪೋದು ಮತ್ತೊಂದು ವಸ್ತು ಆಗಿರುತ್ತೆ. ಇಂತಹ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಇದೇ ರೀತಿ ಆನ್​​ಲೈನ್​​ ಮೂಲಕ ಕ್ಯಾಮರಾ ಆರ್ಡರ್​​ ಮಾಡಿದ್ದ ಉದ್ಯಮಿಯೋರ್ವರು ತಮಗೆ ಕಂಪನಿ ಡೆಲಿವರಿ ಮಾಡಿರೋದು ವಾಷಿಂಗ್​ ಪೌಡರ್ ಎಂಬ ಆರೋಪ ಮಾಡಿದ್ದಾರೆ.

ಹೌದು, ಶಾರ್ಜಾದಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಲ್ಫ್ರೆಡ್ ಎಂಬವರು ಆತ್ಮೀಯರೊಬ್ಬರಿಗೆ ಉಡುಗೊರೆಯಾಗಿ ನೀಡಲು ಅಮೆಜಾನ್​ನಲ್ಲಿ ಕ್ಯಾಮರಾ ಬುಕ್​​ ಮಾಡಿದ್ದರು. ಅದರಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನ ವಿಳಾಸಕ್ಕೆ ನಿನ್ನೆ ಕೊರಿಯರ್​​ ತಲುಪಿದೆ. ಅದನ್ನು ತೆರೆದು ನೋಡಿದಾಗ ಕ್ಯಾಮರಾ ಬದಲು, 2 ಪಾಕೆಟ್ ವಾಷಿಂಗ್ ಪೌಡರ್ ಇರೋದು ಕಂಡಿದೆ. ತಾನು ಆರ್ಡರ್​​ ಮಾಡಿದ್ದು 60,990 ರೂ. ಬೆಲೆಯ ಕ್ಯಾಮರಾ. ಆದರೆ ಅವರು ಕಳುಹಿಸಿರುವ ಈ ವಾಷಿಂಗ್ ಪೌಡರ್ ಪ್ಯಾಕೇಟ್​​ ನೋಡಿ ತನಗೆ ಶಾಕ್​​ ಆಗಿದೆ. ಈ ಬಗ್ಗೆ ಅಮೆಜಾನ್​ಗೆ ದೂರು ನೀಡಿದ್ರೂ ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಅಲ್ಫ್ರೆಡ್ ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ಮನಿ ಡಬ್ಲಿಂಗ್ ಹೆಸರಿನಲ್ಲಿ ನೂರಾರು ಕುಟುಂಬಳಿಗೆ ವಂಚನೆ; ಕೋಟ್ಯಂತರ ರೂ. ಸಹಿತ ಆರೋಪಿ ಪರಾರಿ

ಎರಡು ದಿನಗಳ ಹಿಂದೆ ತಾನು ಕ್ಯಾಮರಾ ಅರ್ಡರ್​​ ಮಾಡಿದ್ದೆ. ದುಬೈನಲ್ಲಿಯೂ ತಾನು ಅಮೆಜಾನ್​ ಮೂಲಕ ಅನೇಕ ಬಾರಿ ವಸ್ತುಗಳನ್ನು ಆರ್ಡರ್​​ ಮಾಡಿದ್ದು, ಅಲ್ಲಿ ಒಮ್ಮೆಯೂ ತನಗೆ ಈ ರೀತಿ ಮೋಸ ಆಗಿರಲಿಲ್ಲ. ಆದರೆ ಸ್ನೇಹಿತ ವೈದ್ಯನಿಗಾಗಿ ಪಾಕೆಟ್​​ ಕ್ಯಾಮರಾ ಆರ್ಡರ್​​ ಮಾಡಿದ್ದ ತಾನು ಈ ಬಾರಿ ಮೋಸ ಹೋಗಿದ್ದೇನೆ. ಕೊರಿಯರ್​​ ಬಾಕ್ಸ್​​ ಓಪನ್​​ ಮಾಡುವ ದೃಶ್ಯಗಳನ್ನೂ ತಾನು ಚಿತ್ರೀಕರಿಸಿದ್ದು, ವಂಚನೆಗೆ ಸಾಕ್ಷಿ ಸಮೇತ ಆರೋಪ ಮಾಡುತ್ತಿದ್ದೇನೆ ಎಂದು ಅಲ್ಫ್ರೆಡ್ ತಿಳಿಸಿದ್ದಾರೆ. ಬುಕ್​​ ರಿಲೀಸ್​​ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರ ಸ್ನೇಹಿತ, ಅತಿಥಿಗೆ ಉಡುಗೊರೆ ನೀಡಲೆಂದು ಅಲ್ಫ್ರೆಡ್ ಕ್ಯಾಮರಾ ಆರ್ಡರ್​​ ಮಾಡಿದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:41 am, Sun, 22 February 26

Follow Us
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