27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?
Nifty50 beats gold and US equity in total return in last 27 years: 1998ರಿಂದ ಇಲ್ಲಿಯವರೆಗೆ 27 ವರ್ಷದಲ್ಲಿ ಚಿನ್ನದ ಹೂಡಿಕೆದಾರರಿಗೆ ಶೇ. 10.74 ಸಿಎಜಿಆರ್ನಲ್ಲಿ ರಿಟರ್ನ್ ಸಿಕ್ಕಿದೆ. ಇದೇ ವೇಳೆ, ನಿಫ್ಟಿ50ಯ ಹೂಡಿಕೆದಾರರು ಪಡೆದಿರುವ ರಿಟರ್ನ್ ಶೇ. 11.78 ಸಿಎಜಿಆರ್. ರುಪಾಯಿ ಮೌಲ್ಯ ಕುಸಿತದ ಅಂಶವನ್ನೂ ಪರಿಗಣಿಸಿ ಸಮೀರ್ ಅರೋರಾ ಈ ಅಂಕಿ ಅಂಶ ನೀಡಿದ್ದಾರೆ.

ನವದೆಹಲಿ, ಡಿಸೆಂಬರ್ 28: ಈ ವರ್ಷ ಈಕ್ವಿಟಿ ಮಾರುಕಟ್ಟೆ (Stock Market) ಬಹಳ ಸಾಧಾರಣ ಗತಿ ಪಡೆದಿದೆ. ಆದರೆ, ಚಿನ್ನದ ಬೆಲೆ ಯದ್ವಾತದ್ವ ಏರುತ್ತಿದೆ. ದೀರ್ಘಾವಧಿಯಲ್ಲೂ ಚಿನ್ನದ ಓಟ ಸ್ಥಿರವಾಗಿದೆ. ಯಾವುದೇ ವರ್ಷವೂ ಅದು ಹಿನ್ನಡೆ ಕಂಡಿಲ್ಲ. ಹೀಗಾಗಿ, ಹೂಡಿಕೆಗೆ ಈಕ್ವಿಟಿ ಮಾರುಕಟ್ಟೆ ಉತ್ತಮವೋ, ಚಿನ್ನ ಉತ್ತಮವೋ ಎನ್ನುವ ಪ್ರಶ್ನೆ ಸಹಜವಾಗಿ ಎದ್ದಿದೆ. ಎಕ್ಸ್ನಲ್ಲಿ ತಜ್ಞರಿಂದ ಇಂಥದ್ದೊಂದು ಹೋಲಿಕೆ ನಡೆದಿದೆ.
ಹೀಲಿಯೋಸ್ ಕ್ಯಾಪಿಟಲ್ ಸಂಸ್ಥೆಯ ಸಂಸ್ಥಾಪಕ ಹಾಗೂ ಫಂಡ್ ಮ್ಯಾನೇಜರ್ ಆಗಿರುವ ಸಮೀರ್ ಅರೋರಾ ಪ್ರಕಾರ ಕಳೆದ 27 ವರ್ಷದಲ್ಲಿ ಚಿನ್ನ, ಎಸ್ ಅಂಡ್ ಪಿ 500 (ಅಮೆರಿಕದ ಇಂಡೆಕ್ಸ್) ಗಿಂತ ನಿಫ್ಟಿ50 ಹೆಚ್ಚು ರಿಟರ್ನ್ ಕೊಟ್ಟಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದ ಅಂಶ ಪರಿಗಣಿಸಿ ಈ ತುಲನೆ ಮಾಡಿದ್ದಾರೆ ಅರೋರಾ.
ಸಮೀರ್ ಅರೋರಾ ಅವರು ಪ್ರಸ್ತುತಪಡಿಸಿದ ದತ್ತಾಂಶದ ಪ್ರಕಾರ, 1998ರ ಡಿಸೆಂಬರ್ 31ರಿಂದ ಇಲ್ಲಿಯವರೆಗೆ 27 ವರ್ಷದಲ್ಲಿ ನಿಫ್ಟಿ50 ಶೇ. 1,922.38ರಷ್ಟು ಬೆಳೆದಿದೆ. ಇದರ ಸಿಎಜಿಆರ್ ಶೇ. 11.78ರಷ್ಟಿದೆ.
ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ
ಚಿನ್ನ ಇದೇ ಅವಧಿಯಲ್ಲಿ ಕೊಟ್ಟಿರುವ ಒಟ್ಟು ರಿಟರ್ನ್ ಶೇ. 1,472.66 ರಷ್ಟು ಇದೆ. ಇದರ ಸಿಎಜಿಆರ್ 10.74.
