ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಕೊಡಗು ಜಿಲ್ಲೆಯಾದ್ಯಂತ ಗಾಢ ಕೆಂಪು ಬಣ್ಣದ ಮಳೆ ಸುರಿದಿದ್ದು, ವಿರಾಜಪೇಟೆ, ಮಡಿಕೇರಿ ತಾಲ್ಲೂಕುಗಳಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ವಿಚಿತ್ರ ವಿದ್ಯಮಾನದಿಂದ ಜನರು ಬೆಚ್ಚಿಬಿದ್ದಿದ್ದು, ಮಳೆನೀರಿನ ಬಣ್ಣಕ್ಕೆ ಕಾರಣವೇನೆಂದು ತಿಳಿಯಲು ಪ್ರಯೋಗಾಲಯದಲ್ಲಿ ಪರೀಕ್ಷಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಿನ್ನೆ ಸಂಜೆಯಿಂದ ಆರಂಭವಾದ ಈ ಮಳೆ ಪ್ರಾದೇಶಿಕ ನಿವಾಸಿಗಳಲ್ಲಿ ಕುತೂಹಲ ಕೆರಳಿಸಿದೆ.
- Gopal AS
- Updated on: Sep 25, 2026
- 6:23 pm
ಅನ್ನ ಹಾಕಿದ ತಾಯಿಯನ್ನೇ ಕೊಂದ ಆಟೋ ಚಾಲಕ: ಅಜ್ಜಿಯನ್ನು ನಂಬಿಸಿ ಕರೆದೊಯ್ದು ಭೀಕರ ಕೊಲೆ
ಕುಶಾಲನಗರದ ರುದ್ರಮ್ಮ ಅವರನ್ನು ನಂಬಿಕಸ್ಥ ಆಟೋ ಚಾಲಕ ಕುಮಾರ ಹಣ ಮತ್ತು ಚಿನ್ನಕ್ಕಾಗಿ ಬೈಲುಕುಪ್ಪೆ ಸಮೀಪ ಭೀಕರವಾಗಿ ಕೊಲೆ ಮಾಡಿದ್ದಾನೆ. ಮಗನಂತೆ ನೋಡಿಕೊಂಡ ವೃದ್ಧೆಯನ್ನು ಮೋಸದಿಂದ ಕರೆದೊಯ್ದು, ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಕೊಲೆಗೆ ಮುನ್ನ ನಾಯಿ ಅಪಾಯದ ಸುಳಿವು ನೀಡಿದರೂ ವೃದ್ಧೆ ನಿರ್ಲಕ್ಷಿಸಿದ್ದರು. ಪೊಲೀಸರು ಆರೋಪಿ ಕುಮಾರನನ್ನು ಬಂಧಿಸಿದ್ದು, ಇತರ ಸಹಚರರಿಗಾಗಿ ಶೋಧ ನಡೆಸುತ್ತಿದ್ದಾರೆ.
- Gopal AS
- Updated on: Sep 22, 2026
- 5:47 pm
ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: ಮೂವರು ಸಾವು
ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ಪಿಕ್ಅಪ್ ಜೀಪ್, ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.
- Gopal AS
- Updated on: Sep 20, 2026
- 11:28 pm
ಕೊಡಗಿನಲ್ಲಿ ಹುಲಿ ಹಾವಳಿ: ಮನುಷ್ಯ-ವನ್ಯಜೀವಿ ಸಂಘರ್ಷದ ಹೆಚ್ಚಳದ ಹಿಂದಿನ ಕಾರಣಗಳೇನು?
