AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kodagu: ಕಾಫಿ ತೋಟದಲ್ಲಿ ಮಗು ನಾಪತ್ತೆ; 2 ವರ್ಷದ ಕಂದಮ್ಮನನ್ನು ಹುಡುಕಿದ್ದು ಶ್ವಾನ!

ಕಾಫಿ ಕೊಯ್ಲು ಕೆಲಸಕ್ಕೆ ಹೋಗುವ ಕಾರ್ಮಿಕ ದಂಪತಿ ತಮ್ಮ ಇಬ್ಬರು ಮಕ್ಕಳನ್ನೂ ಕರೆದೊಯ್ದಿದ್ದರು. ಮಕ್ಕಳೂ ಕಾಫಿ ತೋಟದಲ್ಲಿ ಆಟ ಆಡಿಕೊಂಡು ಖುಷಿಯಾಗಿದ್ದರು. ಆದರೆ ಸಂಜೆ ವೇಳೆ ಕೆಲಸ ಮುಗಿಸಿ ಹೊರಡುವಾಗ ಮಕ್ಕಳಿಬ್ಬರ ಪೈಕಿ 2 ವರ್ಷದ ಹೆನ್ಣು ಮಗು ನಾಪತ್ತೆಯಾಗಿರೋದು ಪೋಷಕರಿಗೆ ಗೊತ್ತಾಗಿದೆ. ಕೂಡಲೇ ಅವರು ಪೂರ್ತಿ ಕಾಫಿ ತೋಟ ಹುಡುಕಾಡಿದ್ದಾರೆ. ಅರಣ್ಯ ಇಲಾಖೆಯವರೂ ಸ್ಥಳಕ್ಕೆ ಬಂದು ಜಾಲಾಡಿದ್ದಾರೆ. ಆದರೆ ಮಗುವನ್ನು ಹುಡುಕಿದ್ದು ಮಾತ್ರ ನೀಯತ್ತಿಗೆ ಹೆಸರಾದ ಪ್ರಾಣಿ.

Kodagu: ಕಾಫಿ ತೋಟದಲ್ಲಿ ಮಗು ನಾಪತ್ತೆ; 2 ವರ್ಷದ ಕಂದಮ್ಮನನ್ನು ಹುಡುಕಿದ್ದು ಶ್ವಾನ!
ಮಗು ಪತ್ತೆ ಮಾಡಿದ ಶ್ವಾನ
Gopal AS
| Edited By: |

Updated on: Dec 01, 2025 | 3:10 PM

Share

ಕೊಡಗು, ಡಿಸೆಂಬರ್​​ 01: ಕಾಫಿ ತೋಟಕ್ಕೆ ಕೆಲಸಕ್ಕೆಂದು ತೆರಳುವಾಗ ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಪೋಷಕರು ಅವರನ್ನೂ ಕರೆದೊಯ್ದಿದ್ದರು. ಮಕ್ಕಳೂ ಕಾಫಿ ತೋಡದ ನಡುವೆ ಆಟವಾಡಿಕೊಂಡು, ಖುಷಿ ಖುಷಿಯಾಗಿದ್ದರು. ಆದ್ರೆ ಸಂಜೆ ವೇಳೆ ಗಮನಿಸಿದಾಗ ಹೆತ್ತವರಿಗೆ ಶಾಕ್​ ಆಗಿದ್ದೆ. 2 ವರ್ಷದ ಪುಟ್ಟ ಕಂದಮ್ಮನ ಕಣ್ಮರೆಯಿಂದ ಕುಟುಂಬ ಕಂಗಾಲಾಗಿದ್ದು, ಮಗುವಿಗಾಗಿ ಹುಡುಕಾಡಿದೆ. ಅರಣ್ಯ ಇಲಾಖೆಯವರೂ ಸ್ಥಳಕ್ಕೆ ಬಂದು ಶೋಧ ನಡೆಸಿದ್ದಾರೆ. ಆದರೆ, ಕೊನೆಗೆ ಆ ಮಗುವನ್ನು ಪತ್ತೆ ಮಾಡಿದ್ದು ಒಂದು ಶ್ವಾನ!

ಘಟನೆ ಏನು?

ಕಾಫಿ ಕೊಯ್ಲು ಹಿನ್ನೆಲೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೊಂಗಣ‌ ಗ್ರಾಮದಲ್ಲಿ ಕಾರ್ಮಿಕ‌ ದಂಪತಿ ಸುನಿಲ್ ಮತ್ತು ನಾಗಿಣಿ ತಮ್ಮ ಇಬ್ಬರು ಮಕ್ಕಳನ್ನುಜೊತೆಯೇ ಕರೆದೊಯ್ದಿದ್ದರು. ಕಾಫಿ ತೋಟದಲ್ಲಿ ಕೆಲಸ ನಿರತರಾಗಿದ್ದ ಅವರು ಸಂಜೆ ವೇಳೆ ಗಮನಿಸಿದಾಗ ಇಬ್ಬರು ಮಕ್ಕಳ ಪೈಕಿ 2 ವರ್ಷದ ಮಗು ಸುಕನ್ಯಾ ನಾಪತ್ತೆಯಾಗಿರೋದು ಗೊತ್ತಾಗಿದೆ. ಮಗಳಿಗಾಗಿ ಒಂದಿಷ್ಟು ಹುಡುಕಾಡಿದ್ದಾರೆ. ಅದರೆ ಮಗು ಪತ್ತೆಯಾದ ಕಾರಣ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ತಕ್ಷಣ ಅವರೂ ಕೂಡ ಸ್ಥಳಕ್ಕೆ ಬಂದಿದ್ದು, ಸುಕನ್ಯಾಗಾಗಿ ಕಾಫಿ ತೋಟದ ತುಂಬ ಜಾಲಾಡಿದ್ದಾರೆ. ಆದರೆ, ಮಧ್ಯರಾತ್ರಿವರೆಗೆ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ: ಹವಾಮಾನ ಬದಲಾವಣೆಯ ಎಫೆಕ್ಟ್​, ಭಾರತದ ಕಾಫಿ ಉತ್ಪಾದನೆಯಲ್ಲಿ ಭಾರಿ ಕುಸಿತ