ಅಮೆರಿಕದ ಈಕ್ವಿಟಿ ಮಾರುಕಟ್ಟೆಯ ಪ್ರಮುಖ ಸೂಚಿಯಾಗಿರುವ ಎಸ್ ಅಂಡ್ ಪಿ 500 ಇಂಡೆಕ್ಸ್ ಈ 27 ವರ್ಷದಲ್ಲಿ ಶೇ. 821.05 ರಿಟರ್ನ್ ನೀಡಿದೆ. ಇದರ ಸಿಎಜಿಆರ್ ಶೇ. 8.57 ಮಾತ್ರ.
ಈ ಮೇಲಿನವು ಅಮೆರಿಕದ ಡಾಲರ್ನಲ್ಲಿ ಪಡೆಯಲಾಗಿರುವ ಮೊತ್ತ. ಮತ್ತು ನಿಫ್ಟಿಯಲ್ಲಿ ಲಿಸ್ಟ್ ಆಗಿರುವ ಷೇರುಗಳಿಂದ ಸಿಕ್ಕಿರುವ ಡಿವಿಡೆಂಡ್ ಆದಾಯಗಳನ್ನೂ ಪರಿಗಣಿಸಲಾಗಿದೆ. ಅಲ್ಲದೇ, ರುಪಾಯಿ ಕರೆನ್ಸಿಯ ಮೌಲ್ಯ ಕುಸಿತವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ನಿಫ್ಟಿ ತನ್ನ ಹೂಡಿಕೆದಾರರಿಗೆ ಅಮೋಘವಾದ ಲಾಭ ಕೊಟ್ಟಿದೆ ಎನ್ನುವುದು ಸಮೀರ್ ಅವರ ಎಕ್ಸ್ ಪೋಸ್ಟ್ನಿಂದ ಸ್ಪಷ್ಟವಾಗುತ್ತದೆ.
ಸಮೀರ್ ಅರೋರಾ ಅವರ ಎಕ್ಸ್ ಪೋಸ್ಟ್
Wow. Beat this
NIFTY 50 (total return inlcuding dividends) from December 31st, 1998 to today is 1922.38% or 11.78% CAGR over near 27 years (in US$ terms)
Returns from Gold (which also Indians own in enough quantity) are 1472.66% or 10.74% p.a. over the same period(in US$ terms)… https://t.co/CCqbkoKPCl
— Samir Arora (@Iamsamirarora) December 29, 2025
ನಿಫ್ಟಿ500 ಇಂಡೆಕ್ಸ್ ಪರಿಗಣಿಸಿದರೆ, ಅದರ 27 ವರ್ಷದಲ್ಲಿ ಸಿಎಜಿಆರ್ ಬರೋಬ್ಬರಿ ಶೇ. 12.96ರಷ್ಟಾಗುತ್ತದೆ.
ನಿಫ್ಟಿ ಎಂಬುದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಸೂಚ್ಯಂಕ. ನಿಫ್ಟಿ50 ಸೂಚ್ಯಂಕ ಮೊದಲು ಚಾಲನೆಗೆ ಬಂದಿದ್ದು 1996ರಲ್ಲಿ. 1,000 ಅಂಕಗಳೊಂದಿಗೆ ಇದರ ಪ್ರಯಾಣ ಆರಂಭವಾಯಿತು. ಈ ವರ್ಷ ಅದು 26,325 ಅಂಕಗಳ ಗರಿಷ್ಠ ಮಟ್ಟ ಮುಟ್ಟಿದೆ.
ಇದನ್ನೂ ಓದಿ: ಷೇರು, ಚಿನ್ನ, ಎಫ್ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?
ನಿಫ್ಟಿ50ಯಲ್ಲಿ ಹೂಡಿಕೆ ಮಾಡುವುದು ಹೇಗೆ?
ನಿಫ್ಟಿ50 ಎಂಬುದು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಇರುವ 50 ಷೇರುಗಳ ಗುಂಪು. ನಿಫ್ಟಿ50 ಇಂಡೆಕ್ಸ್ ಫಂಡ್ಗಳು ಈ 50 ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಈ ನಿಫ್ಟಿ50 ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುವ ಇಟಿಎಫ್ಗಳು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಇಟಿಎಫ್ನಲ್ಲಿ ಹೂಡಿಕೆ ಮಾಡಬೇಕೆಂದರೆ ಡೀಮ್ಯಾಟ್ ಅಕೌಂಟ್ ತೆರೆಯಬೇಕು. ಡೀಮ್ಯಾಟ್ ಅಕೌಂಟ್ ತೆರೆದರೆ ಇಟಿಎಫ್, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಯಾವುದೇ ಷೇರುಗಳಲ್ಲಿ ನೇರವಾಗಿಯೂ ಹೂಡಿಕೆ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Mon, 29 December 25




