AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾದಲ್ಲೂ 'KMF ನಂದಿನಿ' ಹವಾ

ಇನ್ಮುಂದೆ ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾದಲ್ಲೂ ‘KMF ನಂದಿನಿ’ ಹವಾ

Anil Kalkere
| Edited By: |

Updated on: Nov 25, 2025 | 2:24 PM

Share

ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾದಲ್ಲಿಯೂ ಇನ್ನು ಮುಂದೆ ಕೆಂಎಂಎಫ್​​ ನಂದಿನಿ ಹವಾ ಶೂರುವಾಗಲಿದೆ. ನಂದಿನಿ ತುಪ್ಪ ರಫ್ತು ಮಾಡುವ ವಾಹನಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸ ಕಾವೇರಿ ಬಳಿ ಚಾಲನೆ ನೀಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯ, ವಿದೇಶಗಳಲ್ಲಿಯೂ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಕೇಳಿ ಬರುತ್ತಿರೋದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.

ಬೆಂಗಳೂರು, ನವೆಂಬರ್​ 25: ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾಗೆ ನಂದಿನಿ ತುಪ್ಪ ರಫ್ತು ಮಾಡುವ ವಾಹನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಸಿಎಂ ಅಧಿಕೃತ ನಿವಾಸ ಕಾವೇರಿ ಬಳಿ ಕಾರ್ಯಕ್ರಮ ನಡೆದಿದ್ದು, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಎಂಡಿ ಶಿವಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ವೇಳೆ ಉಪಸ್ಥಿತರಿದ್ದರು.  ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿದೇಶಗಳಲ್ಲೂ ನಂದಿನಿ ತುಪ್ಪಕ್ಕೆ ದಿನೇದಿನೆ ಬೇಡಿಕೆ ಹೆಚ್ಚಾಗುತ್ತಿದೆ. ನಮ್ಮ ಜಿಲ್ಲೆಯ ಕುಮಾರ ಎಂಬುವರು ಅಮೆರಿಕದಲ್ಲಿ ನೆಲೆಸಿದ್ದು, ಅವರೇ ಕೆಎಂಎಫ್ ಏಜೆನ್ಸಿ ತೆಗೆದುಕೊಂಡಿದ್ದಾರೆ. ಕೆಎಂಎಫ್​ನ ನಂದಿನಿ ಉತ್ಪನ್ನಗಳು, ಏಜೆನ್ಸಿಯವರಿಗೆ ಒಳ್ಳೆಯದಾಗಲಿ ಎಂದು ಅವರು ಹಾರೈಸಿದ್ದಾರೆ. ನಂದಿನಿ ಹಾಲು, ತುಪ್ಪ, ಐಸ್ ಕ್ರೀಂ, ಸಿಹಿ ತಿನಿಸಿಗಳಿಗೆ ಬೇಡಿಕೆ ಹೆಚ್ಚಿವೆ. ದುಬೈನಲ್ಲೂ ನಂದಿನಿ ಐಸ್ ಕ್ರೀಂಗೆ ಡಿಮ್ಯಾಂಡ್​​ ಇದೆ. ನಂದಿನಿ ಹೆಸರಿನಲ್ಲಿ ನಕಲಿ‌ ತುಪ್ಪಗಳಿಗೆ ಕಡಿವಾಣ ಹಾಕಲಾಗುತ್ತೆ ಎಂದು ಇದೇ ವೇಳೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.