AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ

ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ

ಮದನ್​ ಕುಮಾರ್​
|

Updated on: Mar 15, 2026 | 9:08 AM

Share

‘ಕೆಡಿ’ ಸಿನಿಮಾ ಪ್ರಚಾರದಲ್ಲಿ ಧ್ರುವ ಸರ್ಜಾ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಹೊಸ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಅದರಲ್ಲಿ ಭಾಗಿಯಾದ ಧ್ರುವ ಸರ್ಜಾಗೆ ಹಲವು ಪ್ರಶ್ನೆಗಳು ಎದುರಾದವು. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವುದು ಯಾಕೆ ಎಂಬುದನ್ನು ಅವರ ವಿವರಿಸಿದರು.

ನಟ ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದ (KD Movie) ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಹೊಸ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಅದರಲ್ಲಿ ಭಾಗಿಯಾದ ಧ್ರುವ ಸರ್ಜಾ (Dhruva Sarja) ಅವರಿಗೆ ಹಲವು ಪ್ರಶ್ನೆಗಳು ಎದುರಾದವು. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವುದು ಯಾಕೆ ಎಂಬುದನ್ನು ಕೂಡ ಅವರ ವಿವರಿಸಿದರು. ‘ಈ ಗೆಜೆಟ್ಸ್ ಯುಗದಲ್ಲಿ ಪರಸ್ಪರ ಭೇಟಿ ಆಗುವುದೇ ಕಡಿಮೆ ಆಗಿದೆ. ಹಾಗಾಗಿ ನನ್ನನ್ನು ಇಷ್ಟಪಡುವ ಜನರನ್ನು ನಾನು ಪ್ರತಿ ಭಾನುವಾರ ಭೇಟಿ ಆಗಲು ಇಷ್ಟಪಡುತ್ತೇನೆ. ಅವರು ತಮ್ಮ ಕುಟುಂಬವನ್ನು ಬಿಟ್ಟು ನಮಗೆ ಟೈಮ್ ಕೊಡುತ್ತಿದ್ದಾರೆ ಎಂದರೆ ಬಹಳ ಖುಷಿ ಆಗುತ್ತದೆ. ಇನ್ನೊಂದು ರೀತಿ ಯೋಚನೆ ಮಾಡುತ್ತೇನೆ, ಒಂದು ಭಾನುವಾರ ಎಲ್ಲರೂ ಬರೋದು ನಿಲ್ಲಿಸಿಬಿಟ್ಟರೆ ಹೆಂಗೆ? ಅಂತಹ ದಿನ ಯಾವತ್ತೂ ಬರಬಾರದು ಅಂತ ಪ್ರತಿ ದಿನ ಕಷ್ಟಪಡುತ್ತಿದ್ದೇನೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us