ಮಗು ಪತ್ತೆ ಮಾಡಿದ ಓರಿಯೋ

ಅರಣ್ಯ ಇಲಾಖೆ ಅಧಿಕಾರಿಗಳು ಮರುದಿನವೂ ಸುಕನ್ಯಾಗಾಗಿ ಹುಡುಕಾಟ ಮುಂದುವರಿಸಿದ್ದು, ಮಗು ಪತ್ತೆಗಾಗಿ ಅನಿಲ್ ಎಂಬುವರ ಶ್ವಾನಗಳನ್ನು ಕೂಡ ಬಳಕೆ ಮಾಡಿಕೊಂಡಿದ್ದರು. ಈ ವೇಳೆ ಆ ನಾಯಿಗಳ ಪೈಕಿ ಒಂದು ಶ್ವಾನ ಸುಕನ್ಯಾಳನ್ನ ಪತ್ತೆ ಮಾಡಿದೆ. ಓರಿಯೋ ಹೆಸರಿನ ಶ್ವಾನ ಕಾಫಿ ತೋಟದ ಎತ್ತರದ ಪ್ರದೇಶದಲ್ಲಿ ಮಗು ನೋಡಿ ಬೊಗಳಲು ಆರಂಭಿಸಿದೆ. ಹೀಗಾಗಿ ಆ ಭಾಗದಲ್ಲಿ ನೋಡಿದಾಗ ಸುಕನ್ಯಾ ಪತ್ತೆಯಾಗಿದ್ದಾಳೆ. ದಟ್ಟ ಕಾರ್ಗತ್ತಲಿನಲ್ಲೇ ಒಂದು ದಿನ ಕಳೆದಿದ್ದ ಮಗು ಸುರಕ್ಷಿತವಾಗಿ ಮನೆಗೆ ಮರಳಿದೆ. ಮಗಳ ನಾಪತ್ತೆಯಿಂದ ಕಂಗಾಲಾಗಿದ್ದ ಸುನಿಲ್ ಮತ್ತು ನಾಗಿಣಿ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!
ಗಿಲ್ಲಿಯ ‘ದೊಡ್ಡವ್ವ..’ ಹಾಡು ಹೇಳಿದ ಅಶ್ವಿನಿ ತಾಯಿ
ಗಿಲ್ಲಿಯ ‘ದೊಡ್ಡವ್ವ..’ ಹಾಡು ಹೇಳಿದ ಅಶ್ವಿನಿ ತಾಯಿ
ಚಿತ್ರದುರ್ಗ ಬಸ್ ದುರಂತ: 42 ಶಾಲಾ ಮಕ್ಕಳು ಪವಾಡಸದೃಶವಾಗಿ ಪಾರು
ಚಿತ್ರದುರ್ಗ ಬಸ್ ದುರಂತ: 42 ಶಾಲಾ ಮಕ್ಕಳು ಪವಾಡಸದೃಶವಾಗಿ ಪಾರು
ಬಸ್ ಹೊತ್ತಿ ಉರಿದ ಭಯಾನಕ ಘಟನೆ ಬಗ್ಗೆ ವಿವರಿಸಿದ ಕ್ಲೀನರ್
ಬಸ್ ಹೊತ್ತಿ ಉರಿದ ಭಯಾನಕ ಘಟನೆ ಬಗ್ಗೆ ವಿವರಿಸಿದ ಕ್ಲೀನರ್
ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು?
ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು?
ಎಲ್ಲೆಲ್ಲೂ ‘45’, ‘ಮಾರ್ಕ್’ ಸಿನಿಮಾ ಸಂಭ್ರಮ; ಅದ್ದೂರಿ ಸ್ವಾಗತ
ಎಲ್ಲೆಲ್ಲೂ ‘45’, ‘ಮಾರ್ಕ್’ ಸಿನಿಮಾ ಸಂಭ್ರಮ; ಅದ್ದೂರಿ ಸ್ವಾಗತ
ಚಿತ್ರದುರ್ಗ ಭೀಕರ ಬಸ್ ಅಪಘಾತ: ಬಸ್ ಚಾಲಕ, ನಿರ್ವಾಹಕ ಗ್ರೇಟ್ ಎಸ್ಕೇಪ್
ಚಿತ್ರದುರ್ಗ ಭೀಕರ ಬಸ್ ಅಪಘಾತ: ಬಸ್ ಚಾಲಕ, ನಿರ್ವಾಹಕ ಗ್ರೇಟ್ ಎಸ್ಕೇಪ್