ಕೊಡಗಿನಲ್ಲಿ ಹತ್ತು ವರ್ಷಗಳ ಹಿಂದೆ ಅಪರೂಪವಾಗಿದ್ದ ಹುಲಿಗಳು ಇದೀಗ ನಿತ್ಯದ ಸುದ್ದಿಯಾಗಿದೆ. ಹುಲಿ ಹಾವಳಿ ಆತಂಕಕ್ಕೆ ಕಾರಣವಾಗಿದೆ. ಹಸು ಮತ್ತು ಮನುಷ್ಯರ ಮೇಲೆ ದಾಳಿಗಳು ಹೆಚ್ಚಾಗಿವೆ. ಹಾಗಾದರೆ ಹುಲಿಗಳು ಕಾಡು ಬಿಟ್ಟು ನಾಡಿಗೆ ಬರಲು ಕಾರಣವೇನು, ಈ ಬಗ್ಗೆ ವನ್ಯಜೀವಿ ತಜ್ಞರು ಹೇಳುವುದು ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- Gopal AS
- Updated on: Sep 18, 2026
- 10:10 pm
5 ತಿಂಗಳ ಬಳಿಕ ಪ್ರವಾಸಿಗರಿಗೆ ಓಪನ್ ಆಯ್ತು ಹಾರಂಗಿ, ಮತ್ತಿಗೋಡು ಆನೆ ಶಿಬಿರ: ಕಟ್ಟುನಿಟ್ಟಿನ ರೂಲ್ಸ್ ಜಾರಿ!
ದುಬಾರೆಯಲ್ಲಿ ಆನೆಗಳ ಸಂಘರ್ಷಕ್ಕೆ ಮಹಿಳೆ ಬಲಿಯಾದ ನಂತರ ಬಂದ್ ಮಾಡಲಾಗಿದ್ದ ಕೊಡಗು ಜಿಲ್ಲೆಯ ಹಾರಂಗಿ ಮತ್ತು ಮತ್ತಿಗೋಡು ಆನೆ ಶಿಬಿರಗಳು 5 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದುಕೊಂಡಿವೆ. ಅರಣ್ಯ ಇಲಾಖೆಯು ಕಠಿಣ ಮಾರ್ಗಸೂಚಿ ಜಾರಿಗೊಳಿಸಿದ್ದು, ಆನೆಗಳಿಂದ 10 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಹಾಗೂ ಸೆಲ್ಫಿ ಮತ್ತು ಸ್ಪರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- Gopal AS
- Updated on: Sep 12, 2026
- 11:01 am
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದಲ್ಲಿ ರಾಮಪುರಂ ಕುಟುಂಬ ತಮ್ಮ ಎಸ್ಟೇಟ್ ಕಾರ್ಮಿಕರ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದೆ. ಮೂಲಸೌಕರ್ಯ ವಂಚಿತ ಸರ್ಕಾರಿ ಶಾಲೆಗಳ ದುಃಸ್ಥಿತಿ ಅರಿತು, 2019ರಲ್ಲಿ ಈ ಕುಟುಂಬ ಸ್ವಂತ ಶಾಲೆಯೊಂದನ್ನು ಆರಂಭಿಸಿತು. ಇಲ್ಲಿ ಮಕ್ಕಳಿಗೆ ಸಮವಸ್ತ್ರ, ಊಟ ಸೇರಿದಂತೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಉಚಿತವಾಗಿ ಲಭ್ಯವಿದೆ.
- Gopal AS
- Updated on: Sep 8, 2026
- 10:26 pm
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರದ ಆರೋಪ: ಮಾಕುಟ್ಟ ಚೆಕ್ಪೋಸ್ಟ್ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯ ಮಾಕುಟ್ಟ ಚೆಕ್ಪೋಸ್ಟ್ನಲ್ಲಿ ವಾಹನ ಚಾಲಕರಿಂದ ಲಂಚ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಆರೋಪಿಸಿದ್ದಾರೆ. ಹಣ ಪಡೆಯುತ್ತಿರುವ ವಿಡಿಯೋ ಪ್ರದರ್ಶಿಸಿ ಆರೋಪ ಮಾಡಿದ್ದಾರೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- Gopal AS
- Updated on: Sep 2, 2026
- 11:12 am
ಕೊಡಗಿನಲ್ಲಿ ಮಳೆ ಅಬ್ಬರ: ಮಡಿಕೇರಿಯಲ್ಲಿ ಗುಡ್ಡ ಕುಸಿತ, ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು
ಕೊಡಗಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಗುಡ್ಡದ ಮಣ್ಣು ರಸ್ತೆಗೆ ಕುಸಿದು ಆತಂಕ ಸೃಷ್ಟಿಸಿದೆ. ಘಟನೆಯ ಕೆಲವೇ ಸೆಕೆಂಡ್ಗಳ ಮೊದಲು ಸ್ಥಳದಿಂದ ತೆರಳಿದ್ದ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಂಗಳಾದೇವಿ ನಗರದಲ್ಲೂ ಮಳೆ ನೀರು ರಸ್ತೆಗೆ ಹರಿದಿದೆ.
