AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಸ್ ಅಧಿಕಾರಿಗೆ ಸೇರಿದ ವಿಲ್ಲಾದಲ್ಲೇ ಸಾಮೂಹಿಕ ಅತ್ಯಾಚಾರ: ಕಟ್ಟಡದ ಮಾಲೀಕನ ಮೇಲೆ ಕ್ರಮ ಯಾಕಿಲ್ಲ?

ಐಪಿಎಸ್ ಅಧಿಕಾರಿಗೆ ಸೇರಿದ ವಿಲ್ಲಾದಲ್ಲೇ ಸಾಮೂಹಿಕ ಅತ್ಯಾಚಾರ: ಕಟ್ಟಡದ ಮಾಲೀಕನ ಮೇಲೆ ಕ್ರಮ ಯಾಕಿಲ್ಲ?

Kiran HV
| Edited By: |

Updated on:Feb 28, 2026 | 10:41 AM

Share

ಅಮೃತಹಳ್ಳಿ ವಿಲ್ಲಾದಲ್ಲಿ ನಡೆದ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಐಪಿಎಸ್ ಅಧಿಕಾರಿಯೊಬ್ಬರಿಗೆ ಸೇರಿದ ವಿಲ್ಲಾದಲ್ಲೇ ಈ ಕೃತ್ಯ ನಡೆದಿದ್ದರೂ ಕಟ್ಟಡದ ಮಾಲೀಕರ ಮೇಲೆ ಯಾವುದೇ ಕ್ರಮವಾಗಿಲ್ಲ. ವಿಲ್ಲಾ ಅನೈತಿಕ ಚಟುವಟಿಕೆಗಳು ಮತ್ತು ಡ್ರಗ್ಸ್ ಪಾರ್ಟಿಗಳ ಹಾಟ್‌ಸ್ಪಾಟ್ ಆಗಿದ್ದರೂ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕಾನೂನು ಪಾಲಕರು ಐಪಿಎಸ್ ಅಧಿಕಾರಿಗೆ ವಿನಾಯಿತಿ ನೀಡಿದ ಆರೋಪ ಕೇಳಿಬಂದಿದೆ.

ಬೆಂಗಳೂರು, ಫೆಬ್ರವರಿ 28: ಅಮೃತಹಳ್ಳಿ ವಿಲ್ಲಾದಲ್ಲಿ ನಡೆದ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣವು ಹಲವು ಆಘಾತಕಾರಿ ಸತ್ಯಗಳನ್ನು ಬಯಲು ಮಾಡಿದೆ. ಈ ಘಟನೆ ನಡೆದ ವಿಲ್ಲಾ ಐಪಿಎಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು ಎಂಬುದು ಪ್ರಮುಖ ವಿಷಯ. ಈ ವಿಲ್ಲಾ ದೀರ್ಘಕಾಲದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮೋಜು-ಮಸ್ತಿ, ಡ್ರಗ್ಸ್ ಸೇವನೆ ಮತ್ತು ಅನೈತಿಕ ಚಟುವಟಿಕೆಗಳ ಹಾಟ್‌ಸ್ಪಾಟ್ ಆಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ವರದಿಯಾಗಿದೆ. ಈ ಹಿಂದಿನ ಹಲವು ಪ್ರಕರಣಗಳಲ್ಲಿ ವಿಲ್ಲಾ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದರೂ ಈ ವಿಲ್ಲಾ ಐಪಿಎಸ್ ಅಧಿಕಾರಿಗೆ ಸೇರಿದ್ದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದರೂ, ಐಪಿಎಸ್ ಅಧಿಕಾರಿಗಳಿಗೆ ವಿನಾಯಿತಿ ನೀಡಲಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ನಿಖಿಲ್ ಮತ್ತು ಡಿಕ್ಸನ್​​ನಂತಹ ಆರೋಪಿಗಳು, ಪೊಲೀಸ್ ಅಧಿಕಾರಿಯ ವಿಲ್ಲಾ ಎಂಬುದರಿಂದ ದಾಳಿ ಮಾಡುವುದಿಲ್ಲ ಎಂಬ ಅರಿವಿನಿಂದಲೇ ಇದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆ ವಿಲ್ಲಾದಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿಗಳು ಮತ್ತು ಇತರ ಐಪಿಎಸ್ ಅಧಿಕಾರಿಗಳೂ ಭೇಟಿ ನೀಡುತ್ತಿದ್ದರು ಎಂಬ ಮಾಹಿತಿ ಇದೆ. ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಲ್ಲಾ ಮಾಲೀಕರ ವಿರುದ್ಧ ಕ್ರಮ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 28, 2026 10:40 AM
Follow Us