KMF Nandini
ಕರ್ನಾಟಕ ಹಾಲು ಒಕ್ಕೂಟ ಆರಂಭವಾಗಿ 50 ವರ್ಷ ಆಗಿದೆ. ವಿಶ್ವಬ್ಯಾಂಕ್ನ ಡೇರಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಹಾಯವಾಗಿ 1974-75ರಲ್ಲಿ ಕರ್ನಾಟಕ ಡೇರಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿತ್ತು. ಹತ್ತು ವರ್ಷದ ಬಳಿಕ ಅಂದರೆ 1984ರಲ್ಲಿ ಇದರ ಹೆಸರನ್ನು ಕರ್ನಾಟಕ ಮಿಲ್ಕ್ ಫೆಡರೇಶನ್ ಅಥವಾ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಎಂದು ಬದಲಿಸಲಾಯಿತು. ಕೆಎಂಎಫ್ನಲ್ಲಿ ಇವತ್ತು ರಾಜ್ಯದ ವಿವಿಧ 14 ಹಾಲು ಒಕ್ಕೂಟಗಳು ಒಳಗೊಂಡಿವೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಲು ಸಹಕಾರ ಸಂಸ್ಥೆಗಳಿದ್ದು ಬೃಹತ್ ನೆಟ್ವರ್ಕ್ ಆಗಿ ರೂಪುಗೊಂಡಿದೆ. ನಂದಿನಿ ಎಂಬುದು ಕೆಎಂಎಫ್ ಉತ್ಪನ್ನಗಳ ಕಾರ್ಪೊರೇಟ್ ಬ್ರ್ಯಾಂಡಿಂಗ್ ಆಗಿದೆ. 1983ರಲ್ಲಿ ನಂದಿನಿ ಹೆಸರನ್ನು ತನ್ನ ಉತ್ಪನ್ನಗಳ ಬ್ರ್ಯಾಂಡ್ ಆಗಿ ಕೆಎಂಎಫ್ ಘೋಷಿಸಿತು