ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು
India's 2025 Economic Reforms: 2025ರಲ್ಲಿ ಭಾರತದಲ್ಲಿ ಮೋದಿ ಸರ್ಕಾರ ಹಲವು ಮಹತ್ವದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಜಿಎಸ್‌ಟಿ 2.0 ಮೂಲಕ ತೆರಿಗೆ ಸ್ಲ್ಯಾಬ್‌ಗಳ ಕಡಿತ, 12 ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ, ಆಧುನಿಕ ಕಾರ್ಮಿಕ ಕಾನೂನುಗಳು, ಮತ್ತು ಪರಮಾಣು-ವಿಮಾ ವಲಯಗಳಲ್ಲಿ ಖಾಸಗಿ/ವಿದೇಶಿ ಹೂಡಿಕೆಗೆ ಅವಕಾಶ ನೀಡಲಾಗಿದೆ. ಈ ಸುಧಾರಣೆಗಳು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿ, ನಿಯಮಗಳನ್ನು ಸರಳೀಕರಿಸಿ, ನಾಗರಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿ ಹೊಂದಿವೆ.

2025ರಲ್ಲಿ ಭಾರತದಲ್ಲಿ ಬಹಳ ಮಹತ್ವದ ಆರ್ಥಿಕ ಸುಧಾರಣೆಗಳು ಆಗಿವೆ. ಪ್ರಜಾತಂತ್ರ ದೇಶಗಳಲ್ಲಿ ಇಷ್ಟರ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಆರ್ಥಿಕ ಸುಧಾರಣೆಗಳು (economic reforms) ನಡೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಯಾವುದೇ ಸದ್ದಿಲ್ಲದೇ ದೊಡ್ಡ ಸುಧಾರಣೆಗಳನ್ನು ಮಾಡಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಯುಪಿಎ ಅವಧಿಯಲ್ಲಿ ಘೋಷಣೆಗಳಾಗುತ್ತಿದ್ದವೇ ಹೊರತು ಅದರ ಅನುಷ್ಠಾನ ಅಷ್ಟಕಷ್ಟೇ. ಮೋದಿ ಸರ್ಕಾರ ಸದ್ದಿಲ್ಲದೇ ಕಾರ್ಯಗತಗೊಳಿಸುತ್ತದೆ. ಎರಡು ಸರ್ಕಾರಗಳ ನಡುವೆ ಇರುವ ದೊಡ್ಡ ವ್ಯತ್ಯಾಸ ಇದೆಯೇ. 2014ರಿಂದೀಚೆ ಸರ್ಕಾರ ವಿವಿಧ ಘೋಷಣೆಗಳನ್ನು ಅದೆಷ್ಟು ಅಚ್ಚುಕಟ್ಟಾಗಿ ಜಾರಿಗೆ ತಂದಿತು ಎಂಬುದನ್ನು ನೋಡಿದರೆ ಇದು ಅರಿವಾದೀತು. 2025ರಲ್ಲಿ ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ವಿವಿಧ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಯಿತು.
ಜಿಎಸ್‌ಟಿ 2.0
2014ಕ್ಕೆ ಮುಂಚೆ ಭಾರತದಲ್ಲಿ 17 ಪರೋಕ್ಷ ತೆರಿಗೆಗಳಿದ್ದವು. ತೆರಿಗೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಶ್ವಾಸ ಮತ್ತು ನಂಬಿಕೆಯೇ ಇರಲಿಲ್ಲ. ಯುಪಿಎ ಸರ್ಕಾರ ಜಿಎಸ್‌ಟಿ ಪ್ರಸ್ತಾವ ಮಾಡಿತ್ತು. ಆದರೆ, ರಾಜ್ಯಗಳಿಗೆ ಅದರ ಮೇಲೆ ವಿಶ್ವಾಸ ಇರಲಿಲ್ಲ. ಅಂತೆಯೇ, ಜಿಎಸ್‌ಟಿ ನೆನೆಗುದಿಗೇ ಉಳಿಯಿತು. ಆದರೆ, ಮೋದಿ ಸರ್ಕಾರ ಬಂದ ಬಳಿಕ 2017ರಲ್ಲಿ ಜಿಎಸ್‌ಟಿ ಜಾರಿ ಬಂದಿತು. ಕೇಂದ್ರ ಮತ್ತು ರಾಜ್ಯಗಳ ನಡುವೆ ನ್ಯಾಯಯುತವಾಗಿ ತೆರಿಗೆ ಹಂಚಿಕೆಯ ಮಾದರಿಗೆ ಎಲ್ಲರೂ ಸೈ ಎಂದರು. ಪ್ರಧಾನಿ ಮೋದಿಯಿಂದ ಮಾತ್ರವೇ ಸಾಧ್ಯವಾಗುತ್ತಿದ್ದ ಕಾರ್ಯ ಇದು.
