AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

Returns on investments from 1985 to 2025: ದೀರ್ಘಾವಧಿ ಹೂಡಿಕೆಗೆ ಯಾವುದು ಸರಿ? ಚಿನ್ನ, ಎಫ್​ಡಿ ಮತ್ತು ಷೇರು ಈ ಪೈಕಿ ಯಾವುದು ಬೆಸ್ಟ್? 1985ರಿಂದ 2025ರವರೆಗೆ ಈ 40 ವರ್ಷದಲ್ಲಿ ಈ ಮೂರು ಹೂಡಿಕೆಗಳಲ್ಲಿ ಉತ್ತಮ ರಿಟರ್ನ್ ಕೊಟ್ಟಿರುವುದು ಯಾವುದು? ವೈಟ್​ಓಕ್ ಕ್ಯಾಪಿಟಲ್ ಸಂಸ್ಥೆ ಈ 40 ವರ್ಷದಲ್ಲಿ ಹಣದುಬ್ಬರವನ್ನೂ ಸೇರಿಸಿ ಒಂದು ತುಲನೆ ಮಾಡಿದೆ.

ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2025 | 6:55 PM

Share

ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ಹೇಗೆ ಹೂಡಿಕೆ ಮಾಡಬೇಕು ಎಂಬುದು ಹೆಚ್ಚಿನವರಿಗೆ ಇರುವ ಗೊಂದಲ. ಅಲ್ಪಾವಧಿಗೆ ಹೂಡಿಕೆ ಮಾಡಲು ಠೇವಣಿ ಪ್ಲಾನ್​ಗಳು ಸೂಕ್ತ. ಆದರೆ, ದೀರ್ಘಾವಧಿ ಹೂಡಿಕೆ (Long term investment) ಮಾಡಲು ಯಾವುವು ಸೂಕ್ತ? ಚಿನ್ನದ ಬೆಲೆ ಇತ್ತೀಚೆಗೆ ನಾಗಾಲೋಟ ನಡೆಸಿರುವುದು ಬಹಳ ಜನರ ಗಮನ ಸೆಳೆದಿದೆ. ಚಿನ್ನ, ಷೇರು ಮತ್ತು ಎಫ್​ಡಿಗಳು ಜನಸಾಮಾನ್ಯರ ಪ್ರಿಯವಾದ ಹೂಡಿಕೆ ಯಂತ್ರಗಳಾಗಿವೆ. ಈ ಮೂರರಲ್ಲಿ ದೀರ್ಘಾವಧಿಯಲ್ಲಿ ಅತಿಹೆಚ್ಚು ಲಾಭ ತಂದಿರುವುದು ಯಾವುದು?

ವೈಟ್​ಓಕ್ ಕ್ಯಾಪಿಟಲ್ ಸಂಸ್ಥೆ ಕುತೂಹಲಕಾರಿ ಎನಿಸುವ ಒಂದು ತುಲನೆ ಹೆಕ್ಕಿ ತೆಗೆದಿದೆ. 1985ರಿಂದ 2015ರವರೆಗೆ 40 ವರ್ಷದಲ್ಲಿ ಚಿನ್ನ, ಸೆನ್ಸೆಕ್ಸ್ ಮತ್ತು ಎಫ್​ಡಿಗಳು ಎಷ್ಟು ರಿಟರ್ನ್ ಕೊಟ್ಟಿವೆ ಎನ್ನುವುದನ್ನು ಅವಲೋಕಿಸಿದೆ. ಹಾಗೆಯೇ, ಹಣದ ಮೌಲ್ಯ ಈ ಅವಧಿಯಲ್ಲಿ ಎಷ್ಟು ಕಡಿಮೆ ಆಗಿದೆ ಎನ್ನುವ ಅಂಶವನ್ನೂ ಅದು ಗಣನೆಗೆ ತೆಗೆದುಕೊಂಡಿದೆ. ಕುತೂಹಲಕಾರಿ ಎನಿಸುತ್ತದೆ ಆ ಮಾಹಿತಿ.

ಇದನ್ನೂ ಓದಿ: ಶೇ. 80 ವಿತ್​ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್​ಪಿಎಸ್

1985ರಲ್ಲಿ 100 ರೂ ಅನ್ನು ಚಿನ್ನ, ಸೆನ್ಸೆಕ್ಸ್, ಎಫ್​ಡಿಯಲ್ಲಿ ಹಾಕಿದ್ದರೆ ಎಷ್ಟು ಲಾಭ?