- Gopal AS
- Updated on: Aug 26, 2026
- 1:31 pm
Heavy Rain: ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯ ಆರ್ಭಟ ಮುಂದುವರಿದಿದೆ. ತಲಕಾವೇರಿ ಸುತ್ತಮುತ್ತ ಬಿರುಸಿನ ಮಳೆಯಿಂದ ನಾಪೋಕ್ಲು ರಸ್ತೆ ಒಂದು ಅಡಿಗೂ ಹೆಚ್ಚು ಜಲಾವೃತಗೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮವು ಮತ್ತೊಮ್ಮೆ ಮುಳುಗಡೆಯಾಗಿದೆ. ಮಡಿಕೇರಿ ರಸ್ತೆಯ ಮೇಲೂ ನೀರು ಹರಿಯುವ ಭೀತಿ ಎದುರಾಗಿದ್ದು, ಪಾದಚಾರಿಗಳು ಮೇಲ್ಸೇತುವೆಗಳನ್ನು ಬಳಸುತ್ತಿದ್ದಾರೆ.
- Gopal AS
- Updated on: Aug 25, 2026
- 11:45 am
ಕಾಡಾನೆ ದಾಳಿಗೆ ಮತ್ತೊಂದು ಬಲಿ: ವಾಯು ವಿಹಾರಕ್ಕೆ ತೆರಳಿದ್ದ ಬೆಂಗಳೂರಿಗ ದುರಂತ ಸಾವು
Kodagu elephant attack: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಾಯು ವಿಹಾರಕ್ಕೆ ತೆರಳಿದ್ದ ಬೆಂಗಳೂರು ಮೂಲದ ಪ್ರವಾಸಿಗ ಕಾಡಾನೆ ದಾಳಿಗೆ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಈ ಕುರಿತಾಗಿ ಶ್ರೀಮಂಗಲ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
- Gopal AS
- Updated on: Aug 22, 2026
- 8:28 pm
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು: ಕಾಫಿ ಬೆಳೆ ಹಾನಿ ಭೀತಿ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಅನಿರೀಕ್ಷಿತವಾಗಿ ಸುರಿದ ಭಾರಿ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ತೇವಾಂಶ ಹೆಚ್ಚಾಗಿ ಕಾಫಿ ಕಾಯಿಗಳು ಉದುರುತ್ತಿವೆ. ಜೂನ್-ಜುಲೈನಲ್ಲಿ ಮಳೆ ಕೊರತೆ ಎದುರಿಸಿದ ನಂತರ ಆಗಸ್ಟ್ನಲ್ಲಿ ಭಾರೀ ಮಳೆ ಸುರಿದಿದ್ದು ರೈತರಿಗೆ ಅಪಾರ ನಷ್ಟ ಉಂಟಾಗಿದೆ. ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕೊಡಗು ಜಿಲ್ಲೆಯ ಪಾಲು ಗಣನೀಯವಾಗಿದೆ.
- Gopal AS
- Updated on: Aug 21, 2026
- 12:39 pm
ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷ: 8 ತಿಂಗಳಲ್ಲಿ ಐವರು ಸಾವು; ಮೆಗಾ ಆಪರೇಷನ್ ಶುರು
Kodagu elephant conflict: ಕಾಫಿಯ ನಾಡು ಕೊಡಗಿನಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮಿತಿಮೀರಿದ್ದು, ನಿತ್ಯವೂ ಜೀವಭಯದಲ್ಲೇ ಜೀವನ ಕಳೆಯುವ ಸ್ಥಿತಿ ಮಲೆನಾಡಿಗರದ್ದಾಗಿದೆ. ಕಳೆದ 8 ತಿಂಗಳ ಅವಧಿಯಲ್ಲಿ ಐವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. 3 ಪುಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
- Gopal AS
- Updated on: Aug 19, 2026
- 10:52 pm