AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೈನಾನ್ಸ್ ಕಿರುಕುಳಕ್ಕೆ ಮೂರು ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದ ಕುಟುಂಬ!

ಬೆಳಗಾವಿ ರಾಯಬಾಗದ ಅಲಖನೂರಿನಲ್ಲಿ ಇಕ್ವಿಟಾಸ್ ಫೈನಾನ್ಸ್ ಕಂಪನಿ ಸಾಲ ಮರುಪಾವತಿ ಸಮಸ್ಯೆಗೆ ಮನೆ ಸೀಜ್ ಮಾಡಿದೆ. ತಂದೆಯ ಚಿಕಿತ್ಸೆಗಾಗಿ ಪಡೆದ ಸಾಲವನ್ನು ತೀರಿಸಿಲ್ಲವೆಂದು ಕಂಪನಿಯು ಮನೆಗೆ ಬೀಗ ಹಾಕಿದ್ದು, ಮೂರು ತಿಂಗಳ ಹಸುಗೂಸು ಸಹಿತ ಕುಟುಂಬ ಬೀದಿಗೆ ಬಿದ್ದಿದೆ. ಬಟ್ಟೆ, ಪಾತ್ರೆಗಳನ್ನೂ ಹೊರತೆಗೆಯಲು ಬಿಡದ ಸಿಬ್ಬಂದಿ ಕ್ರಮಕ್ಕೆ ಕುಟುಂಬದ ಆಕ್ರೋಶ ಹೊರಹಾಕಿದೆ.

ಫೈನಾನ್ಸ್ ಕಿರುಕುಳಕ್ಕೆ ಮೂರು ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದ ಕುಟುಂಬ!
ಫೈನಾನ್ಸ್ ಕಿರುಕುಳಕ್ಕೆ ಮೂರು ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದ ಕುಟುಂಬ!
Sahadev Mane
| Edited By: |

Updated on:Feb 28, 2026 | 12:21 PM

Share

ಬೆಳಗಾವಿ, ಫೆಬ್ರವರಿ 28: ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯ (Finance Company) ಕಿರುಕುಳದಿಂದ ಒಂದು ಕುಟುಂಬ ಬೀದಿಗೆ ಬಿದ್ದ ಘಟನೆ ನಡೆದಿದೆ. ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯಿಂದ ಮನೆ ಸೀಜ್ ಮಾಡಲಾಗಿದ್ದು, ಮೂರು ತಿಂಗಳ ಹಸುಗೂಸು ಸೇರಿ ಐವರು ಕುಟುಂಬಸ್ಥರು ಮನೆ ಹೊರಗೆ ಊಟ, ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ.

ತಂದೆಯ ಚಿಕಿತ್ಸೆಗಾಗಿ ಸಾಲ

ಹನುಮಂತ ಪಾಟೀಲ್ ಎಂಬುವವರು ತಂದೆ ಶ್ರೀಕಾಂತ್ ಪಾಟೀಲ್ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನೆ ಅಡವಿಟ್ಟು ಸುಮಾರು 20 ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ ವರ್ಷ ಶ್ರೀಕಾಂತ್ ನಿಧನರಾದ ಬಳಿಕ, ಆರೋಗ್ಯ ಸಮಸ್ಯೆಯಿಂದಾಗಿ ಹನುಮಂತ ಕಳೆದ ಏಳು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಸುಮಾರು ಏಳು ಲಕ್ಷ ರೂ. ಬಾಕಿ ಇದ್ದ ಹಿನ್ನೆಲೆಯಲ್ಲಿ ಏಕಾಏಕಿ ಬಂದ ಪೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಹೊಟ್ಟೆಗೆ ಹಿಟ್ಟಿಲ್ಲದೆ ರಾತ್ರಿ ಕಳೆದ ಹಸುಗೂಸು

ಹನುಮಂತ ದಂಪತಿಗೆ ಮೂರು ತಿಂಗಳ ಹಸುಕೂಸಿದ್ದು, ಬಾಣಂತಿ-ಮಗು ಸೇರಿ ಒಟ್ಟೂ ಐವರು ಕುಟುಂಬಸ್ಥರು ರಾತ್ರಿಯಿಡೀ ಬೀದಿಯಲ್ಲಿ ಕಾಲ ಕಳೆದಿದ್ದಾರೆ. ಮನೆಯಲ್ಲಿ ಇನ್ನೋರ್ವ 5 ತಿಂಗಳ ಬಾಣಂತಿ-ಕೂಸು ಇದ್ದು, ರಾತ್ರಿ ಊಟವಿಲ್ಲದೆ, ಚಳಿಯಿಂದ ಬಳಲಿದ ಕಾರಣ ಮಗುವಿಗೆ ಹುಷಾರು ತಪ್ಪಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹನುಮಂತ ಪಾಟೀಲರ ಪತ್ನಿ ಶ್ರೀದೇವಿ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ ಕುಡಿದ ನಶೆಯಲ್ಲಿ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆ; ಪ್ರಭಾವಿ ಮುಖಂಡರ ಮಕ್ಕಳು ಅಂದರ್!

ಬಟ್ಟೆ, ಹಾಸಿಗೆ, ಪಾತ್ರೆ ಸೇರಿ ಮನೆಯೊಳಗಿನ ಯಾವ ವಸ್ತುವನ್ನೂ ತೆಗೆದುಕೊಳ್ಳಲು ಬಿಡದ ಸಿಬ್ಬಂದಿ, ಏಕಾಏಕಿ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಕೇವಲ ಹೆಂಗಸರು, ಮಕ್ಕಳು ಮಾತ್ರವಿದ್ದು, ಕೋರ್ಟ್​ ನೋಟಿಸ್ ತೋರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ನಾಲ್ಕು ವರ್ಷದಿಂದ ಕಂತು ತುಂಬುತ್ತಾ ಬಂದಿದ್ದೇನೆ. ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿದ್ದ ಕಾರಣ ಹಣ ತುಂಬಿರಲಿಲ್ಲ ಎಂದು ಹನುಮಂತ ಟಿವಿ9ಗೆ ತಿಳಿಸಿದ್ದಾರೆ. ಈ ಘಟನೆ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕುಟುಂಬಕ್ಕೆ ಕಾಲಾವಕಾಶ ನೀಡುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:18 pm, Sat, 28 February 26

Follow Us