ಗೋಣಿಬೀಡು ಬಳಿ ಕಾಫಿತೋಟದಲ್ಲಿ ಬೀಡುಬಿಟ್ಟ ಕಾಡಾನೆ ಭೀಮ
ಚಿಕ್ಕಮಗಳೂರಿನ ಗೋಣಿಬೀಡು ಸಮೀಪದ ಕಾಫಿ ತೋಟದಲ್ಲಿ ಕಾಡಾನೆ ಭೀಮ ಕಳೆದ ನಾಲ್ಕು ದಿನಗಳಿಂದ ಬೀಡುಬಿಟ್ಟಿದೆ. ಹಾಸನದ ಬೇಲೂರಿನಿಂದ ಬಂದ 30 ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟು ಭೀಮ ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಅರಣ್ಯ ಇಲಾಖೆ ಸ್ಥಳೀಯರಿಗೆ ಕಾಫಿ ತೋಟದ ಕೆಲಸಕ್ಕೆ ಹೋಗದಂತೆ ಸೂಚನೆ ನೀಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಚಿಕ್ಕಮಗಳೂರು, ಫೆಬ್ರವರಿ 28: ಗೋಣಿಬೀಡು ಸಮೀಪದ ಕಾಫಿ ತೋಟದ ಪ್ರದೇಶದಲ್ಲಿ ಕಾಡಾನೆ ಭೀಮ ಕಳೆದ ನಾಲ್ಕು ದಿನಗಳಿಂದ ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹಾಸನದ ಬೇಲೂರಿನಿಂದ ಬಂದ ಸುಮಾರು 30 ಕಾಡಾನೆಗಳ ಹಿಂಡು ಈ ಪ್ರದೇಶದಲ್ಲಿ ನೆಲೆಸಿದ್ದು, ಈ ಹಿಂಡಿನಿಂದ ಬೇರ್ಪಟ್ಟಿರುವ ಭೀಮ ಜನವಸತಿ ಪ್ರದೇಶಗಳು ಮತ್ತು ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿದೆ. ಈ ಹಿನ್ನೆಲೆ ಅರಣ್ಯ ಇಲಾಖೆಯು ಸ್ಥಳೀಯರಿಗೆ ಮಹತ್ವದ ಮುಂಜಾಗ್ರತಾ ಸೂಚನೆಯನ್ನು ನೀಡಿದ್ದು, ಕಾಫಿ ತೋಟದ ಕೆಲಸಕ್ಕೆ ಹೋಗದಂತೆ ತಿಳಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

