ಪ್ರತ್ಯೇಕ ಇಪಿಎಫ್ ಅಕೌಂಟ್ಗಳಿವೆಯಾ? ಎಲ್ಲವನ್ನೂ ಒಂದಕ್ಕೇ ವಿಲೀನ ಮಾಡದಿದ್ದರೆ ಏನಾಗುತ್ತೆ?
EPFO update: ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ಗಳಿದ್ದರೆ, ಹಳೆಯ ಅಕೌಂಟ್ಗಳನ್ನು ಹೊಸ ಅಕೌಂಟ್ ಜೊತೆ ವಿಲೀನಗೊಳಿಸಿ. ಒಂದು ಇಪಿಎಫ್ ಖಾತೆಗೆ ಮೂರು ವರ್ಷದವರೆಗೆ ಯಾವುದೇ ಹಣ ಬರದಿದ್ದರೆ ಅದು ಡಾರ್ಮಂಟ್ ಅಕೌಂಟ್ ಆಗುತ್ತದೆ. ಈ ನಿಷ್ಕ್ರಿಯ ಅಕೌಂಟ್ಗಳಲ್ಲಿರುವ ಹಣಕ್ಕೆ ಯಾವುದೇ ಬಡ್ಡಿ ಸಂದಾಯ ಆಗುವುದಿಲ್ಲ. ಅಲ್ಲಿ ಹಣ ಸುಮ್ಮನೆ ಕೊಳೆಯುತ್ತಾ ಹೋಗುತ್ತದೆ.

ಒಬ್ಬ ಉದ್ಯೋಗಿಯು ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರೆ ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ಗಳಿರುವ (multiple EPF accounts) ಸಾಧ್ಯತೆ ಇರುತ್ತದೆ. ಹೊಸ ಕೆಲಸಕ್ಕೆ ಸೇರಿದಾಗೆಲ್ಲಾ ಹೊಸ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಹಿಂದೆ ಇದ್ದ ಅಕೌಂಟ್ ಅನ್ನು ಹೊಸ ಅಕೌಂಟ್ ಜೊತೆ ವಿಲೀನ ಮಾಡಬೇಕು. ಆ ರೀತಿ ಮಾಡದೇ ಇದ್ದರೆ ಕೆಲ ಹಣಕಾಸು ಲಾಭಗಳು ನಿಮ್ಮ ಕೈತಪ್ಪಬಹುದು.
ಹಳೆಯ ಇಪಿಎಫ್ ಖಾತೆ ಡಾರ್ಮಂಟ್ ಅಕೌಂಟ್ ಆಗಬಹುದು…
ಒಂದು ಇಪಿಎಫ್ ಖಾತೆಗೆ ಮೂರು ವರ್ಷದವರೆಗೆ ಯಾವುದೇ ಹಣ ಸಂದಾಯವಾಗದಿದ್ದರೆ ಅದನ್ನು ನಿಷ್ಕ್ರಿಯ ಖಾತೆ ಅಥವಾ ಡಾರ್ಮಂಟ್ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ. ಅಂಥ ಇಪಿಎಫ್ ಅಕೌಂಟ್ಗಳಿಗೆ ಸರ್ಕಾರದಿಂದ ಬಡ್ಡಿ ಸಂದಾಯ ಆಗುವುದಿಲ್ಲ. ಇದು ಬಹಳ ಮುಖ್ಯವಾದ ವಿಚಾರ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಟಿಡಿ ಸ್ಕೀಮ್ನಲ್ಲಿ 1 ಲಕ್ಷ ರೂ ಹೂಡಿಕೆಗೆ 5 ವರ್ಷದಲ್ಲಿ ಸಿಗುವ ರಿಟರ್ನ್ಸ್ ಇಷ್ಟು…
ನೀವು ಒಂದು ಕಂಪನಿಯಲ್ಲಿ 10 ವರ್ಷ ಕೆಲಸ ಮಾಡಿ, ಇಪಿಎಫ್ ಅಕೌಂಟ್ನಲ್ಲಿ 10 ಲಕ್ಷ ಇಟ್ಟುಕೊಂಡಿರುತ್ತೀರಿ. ಬೇರೆ ಕೆಲಸ ಬದಲಿಸಿದಾಗ ಹೊಸ ಅಕೌಂಟ್ಗೆ ಹಳೆಯದನ್ನು ವರ್ಗಾಯಿಸದೇ ಹಾಗೆ ಬಿಟ್ಟಿರುತ್ತೀರಿ. ಮೂರು ವರ್ಷಗಳ ಬಳಿ ನಿಮ್ಮ ಹಳೆಯ ಅಕೌಂಟ್ನಲ್ಲಿರುವ 10 ಲಕ್ಷ ರೂ ಹಣಕ್ಕೆ ಸರ್ಕಾರದಿಂದ ಬಡ್ಡಿ ಸಿಗುವುದು ನಿಂತು ಹೋಗುತ್ತದೆ. ಇದರಿಂದ ವರ್ಷಕ್ಕೆ ನಿಮಗೆ ಹಲವು ಸಾವಿರ ರೂಗಳಷ್ಟು ಆದಾಯ ಕೈತಪ್ಪಿದಂತಾಗುತ್ತದೆ.
