AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ವೇಳೆ ಬೆಚ್ಚಿಬಿದ್ದ ಖಾಕಿ: ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡಿದ್ದ ಮಾದಕ ಜಾಲ ಬಯಲು

ಬೆಂಗಳೂರಿನಲ್ಲಿ ಕಾಲೇಜು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ, ಡ್ರಗ್ಸ್ ಮತ್ತು ಬ್ಲಾಕ್‌ಮೇಲ್ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ನಿಖಿಲ್ ಮತ್ತು ಡಿಕ್ಸನ್ ಪ್ರಮುಖ ಆರೋಪಿಗಳಾಗಿದ್ದು, ಇನ್‌ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಬಲೆಗೆ ಕೆಡವಿ, ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಇವರು ಬ್ಲಾಕ್‌ಮೇಲ್ ಮಾಡುತ್ತಿದ್ದರು. ಹೊರ ರಾಜ್ಯದ ವಿದ್ಯಾರ್ಥಿಗಳೇ ಇವರ ಪ್ರಮುಖ ಟಾರ್ಗೆಟ್​​ ಆಗಿತ್ತು ಎನ್ನಲಾಗಿದೆ.

ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ವೇಳೆ ಬೆಚ್ಚಿಬಿದ್ದ ಖಾಕಿ: ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡಿದ್ದ ಮಾದಕ ಜಾಲ ಬಯಲು
ಸಾಮೂಹಿಕ ಅತ್ಯಾಚಾರ ಕೇಸ್​​ ತನಿಖೆ ವೇಳೆ ಪೊಲೀಸರೇ ಶಾಕ್​​
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Feb 27, 2026 | 10:07 PM

Share

ಬೆಂಗಳೂರು, ಫೆಬ್ರವರಿ 27: ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಬಯಲಾಗಿವೆ. ಯುವತಿಯರನ್ನು ಮಾದಕ ದ್ರವ್ಯಗಳ ಬಲೆಗೆ ಸಿಲುಕಿಸಿ, ನಂತರ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು  ಅಮೃತಹಳ್ಳಿ ಪೊಲೀಸರು ಬಯಲಿಗೆಳೆದ್ದಿದ್ದಾರೆ. ನಿಖಿಲ್ ಮತ್ತು ಡಿಕ್ಸನ್ ಈ ಜಾಲದ ಪ್ರಮುಖ ಆರೋಪಿಗಳಾಗಿದ್ದು, ಈ ಪೈಕಿ ನಿಖಿಲ್ ಮಾಸ್ಟರ್‌ಮೈಂಡ್ ಎಂದು ತಿಳಿದುಬಂದಿದೆ. ಆರೋಪಿಗಳು ಇನ್‌ಸ್ಟಾಗ್ರಾಮ್ ಮೂಲಕ ಪ್ರತಿಷ್ಠಿತ ಕಾಲೇಜುಗಳ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದರು. ಅಲ್ಲಿ ಅವರಿಗೆ ಡ್ರಗ್ಸ್ ಬೆರೆಸಿದ ಪಾನೀಯಗಳನ್ನು ನೀಡಿ ಅಥವಾ ನೇರವಾಗಿ ಡ್ರಗ್ಸ್ ನೀಡಿ ಪ್ರಜ್ಞಾಹೀನರನ್ನಾಗಿಸುತ್ತಿದ್ದರು.ನಂತರ ಅವರ ಮೇಲೆ ಅತ್ಯಾಚಾರ ಎಸಗಿ, ಬೆತ್ತಲೆ ವಿಡಿಯೋಗಳು ಮತ್ತು ಫೋಟೊಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದರು. ಈ ಮೂಲಕ ಅವರನ್ನು ಮತ್ತೆ ಮತ್ತೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಪಾರ್ಟಿಯ ನಂತರ ಆರೋಪಿಗಳು ಏನೂ ಅರಿಯದವರಂತೆ ವರ್ತಿಸಿ, ಕುಡಿದ ನಶೆಯಲ್ಲಿದ್ದೆವು. ಏನಾಗಿದೆ ಎಂದು ಗೊತ್ತಿಲ್ಲ ಎಂದು ನಾಟಕವಾಡುತ್ತಿದ್ದರು. ಬಹಳಷ್ಟು ಯುವತಿಯರು ತಮ್ಮ ಗೌರವಕ್ಕೆ ಹೆದರಿ, ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದರು. ಆದರೆ, ಇತ್ತೀಚೆಗೆ ನಡೆದ ಘಟನೆ ಸಂಬಂಧ ಯುವತಿಯೋರ್ವಳು ನೀಡಿರುವ ದೂರಿನಿಂದ ಆರೋಪಿಗಳ ಅಸಲಿ ಮುಖ ಬಯಲಾಗಿದೆ. ಸುಮಾರು 19 ಯುವತಿಯರ ಮೇಲೆ ದೌರ್ಜನ್ಯವಾಗಿದೆ ಎಂದು ಸಂತ್ರಸ್ತೆ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.  ಹೀಗಾಗಿ ಈ ಮಾದಕ ಜಾಲದ ಹಿಂದೆ ರಾಜಕಾರಣಿಗಳು ಮತ್ತು ದೊಡ್ಡ ಹುದ್ದೆಗಳಲ್ಲಿರುವವರು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಹನಿಟ್ರ್ಯಾಪ್​​​​ ಕೇಸ್ ಆರೋಪಿ ಯುವತಿಯಿಂದ ಸಾಮೂಹಿಕ ಅತ್ಯಾಚಾರ ದೂರು

ಹುಡುಗಿಯರನ್ನು ಬಲೆಗೆ ಬೀಳಿಸುತ್ತಿದ್ದಿದ್ದು ಹೇಗೆ?

