ಬೇಸಿಗೆಯಲ್ಲಿ ಕಾಡುವ ಆಯಾಸ, ನಿರ್ಜಲೀಕರಣವನ್ನು ದೂರ ಮಾಡಲು ಸೇವಿಸಲೇಬೇಕಾದ ಆಹಾರಗಳು
ಬೇಸಿಗೆಯಲ್ಲಿ ಬಿಸಿಲಿನ ತಾಪ ಅಧಿಕವಾಗಿರುವುದರಿಂದ ಸುಸ್ತು, ಆಯಾಸ ಕಾಡುತ್ತದೆ. ಅಷ್ಟೇ ಅಲ್ಲದೆ ಈ ಸಮಯದಲ್ಲಿ ದೇಹದಲ್ಲಿನ ನೀರಿನಾಂಶ ಹೆಚ್ಚು ಹೆಚ್ಚು ಬೆವರಿನ ಮೂಲಕ ಹೊರ ಹೋಗುವ ಕಾರಣ ನಿರ್ಜಲೀಕರಣ ಸಮಸ್ಯೆ ಬಹಳ ಬೇಗನೆ ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ನಿರ್ಜಲೀಕರಣವನ್ನು ತಡೆಯಲು ಬರೀ ನೀರು ಕುಡಿದರೆ ಸಾಕಾಗುವುದಿಲ್ಲ. ಈ ಕೆಲವೊಂದು ಆಹಾರಗಳನ್ನು ಸೇವನೆ ಮಾಡುವುದು ಕೂಡ ತುಂಬಾನೇ ಮುಖ್ಯವಾಗಿರುತ್ತದೆ.

ಈ ಸುಡು ಬೇಸಿಗೆಯಲ್ಲಿ (summer) ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಆಯಾಸ, ಸುಸ್ತು, ನಿರ್ಜಲೀಕರಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕಾಗಿ ಸಾಕಷ್ಟು ನೀರು ಕುಡಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ಆದರೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿದರೂ ಬಿರು ಬೇಸಿಗೆಯಲ್ಲಿ ದೇಹ ಹೆಚ್ಚು ಬೆವರುವ ಕಾರಣ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಗಟ್ಟಲು ಈ ಕೆಲವು ಆಹಾರಗಳನ್ನು ಕೂಡ ತಪ್ಪದೆ ಸೇವನೆ ಮಾಡಬೇಕು.
ನಿರ್ಜಲೀಕರಣವನ್ನು ತಡೆಗಟ್ಟಲು ಸೇವಿಸಬೇಕಾದ ಆಹಾರಗಳು:
ನೀರನ್ನು ಮಾತ್ರ ಅವಲಂಬಿಸುವುದು ಅಪಾಯಕಾರಿ.
ಹಗುರವಾದ ಆಹಾರವನ್ನು ಸೇವಿಸಿ: ಬೇಸಿಗೆಯಲ್ಲಿ ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ. ಇವು ದೇಹದ ಉಷ್ಣತೆ ಮತ್ತು ಆಮ್ಲೀಯತೆಯನ್ನು ಹೆಚ್ಚಿಸುತ್ತವೆ, ಇದರಿಂದಾಗಿ ಬೆವರು ಹೆಚ್ಚಾಗುತ್ತದೆ. ದೇಹವು ಬೇಗನೆ ನಿರ್ಜಲೀಕರಣಗೊಳ್ಳುತ್ತದೆ. ಹಸಿರು ತರಕಾರಿಗಳು, ಬೇಳೆಕಾಳುಗಳು, ಮಜ್ಜಿಗೆ ಮತ್ತು ಮೊಸರು ಇತ್ಯಾದಿ ಹಗುರ ಆಹಾರಗಳನ್ನು ಸೇವಿಸಿ.
ನಿಂಬೆ ನೀರು ಮತ್ತು ಎಳನೀರು: ನಿಂಬೆ ನೀರು ಮತ್ತು ಎಳ ನೀರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದಲ್ಲದೆ, ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸುತ್ತದೆ. ಅವುಗಳ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಆದ್ದರಿಂದ ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಂಬೆ ನೀರು ಅಥವಾ ಎಳನೀರನ್ನು ಸೇವನೆ ಮಾಡಿ.
ಮೊಸರು: ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಸಲು ಮತ್ತು ನಿರ್ಜಲೀಕರಣವನ್ನು ತಪ್ಪಿಸಲು ನೀವು ಮೊಸರನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅಲ್ಲದೆ ಬೇಸಿಗೆಯಲ್ಲಿ ಮಜ್ಜಿಗೆ ಅಥವಾ ಲಸ್ಸಿ ಸೇವಿಸುವುದರಿಂದಲೂ ದೇಹವು ತಂಪಾಗಿರುತ್ತದೆ ಮತ್ತು ಆಯಾಸ ಕಡಿಮೆಯಾಗುತ್ತದೆ.
ಹಣ್ಣುಗಳನ್ನು ಸೇವಿಸಿ: ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಮತ್ತು ಅನಾನಸ್‌ನಂತಹ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ತಾಜಾ ಹಣ್ಣಿನ ರಸವು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಶಕ್ತಿಯನ್ನು ಒದಗಿಸುತ್ತದೆ.
ಇದನ್ನೂ ಓದಿ: ಬೇಸಿಗೆಯ ದಣಿವು ತಣಿಸಲು ಸಹಕಾರಿ ಈ ಪಾನೀಯ
ಪುದೀನ: ಪುದೀನವು ತನ್ನ ತ್ವರಿತ ತಂಪಾಗಿಸುವ ಪರಿಣಾಮಕ್ಕೆ ಹೆಸರುವಾಸಿಯಾಗಿದೆ. ಪುದೀನ ಜ್ಯೂಸ್, ಚಟ್ನಿ ಅಥವಾ ಡಿಟಾಕ್ಸ್ ಪಾನೀಯಗಳು ಬೇಸಿಗೆಯಲ್ಲಿ ಬಹಳ ಪ್ರಯೋಜನಕಾರಿ. ಅವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ರಿಫ್ರೆಶ್ ಮಾಡುತ್ತದೆ.
ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬೇಡಿ: ಚಹಾ, ಕಾಫಿ ಮತ್ತು ಆಲ್ಕೋಹಾಲ್ ದೇಹದ ನೀರಿನ ಅಂಶವನ್ನು ಕಡಿಮೆ ಮಾಡುತ್ತದೆ. ಇವುಗಳ ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
