EPFO
ಇಪಿಎಫ್ಒ ಎಂದರೆ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್. ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ. ಇದು ಉದ್ಯೋಗಿಗಳ ಭವಿಷ್ಯ ಕಾಲದ ಭದ್ರತೆಗೆ ಯೋಜನೆಗಳನ್ನು ರೂಪಿಸಲು ಸರ್ಕಾರ ಆರಂಭಿಸಿರುವ ಒಂದು ಸಂಸ್ಥೆ. ಮೊದಲಿಗೆ ಇದರ ವ್ಯಾಪ್ತಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೀಮಿತವಾಗಿತ್ತು. ಈಗ ಎಲ್ಲಾ ಸಂಸ್ಥೆಗಳೂ ಇದರ ವ್ಯಾಪ್ತಿಗೆ ಬರುತ್ತದೆ. ದೇಶದ ವಿವಿಧೆಡೆ 122 ಸ್ಥಳಗಳಲ್ಲಿ ಇದರ ಕಚೇರಿಗಳಿವೆ. ಇಪಿಎಫ್ಒ ನಿರ್ವಹಿಸುವ ಮುಖ್ಯ ಯೋಜನೆ ಪ್ರಾವಿಡೆಂಟ್ ಫಂಡ್. 20ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಯಾವುದೇ ಸಂಸ್ಥೆಯೂ ತಮ್ಮ ಇಪಿಎಫ್ ಯೋಜನೆ ವ್ಯಾಪ್ತಿಗೆ ಬರಬೇಕು. ತಮ್ಮ ಉದ್ಯೋಗಿಗಳಿಗೆ ಇಪಿಎಫ್ ಖಾತೆ ತೆರೆಯಬೇಕು. ಕಡಿಮೆ ಉದ್ಯೋಗಿಗಳಿರುವ ಸಂಸ್ಥೆ ಇಪಿಎಫ್ಒನಲ್ಲಿ ನೊಂದಾಯಿಸುವುದು ಐಚ್ಛಿಕ ಮಾತ್ರ. ಇಪಿಎಫ್ ಯೋಜನೆ ಪ್ರಕಾರ ಉದ್ಯೋಗಿಯ ಸಂಬಳದಲ್ಲಿ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಇಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಸಂಸ್ಥೆಯೂ ಕೂಡ ಅಷ್ಟೇ ಪ್ರಮಾಣದ ಹಣವನ್ನು ಖಾತೆಗೆ ಹಾಕುತ್ತದೆ. ಉದ್ಯೋಗಿ ನಿವೃತ್ತರಾದ ಬಳಿಕ ಈ ಹಣವನ್ನು ಪಡೆಯಬಹುದು. ಉದ್ಯೋಗಿ ಕೆಲಸ ಬದಲಿಸಿದಾಗ ಬೇರೆ ಖಾತೆ ಸೃಷ್ಟಿ ಆಗುತ್ತದಾದರೂ ಹಿಂದಿನ ಪಿಎಫ್ ಖಾತೆಗಳನ್ನು ಹೊಸ ಖಾತೆಗೆ ವಿಲೀನ ಮಾಡಬಹುದು.