ಆರೋಪಿಗಳಾದ ಡಿಕ್ಸನ್ ಮತ್ತು ಇತರರು ಇನ್‌ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಸಂಪರ್ಕಿಸಿ, ಫೋಟೋ ಶೂಟ್, ಮಾಡೆಲಿಂಗ್ ಅಥವಾ ಪಾರ್ಟಿಗಳ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಆರಂಭದಲ್ಲಿ ಪಬ್‌ಗಳು ಮತ್ತು ಕೆಫೆಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದರು, ಅಲ್ಲಿ ಯಾವುದೇ ಅಸಭ್ಯ ವರ್ತನೆ ಇರುತ್ತಿರಲಿಲ್ಲ. ನಂತರ, ಆಫ್ಟರ್ ಪಾರ್ಟಿ ನೆಪದಲ್ಲಿ ವಿಲ್ಲಾಗಳಿಗೆ ಆಹ್ವಾನಿಸಿ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸುತ್ತಿದ್ದರು. ಕೆಲವರು ಒಪ್ಪಿಕೊಂಡರೆ, ಕೆಲವರಿಗೆ ಮಾದಕ ದ್ರವ್ಯಗಳನ್ನು ಬಲವಂತವಾಗಿ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು. ಆರೋಪಿಗಳು ಮುಖ್ಯವಾಗಿ ಪ್ರತಿಷ್ಠಿತ ಕಾಲೇಜುಗಳ ಯುವತಿಯರನ್ನು ಗುರಿಯಾಗಿಸಿಕೊಂಡಿದ್ದರು,  ಅನ್ಯ ರಾಜ್ಯದ ಯುವತಿಯರೇ ಇವರ ಟಾರ್ಗೆಟ್​​ ಆಗಿತ್ತು. ದೂರು ನೀಡಿರುವ ಸಂತ್ರಸ್ತ ಯುವತಿ ಕೂಡ ಮೂಲತಃ ತಮಿಳುನಾಡಿನವಳು. ಡಿಕ್ಸನ್ ಈ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಸಂಪರ್ಕಿಸಿ, ವಿಶ್ವಾಸ ಗಳಿಸಿ ಪಾರ್ಟಿಗೆ ಕರೆದುಕೊಂಡು ಹೋಗಿದ್ದನು. ಆಕೆ ಸಹಕರಿಸಲು ನಿರಾಕರಿಸಿದಾಗ, ಮಾದಕ ದ್ರವ್ಯ ನೀಡಿ ಇಬ್ಬರು ಆರೋಪಿಗಳು ಬಲವಂತವಾಗಿ ಆಕೆಯನ್ನು ಮಿಸ್ಯೂಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತ ಯುವತಿ ವಿರುದ್ಧವೇ ದೂರು

ಇನ್ನು ಘಟನೆ ಸಂಬಂಧ ಫೆಬ್ರವರಿ 21ರಂದು ಯುವತಿ ದೂರು ನೀಡುವ ಮೊದಲು, ಆರೋಪಿ ನಿಖಿಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಆ ಯುವತಿ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ದೂರು ದಾಖಲಿಸಿದ್ದ. ನಂತರ, ಯುವತಿಯ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಯುವತಿಯೇ ತಪ್ಪಿತಸ್ಥೆ ಎಂದು ಬಿಂಬಿಸಲು ಯತ್ನಿಸಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಸಕಲೇಶಪುರದ ನಿಖಿಲ್​​ ಮತ್ತು ಪಶ್ಚಿಮ ಬಂಗಾಳದ ನಿಖಿಲ್​​ನ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:24 pm, Fri, 27 February 26

Follow Us
ದೈವಾರಾಧನೆಯಲ್ಲಿ 'ಮಡಿ' ಎಂದರೆ ಭಯವಲ್ಲ, ಅದು ಪರಮ ಶುಚಿತ್ವದ ಸಂಕೇತ!
ದೈವಾರಾಧನೆಯಲ್ಲಿ 'ಮಡಿ' ಎಂದರೆ ಭಯವಲ್ಲ, ಅದು ಪರಮ ಶುಚಿತ್ವದ ಸಂಕೇತ!
ಇಂದು ಶುಕ್ರವಾರ ಮಹಾಲಕ್ಷ್ಮಿಯ ಆರಾಧನೆಯಿಂದ ಸಕಲ ಐಶ್ವರ್ಯ ಸಿದ್ಧಿ!
ಇಂದು ಶುಕ್ರವಾರ ಮಹಾಲಕ್ಷ್ಮಿಯ ಆರಾಧನೆಯಿಂದ ಸಕಲ ಐಶ್ವರ್ಯ ಸಿದ್ಧಿ!
ಅಮೆರಿಕದ ಯುದ್ಧವಿಮಾನದ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ
ಅಮೆರಿಕದ ಯುದ್ಧವಿಮಾನದ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!