ಕೆಎಂಎಫ್ ದಸರಾ ಉಡುಗೊರೆ: ನಂದಿನಿ ಹಾಲಿನ ಉತ್ಪನ್ನಗಳ ದರ ಇಳಿಕೆ! ಹೊಸ ದರ ಪಟ್ಟಿ ಇಲ್ಲಿದೆ
Nandini Milk Products new Price list: ಕೇಂದ್ರ ಸರ್ಕಾರದ ಜಿಎಸ್ಟಿ ಸ್ಲ್ಯಾಬ್ ಪರಿಷ್ಕರಣೆಯಿಂದಾಗಿ ಕೆಎಂಎಫ್ ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಸೆಪ್ಟೆಂಬರ್ 22 ರಿಂದ ಹೊಸ ದರ ಜಾರಿಯಾಗಲಿದೆ. ತುಪ್ಪ, ಬೆಣ್ಣೆ, ಪನೀರ್, ಚೀಸ್ ಮತ್ತು ಐಸ್ ಕ್ರೀಮ್‌ಗಳ ದರ ಕಡಿಮೆಯಾಗಿದೆ. ಆದರೆ ಹಾಲು ಮತ್ತು ಮೊಸರಿನ ದರದಲ್ಲಿ ಬದಲಾವಣೆ ಇಲ್ಲ. ಹೊಸ ದರ ಪಟ್ಟಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 20: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (GST) ಸ್ಲ್ಯಾಬ್ ಪರಿಷ್ಕರಣೆ ಮಾಡಿದ ಕಾರಣ ಕರ್ನಾಟಕದಲ್ಲಿ (Karnataka) ನಂದಿನಿ ಉತ್ಪನ್ನಗಳ (Nandini Products) ದರವನ್ನು ಕೆಎಂಎಫ್ (KMF) ಇಳಿಕೆ ಮಾಡುತ್ತಿದೆ. ಸೆಪ್ಟೆಂಬರ್ 22 ರಿಂದ ಹೊಸ ದರ ಜಾರಿಗೆ ಬರಲಿದೆ. ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದು, ಗ್ರಾಹಕರಿಗೆ ದಸರಾ ಉಡುಗೊರೆ ನೀಡುತ್ತಿದ್ದವೆ ಎಂದಿದ್ದಾರೆ. ಪರಿಷ್ಕೃತ ದರ ವಿವರವನ್ನೂ ಹಂಚಿಕೊಂಡಿದ್ದಾರೆ.
ನಂದಿನಿ ಹಾಲು, ಮೊಸರು ದರ ಇಳಿಕೆ ಇಲ್ಲ
ನಂದಿನಿ ಹಾಲಿನ ಉತ್ಪನ್ನಗಳ ದರ ಮಾತ್ರ ಇಳಿಕೆಯಾಗಲಿದೆ. ಹಾಲು ಮತ್ತು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಿವಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಂದಿನಿ ಹಾಲಿನ ಉತ್ಪನ್ನಗಳ ಹೊಸ ದರ ಪಟ್ಟಿ (ರೂಪಾಯಿಗಳಲ್ಲಿ)
ನಂದಿನಿ ತುಪ್ಪ (1000 ಮಿ.ಲಿ ಪೌಚ್)
- 650 – ಹಳೆ ದರ
- 610 – ಹೊಸ ದರ
ಬೆಣ್ಣೆ – ಉಪ್ಪುರಹಿತ (500 ಮಿ.ಲಿ)
- 305- ಹಳೆ ದರ
- 286- ಹೊಸ ದರ
ಪನೀರ್ (1000 ಗ್ರಾಂ)
- 425 – ಹಳೆ ದರ
- 408 – ಹೊಸ ದರ
ಗುಡ್ ಲೈಫ್ ಹಾಲು (1 ಲೀಟರ್)
- 70 – ಹಳೆ ದರ
- 68 – ಹೊಸ ದರ
ಚೀಸ್ (1 ಕೆಜಿ)
- 480 – ಹಳೆ ದರ
- 450 – ಹೊಸ ದರ
ಚೀಸ್ – ಸಂಸ್ಕರಿಸಿದ್ದು
- 530- ಹಳೆ ದರ
- 497- ಹೊಸ ದರ
ಐಸ್ ಕ್ರೀಮ್‌ಗಳು – ವೆನಿಲ್ಲಾ ಟಬ್ (1000- ಮಿ.ಗ್ರಾಂ)
- 200- ಹಳೆ ದರ
- 178- ಹೊಸ ದರ
ಐಸ್ ಕ್ರೀಮ್ ಫ್ಯಾಮಿಲಿ ಪ್ಯಾಕ್ (5000ಮಿ.ಲಿ)
- 645- ಹಳೆ ದರ
- 574- ಹೊಸ ದರ
ಐಸ್ ಕ್ರೀಮ್ ಚಾಕೊಲೇಟ್ ಸಂಡೇ (500ಮಿ.ಲಿ)
- 115- ಹಳೆ ದರ
- 102- ಹೊಸ ದರ
ಐಸ್ ಕ್ರೀಮ್ – ಮ್ಯಾಂಗೋ ನ್ಯಾಚುರಲ್ಸ್ (100 ಗ್ರಾ)
- 35- ಹಳೆ ದರ
- 31- ಹೊಸ ದರ
ಕೇಂದ್ರ ಸರ್ಕಾರ ಸೆಪ್ಟೆಂಬರ್ 3 ರಂದಿ ಜಿಎಸ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿ ಘೋಷಣೆ ಮಾಡಿತ್ತು. ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಿ, ಶೇ 12 ಮತ್ತು ಶೇ 28ರ ಸ್ಲ್ಯಾಬ್‌ಗಳನ್ನು ರದ್ದು ಮಾಡಿತ್ತು. ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಂಡಿತ್ತು. ಇದರಿಂದ ಅನೇಕ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಪರಿಷ್ಕೃತ ಜಿಎಸ್ಟಿ ಸ್ಲ್ಯಾಬ್ಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುತ್ತಿದೆ. ಇದರ ಲಾಭವನ್ನು ಜನರಿಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿತ್ತು.ಅದರ ಬೆನ್ನಲ್ಲೇ ಕೆಎಂಎಫ್ ನಂದಿನಿ ಹಾಲಿನ ಉತ್ಪನ್ನಗಳ ದರ ಇಳಿಕೆ ಮಾಡಿದೆ.
ಇದನ್ನೂ ಓದಿ: ಜಿಎಸ್ಟಿ ಪರಿಷ್ಕರಣೆ; ಈ ವಸ್ತುಗಳಿಗೆ ನೀವಿನ್ನು ತೆರಿಗೆಯೇ ಪಾವತಿಸಬೇಕಿಲ್ಲ!
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Sat, 20 September 25