2025ರಲ್ಲಿ ಜಿಎಸ್‌ಟಿ 2.0 ಸುಧಾರಣೆ ತರಲಾಯಿತು. ನಾಲ್ಕು ಇರುವ ಟ್ಯಾಕ್ಸ್ ಸ್ಲ್ಯಾಬ್ ಸಂಖ್ಯೆಯನ್ನು ಎರಡಕ್ಕೆ ಇಳಿಸಲಾಯಿತು. ಶೇ. 5 ಮತ್ತು ಶೇ.. 18 ಟ್ಯಾಕ್ಸ್ ಮಾತ್ರ ಇದೆ. ತಂಬಾಕು ಇತ್ಯಾದಿ ಪಾಪದ ಸರಕುಗಳನ್ನು ಬಿಟ್ಟು ಉಳಿದ ಸರಕುಗಳು ಈ ಎರಡು ಸ್ಲ್ಯಾಬ್ ದರಗಳಡಿ ಬರುತ್ತವೆ
12 ಲಕ್ಷ ರೂವರೆಗೆ ಆದಾಯ ತೆರಿಗೆ ಮಾಫಿ
2025ರಲ್ಲಿ ಬಂದ ಮಹತ್ವದ ಕ್ರಮಗಳಲ್ಲಿ ಆದಾಯ ತೆರಿಗೆ ಸುಧಾರಣೆಯೂ ಒಂದು. ಕಳೆದ ಬಾರಿಯ ಬಜೆಟ್ನಲ್ಲಿ 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಬಾಧ್ಯತೆ ಇಲ್ಲ ಎಂದು ಘೋಷಿಸಲಾಯಿತು. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿಸಿದರೆ, ಒಟ್ಟು 12.75 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ಬಾಧ್ಯತೆ ಇಲ್ಲ.
ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ
ಈ ಒಂದು ಕ್ರಮವು ಮಧ್ಯಮವರ್ಗದ ಬಹುಭಾಗ ತೆರಿಗೆ ಪಾವತಿದಾರರಿಗೆ ಟ್ಯಾಕ್ಸ್ ಬಾಧ್ಯತೆಯೇ ಇಲ್ಲದಂತೆ ಮಾಡಿದೆ. ಜನರ ಜೇಬಿಗೆ ಈಗ ಹೆಚ್ಚು ಹಣ ಸೇರಲು ಸಾಧ್ಯವಾಗಿದೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ ಎರಡು ಲಕ್ಷ ರೂ ಆದಾಯಕ್ಕೆ ಮಾತ್ರವೇ ಟ್ಯಾಕ್ಸ್ ಎಕ್ಸೆಂಪ್ಷನ್ ಇತ್ತು. ಈಗ 2025ರಲ್ಲಿ ಬಹಳ ಬದಲಾಗಿದೆ.
