AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ: ಕಾರಣ ಇಲ್ಲಿದೆ

ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಕೊಡಗಿನ ಪ್ರವಾಸೋದ್ಯಮ 2025ರಲ್ಲಿ ನಷ್ಟ ಕಂಡಿದೆ ಎನ್ನಲಾಗಿದೆ. ವಿವಿಧ ಕಾರಣಗಳಿಂದಾಗಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾದ ಪರಿಣಾಮ, ಇದನ್ನೇ ನಂಬಿ ಜೀವನ ನಡೆಸುವವರಿಗೆ ತೊಂದರೆಯಾಗಿದೆ. 2026ರಲ್ಲಾದರೂ ಜಿಲ್ಲೆಯ ಪ್ರವಾಸೋದ್ಯಮ ಮರಳಿ ಹಳಿಗೆ ಬರುವ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಉದ್ಯಮಿಗಳು ಇದ್ದಾರೆ.

ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ: ಕಾರಣ ಇಲ್ಲಿದೆ
ಕೊಡಗು
Gopal AS
| Edited By: |

Updated on: Jan 11, 2026 | 7:44 AM

Share

ಮಡಿಕೇರಿ, ಜನವರಿ 11: ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗು ಪ್ರವಾಸಿಗರ ನೆಚ್ಚಿನ ತಾಣ. ಚಳಿಗಾಲ ಬಂತಂದ್ರೆ ಸಾಕು ರಾಜ್ಯದ ಮಾತ್ರವಲ್ಲದೆ ದೇಶ-ವಿದೇಶಗಳ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡ್ತಾರೆ. ಪ್ರಕೃತಿ ಸೌಂದರ್ಯದ ಜೊತೆ ಇಲ್ಲಿನ ಚಳಿಯ ವಾತಾವರಣವನ್ನು ಎಂಜಾಯ್​​ ಮಾಡ್ತಾರೆ. ಸಾಲು ಸಾಲು ರಜೆಯ ಸಮಯದಲ್ಲಂತೂ ಜಿಲ್ಲೆಯಲ್ಲಿ ಜನ ಜಂಗುಳಿಯೇ ಕಾಣಸಿಗುತ್ತೆ. ಆದ್ರೆ 2025 ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಲಾಭಕ್ಕಿಂತ ನಷ್ಟವನ್ನೇ ಹೆಚ್ಚಾಗಿ ತಂದಿದೆಯಂತೆ.

ಬೆಟ್ಟಗುಡ್ಡಗಳು, ಪ್ರಕೃತಿ ಸೌಂದರ್ಯ, ನದಿ ತೊರೆಗಳು, ಕೂಲ್ ಕೂಲ್ ವಾತಾವರಣ ಕಾರಣಕ್ಕೆ ಫೇಮಸ್​​ ಆಗಿರೋ ಕೊಡಗಿಗೆ ಪ್ರತಿವರ್ಷ ಕನಿಷ್ಠ 20 ಲಕ್ಷ ಪ್ರವಾಸಿಗರು ಭೇಟಿ ನೀಡ್ತಾರೆ. ಆದ್ರೆ ಈ ಕಳೆದ 2-3 ವರ್ಷಗಳಿಂದ ಜಿಲ್ಲೆಯಲ್ಲಿ ಸೀಸನಲ್ ಟೂರಿಸಂ ಎನ್ನುವ ಕಲ್ಪನೆಯೇ ಮಾಯವಾಗಿದೆ. 2025ರಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಸುಮಾರು 2 ಲಕ್ಷ ಇಳಿಕೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಂಕಿ-ಅಂಶ ಮಾಹಿತಿ ನೀಡಿದ್ದು, ವಾರ್ಷಿಕವಾಗಿ ಪ್ರವಾಸಿಗರ ಸಂಖ್ಯೆ 18 ಲಕ್ಷವನ್ನು ದಾಟಿಲ್ಲ ಎನ್ನಲಾಗಿದೆ. ಮಡಿಕೇರಿಯಲ್ಲಿ ನಿರ್ಮಿಸಲಾಗಿರೋ ಕೂರ್ಗ್ ವಿಲೇಜ್, ನೆಹರು ಮಂಠಪದಂತಹ ತಾಣಗಳುಕೂಡ ಪ್ರವಾಸಿಗರ ಆಕರ್ಷಿಸುವಲ್ಲಿ ವಿಫಲವಾಗಿವೆ ಎನ್ನಾಗಿದೆ.

ಇದನ್ನೂ ಓದಿ: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ?

ನಿರಂತರ ಸರ್ಕಾರಿ ರಜೆಗಳಿದ್ದಾಗ ಜಿಲ್ಲೆಯ ಹೋಮ್​ ಸ್ಟೇ, ರೆಸಾರ್ಟ್​ಗಳು ಬುಕಿಂಗ್ ಆಗಿರುತ್ತವೆ. ಆದ್ರೆ ಕಳೆದ ವರ್ಷ ಮೇ ತಿಂಗಳಲ್ಲಿ ಶುರುವಾಗಿದ್ದ ಮಳೆ ಬಹುತೇಕ ನವೆಂಬರ್ ಅಂತ್ಯದವರೆಗೂ ಸುರಿದಿದೆ. ಇದೂ ಕೂಡ ಪ್ರವಾಸಿಗರು ಜಿಲ್ಲೆಗೆ ಆಗಮಿಸಲು ಹಿಂದೇಟು ಹಾಕಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರ ಹಿಂದಿನ ವರ್ಷ ಸಂಭವಿಸಿದ ವಯನಾಡು ದುರಂತ ಕೂಡ ಕೊಡಗು ಜಿಲ್ಲೆಗೆ ಮಳೆಗಾಲದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ 2026ರಲ್ಲಾದರೂ ಜಿಲ್ಲೆಯ ಪ್ರವಾಸೋದ್ಯಮ ತಮ್ಮ ಕೈಹಿಡಿಯಬಹುದು ಎಂದು ಇದೇ ಉದ್ಯಮವನ್ನು ನಂಬಿಕೊಂಡ ಸಾವಿರಾರು ಕುಟುಂಬಗಳು ಕನಸು ಕಂಡಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