AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ?

ಕೊಡಗು ಜಿಲ್ಲೆಯ ಕೂತಿ ಗ್ರಾಮದಲ್ಲಿ ಗ್ರಾಮ ಸಮಿತಿಯ ನಿರ್ಧಾರಕ್ಕೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಎರಡು ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ. ಇವರೊಂದಿಗೆ ಸಂಭಾಷಣೆ ನಡೆಸಬಾರದೆಂದೂ, ಸಾಮಾಜಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಬಾರದೆಂದೂ ಹಾಗೂ ಕಾರ್ಮಿಕ ಸಹಕಾರವನ್ನು ನೀಡಬಾರದೆಂದೂ ಆದೇಶಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಬಹಿಷ್ಕೃತ ಕುಟುಂಬಗಳು ಮಾನಸಿಕ-ಆರ್ಥಿಕ ಸಂಕಷ್ಟದಲ್ಲಿವೆ. ಆದರೆ ಗ್ರಾಮ ಸಮಿತಿಯು ಬಹಿಷ್ಕಾರದ ಆರೋಪಗಳನ್ನು ನಿರಾಕರಿಸಿದೆ.

ಕೊಡಗು: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ?
ಸಮಿತಿಯ ಮಾತು ಕೇಳದಿದ್ದಕ್ಕೆ ಸಾಮಾಜಿಕ ಬಹಿಷ್ಕಾರ!
ಗೋಪಾಲ್​ ಸೋಮಯ್ಯ
| Edited By: |

Updated on: Jan 10, 2026 | 12:13 PM

Share

ಕೊಡಗು, ಜನವರಿ 10: ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಆತಂಕಕಾರಿ ವಿಷಯವಾಗಿ ಹೊರಹೊಮ್ಮಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಗ್ರಾಮ ಸಮಿತಿಯ ತೀರ್ಮಾನದ ಹೆಸರಿನಲ್ಲಿ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ವಿಧಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಸಾವು-ಸಮಾರಂಭಕ್ಕೂ ಬಾರದಂತೆ ಆದೇಶ

ಗ್ರಾಮದ ಅಜಂತ ಮತ್ತು ನವೀನ್ ಎಂಬುವವರ ಎರಡು ಕುಟುಂಬಗಳನ್ನು ಸಮಿತಿಯ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಹಿಷ್ಕಾರದ ಪರಿಣಾಮವಾಗಿ ಗ್ರಾಮಸ್ಥರು ಆ ಕುಟುಂಬಗಳೊಂದಿಗೆ ಮಾತನಾಡುವಂತಿಲ್ಲ, ಸಾವು–ಸಮಾರಂಭ, ಸಭೆ, ಮದುವೆ ಸೇರಿದಂತೆ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರು ಹಾಜರಾಗುವಂತಿಲ್ಲ ಎಂದು ಆದೇಶಿಸಲಾಗಿದೆ. ಅಲ್ಲದೆ, ಈ ಕುಟುಂಬಗಳ ತೋಟದ ಕೆಲಸಗಳಿಗೆ ಕಾರ್ಮಿಕರು ತೆರಳದಂತೆ ಸೂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೋ ಓದಿ ‘ಕೊರಗಜ್ಜ’ ಸಿನಿಮಾ ತಂಡದ ವಿರುದ್ಧ ಕೊಡಗಿನ ದೈವಾರಾಧಕರು ಮತ್ತು ನರ್ತಕರು ರೊಚ್ಚಿಗೆದ್ದಿದ್ದೇಕೆ?

ಆರೋಪ ತಳ್ಳಿಹಾಕಿದ ಸಮಿತಿ

ಬಹಿಷ್ಕಾರದ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಂಪರ್ಕ ಕಡಿತಗೊಂಡ ಪರಿಣಾಮ ಈ ಎರಡು ಕುಟುಂಬಗಳು ಮಾನಸಿಕ ಹಾಗೂ ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಕೂತಿ ಗ್ರಾಮ ಸಮಿತಿಯು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಗ್ರಾಮ ಕಟ್ಟುಪಾಡುಗಳನ್ನು ಮೀರಿ ನಡೆದುಕೊಂಡ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿತ್ತು. ಆದರೆ ದಂಡವನ್ನು ಕಟ್ಟದೆ ಇರುವುದರಿಂದ ಗ್ರಾಮಸ್ಥರು ಸ್ವಯಂಸ್ಪೂರ್ತಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಸಮಿತಿ ಸ್ಪಷ್ಟನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್
ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್
ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ
ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