ಶಾಂತಿ ಬಿಲ್
ದಶಕಗಳ ಕಾಲ ಭಾರತದ ಪರಮಾಣ ವಲಯ ಅಸ್ತಿತ್ವದಲ್ಲೇ ಇಲ್ಲವೇನೋ ಎಂಬಂತಿತ್ತು. ಸರಿಯಾದ ಕಾನೂನು ರಕ್ಷಣೆ ಇರಲಿಲ್ಲ. ಖಾಸಗಿ ಕಂಪನಿಗಳು ಪಾಲ್ಗೊಳ್ಳಲು ಹಿಂದೇಟು ಹಾಕುವಂತಿತ್ತು ಸ್ಥಿತಿ. ಎಲ್ಲಾ ದೇಶಗಳು ಈ ಕ್ಷೇತ್ರದಲ್ಲಿ ಮುಂದೋಡಿದರೆ ಭಾರತ ಹಿಂದುಳಿದಿತ್ತು. ಆದರೆ, ಶಾಂತಿ ಮಸೂದೆ ಈ ಹಿನ್ನಡೆಗೆ ಬ್ರೇಕ್ ಹಾಕಿದೆ. ಖಾಸಗಿ ವಲಯವು ಪರಮಾಣ ವಿದ್ಯುತ್ ಕ್ಷೇತ್ರದಲ್ಲಿ ಭಾಗಿಯಾಗುವಂತೆ ಈ ಮಸೂದೆಯು ಅವಕಾಶ ಕೊಡುತ್ತದೆ. ಇದನ್ನು ಜಾರಿಗೊಳಿಸಲು ಬೇಕಾದ ಇಚ್ಛಾಶಕ್ತಿಯನ್ನು ಮೋದಿ ಸರಕಾರ ತೋರಿದೆ.
ಕಾರ್ಮಿಕ ಕಾನೂನು
ಇಪ್ಪತ್ತನೇ ಶತಮಾನದ ಮೂವತ್ತರ ದಶಕದಲ್ಲಿ ಬರೆದಿದ್ದ ಕಾರ್ಮಿಕ ಕಾನೂನುಗಳನ್ನು ಇಟ್ಟುಕೊಂಡು ಭಾರತ 21ನೇ ಶತಮಾನಕ್ಕೆ ಅಡ್ಡಿ ಇಟ್ಟಿತ್ತು. ರಾಜಕೀಯದ ಬೇಳೆ ಬೇಯಿಸಲು ಬೇಕಾದ ಕಾನೂನುಗಳನ್ನು ಯುಪಿಎ ಉಳಿಸಿಕೊಂಡಿತ್ತು. ಆದರೆ, ಮೋದಿ ಸರ್ಕಾರ 29 ಕಾನೂನುಗಳನ್ನು ಕಿತ್ತೆಸೆದು ನಾಲ್ಕು ಹೊಸ ಕಾರ್ಮಿಕ ಸಂಹಿತೆಯನ್ನು ರೂಪಿಸಿದೆ.
ಒಂದು ವರ್ಷದ ಬಳಿಕ ಗ್ರಾಚುಟಿ; ತಾತ್ಕಾಲಿಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ; ಸಮಾನ ವೇತನ, ಕಡ್ಡಾಯ ನೇಮಕಾತಿ ಪತ್ರ; ಸಿಂಗಲ್ ರಿಜಿಸ್ಟ್ರೇಶನ್ ಸಿಂಗಲ್ ರಿಟರ್ನ್. ಈ ಸುಧಾರಣಾ ಕ್ರಮ 2025ರಲ್ಲಿ ರೂಪಿತವಾಗಿದೆ.
ಎಂಎಸ್ಎಂಇ ಮರುವರ್ಗೀಕರಣ
ಮೊದಲಿದ್ದ ವ್ಯವಸ್ಥೆಯಲ್ಲಿ ಎಂಎಸ್ಎಂಇಗಳು ದೊಡ್ಡದಾಗಿ ಬೆಳೆದರೆ ಕೆಲ ಅನುಕೂಲಗಳನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ, 2025ರಲ್ಲಿ ಸುಧಾರಣೆ ತರಲಾಯಿತು. ಎಂಎಸ್ಎಂಇಗೆ ಇದ್ದ ಹೂಡಿಕೆ ಮತ್ತು ವಹಿವಾಟು ಮಿತಿಯನ್ನು ಹೆಚ್ಚಿಸಲಾಯಿತು. ಇದರಿಂದ ಸಣ್ಣ ಉದ್ದಿಮೆಗಳು ಹೆಚ್ಚು ಉತ್ಸಾಹದಿಂದ ವ್ಯವಹಾರದಲ್ಲಿ ಗಮನ ಹರಿಸಲು ಸಾಧ್ಯವಾಗಿದೆ.