ಹಾಗೆಯೇ, ಮತ್ತೊಂದು ಅಂಶವೆಂದರೆ ನಿಷ್ಕ್ರಿಯ ಖಾತೆಗೆ 3 ವರ್ಷಗಳವರೆಗೆ ಬಡ್ಡಿ ಸಿಗುತ್ತದಾದರೂ ಆ ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ. ಸಕ್ರಿಯ ಇಪಿಎಫ್ ಖಾತೆಗೆ ಸಂದಾಯವಾಗುವ ಬಡ್ಡಿಯನ್ನು ಟ್ಯಾಕ್ಸಬಲ್ ಇನ್ಕಮ್ ಎಂದು ಪರಿಗಣಿಸಲಾಗುವುದಿಲ್ಲ. ಅದು ತೆರಿಗೆ ಮುಕ್ತವಾಗಿರುತ್ತದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…
ಇಪಿಎಫ್ ಹಣ ವಿತ್ಡ್ರಾ ಮಾಡುವ ಮುನ್ನ ಇದು ತಿಳಿದಿರಿ…
ಇಪಿಎಫ್ ಎಂಬುದು ನಿವೃತ್ತಿಗೆ ನೆರವಾಗಲೆಂದು ಇರುವ ಉತ್ತಮ ಸ್ಕೀಮ್. ಇತರ ಸೇವಿಂಗ್ಸ್ ಸ್ಕೀಮ್ಗಳಿಗಿಂತ ಇದು ಹೆಚ್ಚಿನ ಲಾಭ ಕೊಡುತ್ತದೆ. ಇದರ ಹಣವನ್ನು ಹಾಗೇ ಕೂಡಲು ಬಿಟ್ಟರೆ ನಿವೃತ್ತಿ ವೇಳೆಗೆ ಹಲವು ಲಕ್ಷ ರೂ ಮೊತ್ತವಾಗಿರುತ್ತದೆ. ಕಷ್ಟವೆಂದು ಹೇಳಿ ಮಧ್ಯ ಮಧ್ಯದಲ್ಲಿ ಇಪಿಎಫ್ ಹಣ ಹಿಂಪಡೆದರೆ ದೀರ್ಘಾವಧಿಯಲ್ಲಿ ಹಿನ್ನಡೆಯಾಗಬಹುದು.
ಇಪಿಎಫ್ ಹಣ ಹಿಂಪಡೆಯುವ ಮುನ್ನ ಗಮನಿಸಬೇಕಾದ ಅಂಶ ಎಂದರೆ ಟ್ಯಾಕ್ಸ್ನದ್ದು. ಐದು ವರ್ಷ ವರ್ಕಿಂಗ್ ಅವಧಿ ಮುಗಿಯುವ ಮುನ್ನ ನೀವು ಇಪಿಎಫ್ ಹಣ ಹಿಂಪಡೆದರೆ ಅದಕ್ಕೆ ತೆರಿಗೆ ಅನ್ವಯ ಆಗುತ್ತದೆ. ಎರಡು ವರ್ಷ ಕೆಲಸ ಮಾಡಿ, ಇಪಿಎಫ್ ಹಣ ಹಿಂಪಡೆದರೆ ಟ್ಯಾಕ್ಸ್ ಕಟ್ಟಬೇಕಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




