AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಫ್​ನ ಪೆನ್ಷನ್ ಸ್ಕೀಮ್​ಗೆ ಅರ್ಹರಾಗಲು 10 ವರ್ಷ ಸರ್ವಿಸ್ ಬೇಕು; ಇಲ್ಲದಿದ್ದರೆ ಹಣ ಏನಾಗುತ್ತೆ?

EPFO important information: ಇಪಿಎಫ್​ಒ ನಿಯಮದ ಪ್ರಕಾರ ಒಬ್ಬ ಉದ್ಯೋಗಿಯ ಇಪಿಎಸ್ ಖಾತೆ 10 ವರ್ಷ ಸಕ್ರಿಯವಾಗಿರಬೇಕು. ಇಲ್ಲದಿದ್ದರೆ ಪಿಂಚಣಿಗೆ ಅರ್ಹರಿರುವುದಿಲ್ಲ. ಪಿಂಚಣಿ ಸಿಗಬೇಕೆಂದರೆ ಉದ್ಯೋಗಿಯ ವಯಸ್ಸು 58 ವರ್ಷ ದಾಟಿರಬೇಕು. ಒಂದು ವೇಳೆ 10 ವರ್ಷ ಸರ್ವಿಸ್ ಅವಧಿ ಪೂರೈಸಲು ಸಾಧ್ಯವಾಗದಿದ್ದರೆ ಇಪಿಎಸ್ ಹಣ ಏನಾಗುತ್ತದೆ?

ಪಿಎಫ್​ನ ಪೆನ್ಷನ್ ಸ್ಕೀಮ್​ಗೆ ಅರ್ಹರಾಗಲು 10 ವರ್ಷ ಸರ್ವಿಸ್ ಬೇಕು; ಇಲ್ಲದಿದ್ದರೆ ಹಣ ಏನಾಗುತ್ತೆ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2025 | 4:58 PM

Share

ಸರ್ಕಾರದಿಂದ ನಡೆಸಲಾಗುವ ಇಪಿಎಫ್​ಒ (EPFO) ಸ್ಕೀಮ್ ಬಗ್ಗೆ ಬಹಳ ಜನರಿಗೆ ಗೊಂದಲಗಳಿವೆ. ಇಪಿಎಫ್ ಎನ್ನುವುದು ಉದ್ಯೋಗಿಗಳ ನಿವೃತ್ತಿ ಬದುಕಿಗೆ ಆಧಾರವಾಗಲೆಂದು ರೂಪಿಸಲಾಗಿರುವ ಯೋಜನೆ. ಅದರ ಮೂಲ ಉದ್ದೇಶವೇ ಅದು. ಪ್ರತಿಯೊಬ್ಬ ಉದ್ಯೋಗಿಗೂ ಇಪಿಎಫ್ ಅಕೌಂಟ್ ಜೊತೆಗೆ ಇಪಿಎಸ್ ಅಕೌಂಟ್ ಅನ್ನೂ ತೆರೆಯಲಾಗುತ್ತದೆ. ಇಪಿಎಸ್ ಎಂದರೆ ಎಂಪ್ಲಾಯೀ ಪೆನ್ಷನ್ ಸ್ಕೀಮ್. ಉದ್ಯೋಗಿಗಳು ನಿವೃತ್ತರಾದ ಬಳಿಕ ಇಪಿಎಸ್ ಅಕೌಂಟ್​ನಲ್ಲಿ ಕಲೆಹಾಕಲಾದ ಹಣವನ್ನು ಪಿಂಚಣಿಯಾಗಿ ಅವರಿಗೆ ನೀಡಲಾಗುತ್ತದೆ.

ಒಬ್ಬ ಉದ್ಯೋಗಿಯ ಮೂಲವೇತನದಿಂದ ಶೇ. 12ರಷ್ಟು ಹಣವನ್ನು ಮುರಿದುಕೊಂಡು ಇಪಿಎಫ್ ಅಕೌಂಟ್​ಗೆ ಪ್ರತೀ ತಿಂಗಳೂ ಹಾಕಲಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ಉದ್ಯೋಗದಾತರೂ ನೀಡುತ್ತಾರೆ. ಆದರೆ, ಇಲ್ಲಿ ಉದ್ಯೋಗದಾತರ (ಕೆಲಸ ಮಾಡುವ ಕಂಪನಿ) ಹಣವು ಉದ್ಯೋಗಿಯ ಇಪಿಎಫ್ ಮತ್ತು ಇಪಿಎಸ್ ಅಕೌಂಟ್​ಗಳಿಗೆ ಹಂಚಿಕೆ ಆಗುತ್ತದೆ. ಈ 12 ಪರ್ಸೆಂಟ್ ಹಣದಲ್ಲಿ 8.33 ಪರ್ಸೆಂಟ್ ಹಣವು ಇಪಿಎಸ್​ಗೆ ಹೋಗುತ್ತದೆ. ಉಳಿದ 3.67 ಪರ್ಸೆಂಟ್ ಹಣವು ಇಪಿಎಫ್ ಅಕೌಂಟ್​ಗೆ ಹೋಗುತ್ತದೆ.

