AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಹಾಡಿ ಜನ ಕುಡಿಯುತ್ತಿರೋದು ಕೊಳಚೆ ನೀರು!

ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಹಾಡಿ ಜನ ಕುಡಿಯುತ್ತಿರೋದು ಕೊಳಚೆ ನೀರು!

Gopal AS
| Edited By: |

Updated on: Feb 05, 2026 | 1:07 PM

Share

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆನ್ನಂಗಿ ಬಸವನಹಳ್ಳಿ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಫೆಬ್ರವರಿಯಲ್ಲೇ ಆರಂಭಗೊಂಡಿರುವ ಈ ಸಮಸ್ಯೆ ಗ್ರಾಮಸ್ಥರನ್ನು, ವಿಶೇಷವಾಗಿ ಆದಿವಾಸಿ ಕುಟುಂಬಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಕಲುಷಿತ ನೀರು ಬಳಸಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಗ್ರಾಮಸ್ಥರು, ಸ್ಥಳೀಯ ಅಧಿಕಾರಿಗಳಿಂದ ಸ್ಪಂದನೆ ಸಿಗದೆ ಪರದಾಡುತ್ತಿದ್ದಾರೆ.

ಮಡಿಕೇರಿ ಫೆಬ್ರವರಿ 05: ವಿರಾಜಪೇಟೆ ತಾಲೂಕಿನ ಚೆನ್ನಂಗಿ ಬಸವನಹಳ್ಳಿ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾವೇರಿಯ ತವರಾದ ಕೊಡಗಿನಲ್ಲಿ ಫೆಬ್ರವರಿ ತಿಂಗಳ ಮೊದಲ ವಾರದಲ್ಲೇ ನೀರಿನ ಹಾಹಾಕಾರ ಶುರುವಾಗಿದೆ. ಜೀವಜಲಕ್ಕಾಗಿ ಈ ಭಾಗದ ಆದಿವಾಸಿ ಕುಟುಂಬಗಳು ಕಾಡುಮೇಡು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಿನಿಂದ ಕೊಳಚೆ ನೀರನ್ನು ತಂದು ಕುಡಿಯಲು ಮತ್ತು ಇತರೆ ಅಗತ್ಯಗಳಿಗೆ ಬಳಸುತ್ತಿರುವುದರಿಂದ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳು ಆಗಾಗ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಗ್ರಾಮದಲ್ಲಿರುವ ವಾಟರ್ ಟ್ಯಾಂಕ್ ಮೂರು ತಿಂಗಳಿಂದ ನೀರಿಲ್ಲದೆ ಒಡೆದು ಹೋಗಿದೆ. ಬೋರ್‌ವೆಲ್ ನೀರು ಪಡೆಯಲು ಗಂಟೆಗಟ್ಟಲೆ ಶ್ರಮಿಸಬೇಕಾಗಿದೆ. ಈ ಸಮಸ್ಯೆಗಳ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.