ನೀವು 1985ರಲ್ಲಿ 100 ರೂ ಹಣವನ್ನು ಬ್ಯಾಂಕ್ ಎಫ್​ಡಿ, ಅಥವಾ ಸೆನ್ಸೆಕ್ಸ್, ಅಥವಾ ಚಿನ್ನದ ಮೇಲೆ ಹಾಕಿದ್ದರೆ ಇವತ್ತು ಆ ಹೂಡಿಕೆ ಮೌಲ್ಯ ಎಷ್ಟಾಗುತ್ತಿತ್ತು? ಈ ಅವಧಿಯಲ್ಲಿ ಹಣದ ಮೌಲ್ಯ ಎಷ್ಟು ಕಡಿಮೆ ಆಗಿದೆ ಎಂಬುದನ್ನು ವೈಟ್​ಓಕ್ ಕ್ಯಾಪಿಟಲ್ ತನ್ನ ವರದಿಯಲ್ಲಿ ತೋರಿಸಿದೆ.

1985ರಲ್ಲಿ ಮಾಡಿದ 100 ರೂ ಹೂಡಿಕೆಯ ಇವತ್ತಿನ (2025ರ ಮಾರ್ಚ್) ಮೌಲ್ಯ

  • ಚಿನ್ನ: 6,518 ರೂ
  • ಬ್ಯಾಂಕ್ ಡೆಪಾಸಿಟ್: 2,100 ರೂ
  • ಸೆನ್ಸೆಕ್ಸ್: 13,484 ರೂ
  • ಹಣದುಬ್ಬರ: 1,478 ರೂ

1985ರಲ್ಲಿ ಇದ್ದ ಒಂದು ರುಪಾಯಿಯು ಈಗ ಮೌಲ್ಯದಲ್ಲಿ 14-15 ರೂಗೆ ಸಮ ಎಂಬಂತಾಗಿದೆ. 100 ರೂ ಹಣದ ಮೌಲ್ಯ ಇವತ್ತು 1,478 ರೂ ಆಗಿದೆ. ಇದು ಹಣದುಬ್ಬರದ ಎಫೆಕ್ಟ್. ಈ ಹಣದುಬ್ಬರಕ್ಕಿಂತ ಬಹಳ ಹೆಚ್ಚಿನ ಮಟ್ಟದ ಲಾಭ ತಂದುಕೊಡಬಲ್ಲ ಹೂಡಿಕೆಯು ದೀರ್ಘಾವಧಿ ಹೂಡಿಕೆಗೆ ಪ್ರಶಸ್ತವಾಗಿರುತ್ತದೆ.

ಇದನ್ನೂ ಓದಿ: ಪ್ರತ್ಯೇಕ ಇಪಿಎಫ್ ಅಕೌಂಟ್​ಗಳಿವೆಯಾ? ಎಲ್ಲವನ್ನೂ ಒಂದಕ್ಕೇ ವಿಲೀನ ಮಾಡದಿದ್ದರೆ ಏನಾಗುತ್ತೆ?

ಮೇಲೆ ತಿಳಿಸಿದ ಮಾಹಿತಿ ಪ್ರಕಾರ ಬ್ಯಾಂಕ್ ಡೆಪಾಸಿಟ್​ಗಳು ಹಣದುಬ್ಬರಕ್ಕಿಂತ ತುಸು ಹೆಚ್ಚು ಮಾತ್ರವೇ ಲಾಭ ತಂದಿವೆ. ಸೆನ್ಸೆಕ್ಸ್ ಸಾಕಷ್ಟು ಏರಿಕೆ ತಂದಿದೆಯಾದರೂ ಮಧ್ಯದಲ್ಲಿ ಕೆಲ ವರ್ಷ ಕುಸಿತವನ್ನೂ ಕಂಡಿದ್ದಿದೆ. ಇದಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಸ್ಥಿರವಾಗಿ ಏರುತ್ತಾ ಬಂದಿದೆ. ಈ 40 ವರ್ಷದಲ್ಲಿ ಅದು ಶೇ. 10-12 ಸಿಎಜಿಆರ್​ನಲ್ಲಿ ಬೆಳೆದಿರುವುದನ್ನು ಗುರುತಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