ಇದನ್ನೂ ಓದಿ: ಪಿಎಫ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತಾ? ಇವು ತಿಳಿದಿರಿ

ಕನಿಷ್ಠ 10 ವರ್ಷ ಸರ್ವಿಸ್ ಆಗಿರಬೇಕು…

ಇಪಿಎಸ್ ಸ್ಕೀಮ್​ನಲ್ಲಿ ನೀವು ಪಿಂಚಣಿ ಪಡೆಯಬೇಕಾದರೆ ವಯಸ್ಸು 58 ವರ್ಷ ಆಗಿರಬೇಕು. ಕನಿಷ್ಠ 10 ವರ್ಷ ಸರ್ವಿಸ್ ಮಾಡಿರಬೇಕು. ನೀವು 9 ವರ್ಷ ಸರ್ವಿಸ್ ಮಾಡಿ ಕೆಲಸ ಬಿಟ್ಟುಬಿಟ್ಟರೆ ಪಿಂಚಣಿಗೆ ಅರ್ಹರಾಗಿರುವುದಿಲ್ಲ.

10 ವರ್ಷ ಸರ್ವಿಸ್ ಮಾಡಿ 40 ವರ್ಷ ವಯಸ್ಸಿಗೆ ಕೆಲಸ ಬಿಟ್ಟರೂ ತತ್​ಕ್ಷಣಕ್ಕೆ ಪಿಂಚಣಿ ಸಿಗುವುದಿಲ್ಲ. ನೀವು ಪಿಂಚಣಿ ಸಿಗಬೇಕಾದರೆ 58 ವರ್ಷ ವಯಸ್ಸು ಆಗುವವರೆಗೂ ಕಾಯಬೇಕಾಗುತ್ತದೆ. 50 ವರ್ಷ ದಾಟಿದ ಬಳಿಕ ಪಿಂಚಣಿ ಪಡೆಯಬಹುದಾದರೂ ಮೊತ್ತ ಕಡಿಮೆ ಸಿಗುತ್ತದೆ.

10 ವರ್ಷ ಸರ್ವಿಸ್ ಆಗದಿದ್ದರೆ ಇಪಿಎಸ್ ಹಣ ಏನಾಗುತ್ತೆ?

ನೀವು ವರ್ಷ ಕೆಲಸ ಮಾಡಲು ಆಗದೇ ಇದ್ದರೆ, ಅಂದರೆ ಇಪಿಎಸ್ ಅಕೌಂಟ್ 10 ವರ್ಷ ಸಕ್ರಿಯವಾಗಿಲ್ಲದೇ ಇದ್ದಲ್ಲಿ ಪಿಂಚಣಿಗೆ ಅರ್ಹರಾಗಿರುವುದಿಲ್ಲ. ಆದರೆ, ಆ ಅಕೌಂಟ್​ನಲ್ಲಿ ಜಮೆ ಆಗಿರುವ ಹಣ ಎಲ್ಲೂ ಹೋಗೋದಿಲ್ಲ. ನೀವು ಅದನ್ನು ಹಿಂಪಡೆಯಬಹುದು. ಇಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ಹೇಗೆ ವಾರ್ಷಿಕವಾಗಿ ಬಡ್ಡಿ ಜಮೆ ಆಗುತ್ತಿರುತ್ತದೋ ಇಪಿಎಸ್ ಅಕೌಂಟ್​ಗೂ ಬಡ್ಡಿ ಸೇರುತ್ತಾ ಹೋಗುತ್ತಿರುತ್ತದೆ.

ಇದನ್ನೂ ಓದಿ: ಆಸ್ತಿ ಇದ್ದೂ ಪರದಾಡುತ್ತಿದ್ದೀರಾ? ಮನೆ ಮಾರದೆಯೇ ಮಾಸಿಕ ಆದಾಯ ಸೃಷ್ಟಿಸಿ… ಇದು ರಿವರ್ಸ್ ಮಾರ್ಟ್​ಗೇಜ್ ಸ್ಕೀಮ್

ಇಪಿಎಫ್ ಅಕೌಂಟ್​ನಲ್ಲಿರುವ ದುಡ್ಡಿನಿಂದ ಪಿಂಚಣಿ ಸಿಗಲ್ಲವಾ?

ಇಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ನಿವೃತ್ತಿ ನಂತರ ಪಡೆಯಬೇಕೆಂಬುದು ಯೋಜನೆಯ ಮೂಲ ಉದ್ದೇಶ. ಆದರೆ, ಕಾಲಮಧ್ಯದಲ್ಲಿ ತುರ್ತು ಅಗತ್ಯಗಳಿಗೆ ಬೇಕಾಗಬಹುದು ಎನ್ನುವ ದೃಷ್ಟಿಯಿಂದ ಅವಧಿಗೆ ಮುನ್ನವೇ ಕೆಲ ಇಪಿಎಫ್ ಹಣವನ್ನು ಹಿಂಪಡೆಯುವ ಅವಕಾಶ ಕೊಡಲಾಗಿದೆ. ನೀವು ಯಾವತ್ತೂ ಕೂಡ ಅಡ್ವಾನ್ಸ್ ಆಗಿ ಹಣ ಪಡೆಯದೇ ಹಾಗೇ ಉಳಿಸಿಕೊಂಡಿದ್ದಲ್ಲಿ 58 ವರ್ಷದ ಬಳಿಕ ಪಿಎಫ್​ನ ಎಲ್ಲಾ ಹಣವನ್ನೂ ಲಂಪ್ಸಮ್ ಆಗಿ ಪಡೆಯಬಹುದು. ಇಪಿಎಸ್ ಅಕೌಂಟ್​ನಲ್ಲಿರುವ ಹಣ ಮಾತ್ರವೇ ಪಿಂಚಣಿಗೆ ಬಳಕೆ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