AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!

Australia vs Bangladesh: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನಲ್ಲಿ 198 ರನ್​ಗಳಿಸಿದರೆ, ಬಾಂಗ್ಲಾದೇಶ್ ತಂಡ 426 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 284 ರನ್​ಗಳಿಸಿ ಆಲೌಟ್ ಆಯಿತು. ಇತ್ತ ಮೊದಲ ಇನಿಂಗ್ಸ್​ನಲ್ಲಿನ ಮುನ್ನಡೆಯೊಂದಿಗೆ ಕೇವಲ 57 ರನ್​ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Aug 16, 2026 | 11:09 AM

Share
ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ತರ ಇತಿಹಾಸ ಸೃಷ್ಟಿಯಾಗಿದೆ. ಟೆಸ್ಟ್ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾವನ್ನು ಅವರದ್ದೇ ತವರು ನೆಲದಲ್ಲಿ ಮಣಿಸುವುದು ಯಾವುದೇ ವಿದೇಶಿ ತಂಡಕ್ಕಾದರೂ ಅತ್ಯಂತ ಕಠಿಣ ಸವಾಲು. ಆದರೆ, ಬಾಂಗ್ಲಾದೇಶ್ ತಂಡವು ಆಸ್ಟ್ರೇಲಿಯಾ ಮಣ್ಣಿನಲ್ಲಿ ಅತ್ಯಂತ ವೇಗವಾಗಿ ಟೆಸ್ಟ್ ಗೆಲುವು ದಾಖಲಿಸಿದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. (PC: Getty Images)

1 / 5
ಡಾರ್ವಿನ್‌ನ ಮರಾರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಜ್ಮುಲ್ ಹೊಸೈನ್ ಶಾಂತೊ ನಾಯಕತ್ವದ ಬಾಂಗ್ಲಾದೇಶ್ ತಂಡವು ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಕೇವಲ ತನ್ನ 3ನೇ ಟೆಸ್ಟ್ ಪಂದ್ಯದಲ್ಲೇ ಚೊಚ್ಚಲ ಗೆಲುವಿನ ಸಿಹಿ ಸವಿದಿದೆ. (PC: Getty Images)

2 / 5
ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಏಷ್ಯಾದ ದೈತ್ಯ ತಂಡಗಳಾದ ಭಾರತ ಮತ್ತು ಪಾಕಿಸ್ತಾನ್ ದಶಕಗಳ ಕಾಲ ಕಾಯಬೇಕಾಗಿತ್ತು. ಆದರೆ ಬಾಂಗ್ಲಾದೇಶ್ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. (PC: Getty Images)

3 / 5
ಆಸ್ಟ್ರೇಲಿಯಾದಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಟೀಮ್ ಇಂಡಿಯಾ ಬರೋಬ್ಬರಿ 12 ಪಂದ್ಯಗಳವರೆಗೆ ಕಾಯಬೇಕಾಗಿತ್ತು. ಇನ್ನು ಪಾಕಿಸ್ತಾನ್ ತಂಡ ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲಿ ಮಣಿಸಿದ್ದು 7ನೇ ಪಂದ್ಯದ ಮೂಲಕ.  (PC: Getty Images)

4 / 5
ಇದೀಗ ಬಾಂಗ್ಲಾದೇಶ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ತಾನಾಡಿದ ಕೇವಲ 3ನೇ ಟೆಸ್ಟ್ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ತವರಿನಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಮಣಿಸಿದ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದಾಖಲೆಯೊಂದಿಗೆ ಭಾರತ, ಪಾಕಿಸ್ತಾನ್ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೂರನೇ ಏಷ್ಯನ್ ರಾಷ್ಟ್ರ ಎಂಬ ಕೀರ್ತಿಗೂ ಬಾಂಗ್ಲಾದೇಶ್ ಭಾಜನವಾಗಿದೆ. (PC: Getty Images)

5 / 5
Follow Us
ಶ್ರಾವಣ ಶನಿವಾರ: ದೊಡ್ಡಪೇಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಅದ್ದೂರಿ ಪೂಜೆ

10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!

‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ

ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!

ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ

ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ

ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ

ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