GST
ಜಿಎಸ್‌ಟಿ ಎಂದರೆ ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್. ಅಂದರೆ ಸರಕು ಮತ್ತು ಸೇವಾ ತೆರಿಗೆ. ಪರೋಕ್ಷ ತೆರಿಗೆ ವಿಧಾನಕ್ಕೆ (Indirect tax system) ಇದು ಸೇರುತ್ತದೆ. ಭಾರತದಲ್ಲಿ ಹಿಂದೆ ಅಸ್ತಿತ್ವದಲ್ಲಿದ್ದ ವಿವಿಧ ರೀತಿಯ ತೆರಿಗೆಗಳ ಬದಲು ಏಕ ರೀತಿಯ ಸರಳ ತೆರಿಗೆ ತೆರಿಗೆ ಪದ್ಧತಿಯಾಗಿದೆ ಜಿಎಸ್‌ಟಿ. ವಿಶ್ವಾದ್ಯಂತ ಭಾರತವೂ ಸೇರಿದಂತೆ 170ಕ್ಕೂ ಹೆಚ್ಚು ದೇಶಗಳು ಜಿಎಸ್‌ಟಿ ಟ್ಯಾಕ್ಸ್ ಸಿಸ್ಟಂ ಹೊಂದಿವೆ. ಭಾರತದಲ್ಲಿ ವಿವಿಧ ರೀತಿಯ ತೆರಿಗೆಗಳು ಸೇರಿ ಸಂಕೀರ್ಣತೆ ಸೃಷ್ಟಿಯಾಗಿತ್ತು. ಇದರಿಂದ ಸುಧಾರಣೆಗಳಿಗೆ ಮತ್ತು ಆರ್ಥಿಕ ಪ್ರಗತಿಗೆ ತುಸು ಹಿನ್ನಡೆಯಾಗುತ್ತಿತ್ತು. ಈ ತೆರಿಗೆ ಸಂಕೀರ್ಣತೆಯನ್ನು ನೀಗಿಸಿ ಸರಳಗೊಳಿಸುವ ನಿಟ್ಟಿನಲ್ಲಿ 2000ರಲ್ಲಿ ಜಿಎಸ್‌ಟಿ ಬಗ್ಗೆ ಮೂಲ ಆಲೋಚನೆ ಶುರುವಾಯಿತು. ಕೇಳ್ಕರ್ ಟ್ಯಾಸ್ಕ್ ಫೋರ್ಸ್ ಒಂದು ಸಮಗ್ರ ಪರೋಕ್ಷ ತೆರಿಗೆ ವ್ಯವಸ್ಥೆಗೆ ಶಿಫಾರಸು ಮಾಡಿತು. ಹಲವು ವರ್ಷಗಳ ಬಳಿಕ 2017ರ ಜುಲೈ 1ರಂದು ಜಿಎಸ್‌ಟಿ ಜಾರಿಗೆ ತರಲಾಯಿತು. ಭಾರತದಲ್ಲಿ ಸದ್ಯ ಐದು ಸ್ಲ್ಯಾಬ್ ಜಿಎಸ್‌ಟಿ ತೆರಿಗೆಗಳಿವೆ. 0%, 5%, 12%, 18% ಮತ್ತು 28%. ಇದರಲ್ಲಿ ಬಹಳ ಅಗತ್ಯವಾದ ಸರಕು ಮತ್ತು ಸೇವೆಗಳಿಗೆ ಕಡಿಮೆ ಜಿಎಸ್‌ಟಿ ಇರುತ್ತದೆ. ಮಾರಾಟವಾಗುವ ಹೆಚ್ಚಿನ ಸರಕು ಮತ್ತು ಸೇವೆಗಳು 12% ಮತ್ತು 18% ಸ್ಲ್ಯಾಬ್ಗಳಿಗೆ ಸೇರುತ್ತವೆ