AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madikeri: ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!

Madikeri: ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!

Gopal AS
| Edited By: |

Updated on: Feb 03, 2026 | 5:12 PM

Share

ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ವೈದ್ಯರೊಬ್ಬರು ರೆಸಾರ್ಟ್‌ಗಾಗಿ ಎರಡು ಎಕರೆ ಪ್ರದೇಶದಲ್ಲಿದ್ದ ಮರಗಳನ್ನು ನಾಶಪಡಿಸಿರುವ ಆರೋಪ ಕೇಳಿಬಂದಿದೆ. ಅನುಮತಿ ಪಡೆಯದೆ ಅಕ್ರಮವಾಗಿ ಮರಗಳನ್ನು ಕಡಿದಿರುವ ವೈದ್ಯ ಶಾಮಪ್ಪಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪಶ್ಚಿಮಘಟ್ಟದ ಸೂಕ್ಷ್ಮ ವಲಯದಲ್ಲಿ ನಡೆದ ಈ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಮಡಿಕೇರಿ, ಫೆಬ್ರವರಿ 03: ಕೊಡಗು ಜಿಲ್ಲೆಯಲ್ಲಿ ಮರಗಳ ಮಾರಣಹೋಮ ಮುಂದುವರಿದಿದ್ದು, ರೆಸಾರ್ಟ್​ಗಾಗಿ 2 ಎಕರೆಯಲ್ಲಿದ್ದ ಮರಗಳನ್ನು ವೈದ್ಯರೋರ್ವರು ಕಡಿಸಿರುವ ಆರೋಪ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ಕೇಳಿಬಂದಿದೆ. ವೈದ್ಯ ಶ್ಯಾಮ್​ ಅಪ್ಪಣ್ಣ ಎಂಬವರು ತಾವು ಖರೀದಿಸಿದ್ದ ಎರಡು ಎಕರೆ ಭೂಮಿಯಲ್ಲಿದ್ದ ಮರಗಳನ್ನು ಅರಣ್ಯ, ಕಂದಾಯ ಇಲಾಖೆ ಅನುಮತಿ ಪಡೆಯದೆ ಕಟಾವು ಮಾಡಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ವೈದ್ಯ ಶ್ಯಾಮ್​ ಅಪ್ಪಣ್ಣ, ಸಹಕರಿಸಿದ ವಿನಯ್, ಸಂದೀಪ್ ಪುಣೆ ಎಂಬುವರ ಮೇಲೂ ಅರಣ್ಯ ಇಲಾಖೆ FIR​ ದಾಖಲಿಸಿದೆ. ಆದರೆ ಎಫ್​ಐಆರ್​ನಲ್ಲಿ 14 ಮರಗಳು ಮಾತ್ರ ನಾಶ ಎಂದು ಉಲ್ಲೇಖಿಸಲಾಗಿದ್ದು, ಎರಡು ಎಕರೆಯಲ್ಲಿ 50ಕ್ಕೂ ಅಧಿಕ‌ ಮರಗಳು ನಾಶವಾಗಿರುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.