ಬೆಂಗಳೂರು: ಹಾಲಿನ ದರ ಏರಿಕೆಯ ಚರ್ಚೆ ಬೆನ್ನಲ್ಲೇ 48 ಲೀಟರ್ ನಂದಿನಿ ಹಾಲು ಕದ್ದ ಕದೀಮರು!
ಬೆಂಗಳೂರಿನ ರಿಚ್ಮಂಡ್ ಟೌನ್‌ನಲ್ಲಿ 48 ಲೀಟರ್ ನಂದಿನಿ ಹಾಲು ಕ್ರೇಟ್‌ಗಳ ಸಮೇತ ಕಳ್ಳತನವಾಗಿದೆ. ಬೆಳಗಿನ ಜಾವ 4:58ಕ್ಕೆ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಲಿನ ದರ ಏರಿಕೆಯ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಈ ಕೃತ್ಯ ನಡೆದಿದ್ದು, ಕೆಎಂಎಫ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ದರ ಹೆಚ್ಚಳ ಕುರಿತು ಸಭೆ ನಡೆಯುವ ನಿರೀಕ್ಷೆಯಿದೆ. ಪ್ರತಿ ಲೀಟರ್‌ಗೆ ₹4-5 ಏರಿಕೆ ಬಹುತೇಕ ಖಚಿತವಾಗಿದೆ.
ಬೆಂಗಳೂರು, ಸೆಪ್ಟೆಂಬರ್ 25: ನಗರದಲ್ಲಿ ನಂದಿನಿ ಹಾಲಿನ ದರ ಏರಿಕೆ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿರುವಾಗಲೇ, ರಾಜಧಾನಿಯಲ್ಲಿ ಹಾಲಿನ ಕಳ್ಳತನದ ಅನಿರೀಕ್ಷಿತ ಪ್ರಕರಣವೊಂದು ವರದಿಯಾಗಿದೆ. ರಿಚ್ಮಂಡ್ ಟೌನ್‌ನಲ್ಲಿ ಕಳ್ಳರು ಕ್ರೇಟ್‌ಗಳ ಸಮೇತ 48 ಲೀಟರ್ ನಂದಿನಿ ಹಾಲನ್ನು ಕದ್ದೊಯ್ದಿದ್ದಾರೆ. ಅಶೋಕ್ ನಗರ ಠಾಣಾ ವ್ಯಾಪ್ತಿಯ ರಿಚ್ಮಂಡ್ ಟೌನ್‌ನ ರೆನಿಯಸ್ ಸ್ಟ್ರೀಟ್ ಬಳಿ ಬೆಳಗಿನ ಜಾವ ಸುಮಾರು 4:58ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಬಂದ ಕಳ್ಳರು ಈ ಕೃತ್ಯ ಎಸಗಿದ್ದು, ಹಾಲು ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ರಾಜ್ಯದಲ್ಲಿ ಹಾಲಿನ ದರ ಏರಿಕೆ ಬಹುತೇಕ ಖಚಿತವಾಗಿರುವ ಈ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 25, 2026 02:34 PM
Follow Us