ಆರ್ಬಿಐನಿಂದ ಕ್ಲೀನಪ್
ಆರ್ಬಿಐ ಈ ವರ್ಷ ಸುಮಾರು 9,500 ಅನವಶ್ಯಕ ಸುತ್ತೋಲೆಗಳನ್ನು ಕೈಬಿಟ್ಟಿದೆ. ಇದರಲ್ಲಿ ಕೆಲವು ಎರಡನೇ ವಿಶ್ವಮಹಾಯುದ್ಧದ ಕಾಲದ್ದೂ ಇರುವುದು ವಿಶೇಷ. ಈಗ ಬಹಳ ಸ್ಪಷ್ಟ ಇರುವ 255 ಸುತ್ತೋಲೆಗಳಿವೆ. ಆರ್ಬಿಐನ ನೀತಿ, ನಿಯಮಗಳು ಈಗ ಹೆಚ್ಚು ಸರಳ, ಸ್ಪಷ್ಟಗೊಂಡಿವೆ.
ಇದನ್ನೂ ಓದಿ: ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ
ಪಿಎಂ ಧನ್ ಧಾನ್ಯ ಯೋಜನೆ
ದಶಕಗಳಿಂದಲೂ ಸರ್ಕಾರಗಳಿಗೆ ಕೃಷಿ ನೀತಿ ಎಂದರೆ ರೈತರ ಸಾಲ ಮನ್ನಾ ಮಾಡುವುದು, ಎಂಎಸ್ಪಿ ಸಬ್ಸಿಡಿ ಕೊಡುವುದು ಇಷ್ಟೆ ಆಗಿತ್ತು. ಆದರೆ, ಪಿಎಂ ಧನ್ ಧಾನ್ಯ ಯೋಜನೆಯ ಮೂಲಕ ಮೋದಿ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯನ್ನೇ ತಂದಿದೆ.
ಜಿ ರಾಮ್ ಜಿ ಬಿಲ್
ಹಳಸಿ ಹೋಗಿರುವ, ಮತ್ತು ಸರ್ಕಾರದ ಹಣವನ್ನು ಲೂಟಿ ಮಾಡಲು ಬಳಕೆಯಾಗುತ್ತಿರುವ ಮನ್ರೇಗಾ ಯೋಜನೆಯನ್ನು ಸರ್ಕಾರ ಕೈಬಿಟ್ಟು ವಿಕಸಿತ್ ಭಾರತ್ ಜಿ ರಾಮ್ ಜಿ ಮಸೂದೆಯನ್ನು ತಂದಿದೆ. ಉದ್ಯೋಗ ಖಾತ್ರಿ ದಿನಗಳ ಸಂಖ್ಯೆ ಹೆಚ್ಚಿಸಿರುವುದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿರುವುದು ಇತ್ಯಾದಿ ಸುಧಾರಣೆಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ಷೂರೆನ್ಸ್ನಲ್ಲಿ ವಿದೇಶೀ ಹೂಡಿಕೆ
ಈ ಹಿಂದೆ ಇನ್ಷೂರೆನ್ಸ್ ಒಂದು ಚೌಕಟ್ಟಿನಲ್ಲಿ ಬಂಧಿತವಾಗಿತ್ತು. ಈಗ 2025ರಲ್ಲಿ ಸರ್ಕಾರವು ಈ ಸೆಕ್ಟರ್ನಲ್ಲಿ ನೂರಕ್ಕೆ ನೂರು ವಿದೇಶೀ ಹೂಡಿಕೆಗಳಿಗೆ ಅವಕಾಶ ಕೊಟ್ಟಿದೆ. ಇದರಿಂದ ಈ ವಲಯಕ್ಕೆ ಬಹಳ ಅಗತ್ಯವಾಗಿರುವ ಬಂಡವಾಳವು ಹರಿದುಬರಲು ಸಾಧ್ಯವಾಗುತ್ತದೆ. ಉತ್ತಮ ಇನ್ಷೂರೆನ್ಸ್ ಉತ್ಪನ್ನಗಳು, ಹೆಚ್ಚೆಚ್ಚು ಕವರೇಜ್, ಜಾಗತಿಕ ಸೌಲಭ್ಯಗಳು ಇನ್ಷೂರೆನ್ಸ್ ಗ್ರಾಹಕರಿಗೆ ಸಿಗಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




