ಪಿಎಫ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತಾ? ಇವು ತಿಳಿದಿರಿ
EDLI life insurance coverage for EPF subscribers: ಇಪಿಎಫ್ ಖಾತೆ ಹೊಂದಿದ ಎಲ್ಲರಿಗೂ ಲೈಫ್ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಡ್ ಇನ್ಷೂರೆನ್ಸ್ ಸ್ಕೀಮ್ನಲ್ಲಿ ಇಪಿಎಫ್ ಸದಸ್ಯರನ್ನು ಒಳಗೊಂಡಿರಲಾಗುತ್ತದೆ. ಖಾತೆದಾರರ ಸರಾಸರಿ ವೇತನ ಹಾಗೂ ಪಿಎಫ್ ಬ್ಯಾಲನ್ಸ್ಗೆ ಅನುಗುಣವಾಗಿ 2.5 ಲಕ್ಷ ರೂನಿಂದ 7 ಲಕ್ಷ ರೂವರೆಗೆ ಇನ್ಷೂರೆನ್ಸ್ ಪರಿಹಾರ ಸಿಗುತ್ತದೆ.

ಖಾಸಗಿ ಸೆಕ್ಟರ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇಪಿಎಫ್ ಸ್ಕೀಮ್ (EPFO) ಬಹಳ ವರದಾನವಾಗಿದೆ. ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್ನಲ್ಲಿ ಹಣ ಉಳಿತಾಯದ ಜೊತೆಗೆ ಇನ್ಷೂರೆನ್ಸ್ ಲಾಭವೂ ಇರುತ್ತದೆ. ಈ ವಿಚಾರ ಹೆಚ್ಚಿನ ಇಪಿಎಫ್ ಸದಸ್ಯರಿಗೆ ತಿಳಿದಿಲ್ಲ ಎಂಬುದು ನಿಜ. ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಡ್ ಇನ್ಷೂರೆನ್ಸ್ (EDLI- Employees Deposit Linked Insurance) ಸ್ಕೀಮ್ ಮೂಲಕ ಉದ್ಯೋಗಿಗಳಿಗೆ ಜೀವ ವಿಮೆ ಕವರೇಜ್ ಸಿಗುತ್ತದೆ. ಇಪಿಎಫ್ ಅಕೌಂಟ್ ಸಕ್ರಿಯವಾಗಿರುವ ಅವಧಿಯಲ್ಲಿ ಉದ್ಯೋಗಿ ಸಾವನ್ನಪ್ಪಿದರೆ ಅವರ ಕುಟುಂಬದವರಿಗೆ ಇನ್ಷೂರೆನ್ಸ್ ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ.
ಏನಿದು ಇಡಿಎಲ್ಐ ಸ್ಕೀಮ್?
ಇಡಿಎಲ್ಐ ಎಂಬುದು ಇಪಿಎಫ್ ಸದಸ್ಯರಿಗೆ ನೀಡಲಾಗುವ ಇನ್ಷೂರೆನ್ಸ್ ಸ್ಕೀಮ್. ಇಪಿಎಫ್ ಸದಸ್ಯರೆಲ್ಲರಿಗೂ ಈ ಸ್ಕೀಮ್ ಅನ್ವಯ ಆಗುತ್ತದೆ. ನಿಮ್ಮಲ್ಲಿ ಇಪಿಎಫ್ ಅಕೌಂಟ್ ಸಕ್ರಿಯವಾಗಿದ್ದರೆ ಈ ಇನ್ಷೂರೆನ್ಸ್ ಸ್ಕೀಮ್ ಕೂಡ ಸಕ್ರಿಯವಾಗಿರುತ್ತದೆ. ಉದ್ಯೋಗಿಗಳ ಶೇ. 0.5ರಷ್ಟು ವೇತನವನ್ನು ಈ ಸ್ಕೀಮ್ಗೆ ಕಡಿತಗೊಳಿಸಲಾಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಹೂಡಿಕೆ; ಲಕ್ಷ ರೂಗೆ 44,800 ರೂ ಲಾಭ
ಈ ಇಡಿಎಲ್ಐ ಸ್ಕೀಮ್ ಅಡಿಯಲ್ಲಿ ಕನಿಷ್ಠ ಖಾತ್ರಿ 2.5 ಲಕ್ಷ ರೂ ಇರುತ್ತದೆ. ಸೇವಾವಧಿಯಲ್ಲಿ ಇಪಿಎಫ್ ಸದಸ್ಯ ಮೃತಪಟ್ಟರೆ ಅವರ ಕುಟುಂಬಕ್ಕೆ 7 ಲಕ್ಷ ರೂವರೆಗೂ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ.
ಇಡಿಎಲ್ಐ ಸ್ಕೀಮ್ ಅಡಿ ಎಷ್ಟು ಇನ್ಷೂರೆನ್ಸ್ ಪರಿಹಾರ ಸಿಗುತ್ತೆ?
ಮೇಲೆ ತಿಳಿಸಿದಂತೆ ಇಪಿಎಫ್ ಸದಸ್ಯರ ಕುಟುಂಬಕ್ಕೆ 2.5 ಲಕ್ಷ ರೂನಿಂದ 7 ಲಕ್ಷ ರೂವರೆಗೆ ಇನ್ಷೂರೆನ್ಸ್ ಪರಿಹಾರ ಕೊಡಲಾಗುತ್ತದೆ. ಇಪಿಎಫ್ ಸದಸ್ಯ ಮೃತಪಡುವ ಹಿಂದಿನ 12 ತಿಂಗಳ ಸರಾಸರಿ ಪಿಎಫ್ ಹಣವನ್ನು ಗಣಿಸಲಾಗುತ್ತದೆ.
ಇದನ್ನೂ ಓದಿ: EPFO New Rules: ಮಿನಿಮಮ್ ಬ್ಯಾಲನ್ಸ್, 100% ವಿತ್ಡ್ರಾಯಲ್ ಸೇರಿದಂತೆ ಬರಲಿವೆ ಇಪಿಎಫ್ ಹೊಸ ನಿಯಮಗಳು
ಅಥವಾ, 12 ತಿಂಗಳ ಸರಾಸರಿ ಮಾಸಿಕ ವೇತನದ 35 ಪಟ್ಟು ಹಣ ಹಾಗೂ ಸರಾಸರಿ ವೇತನದ ಅರ್ಧದಷ್ಟು (ಗರಿಷ್ಠ 1.75 ಲಕ್ಷ ರೂ) ಮೊತ್ತವನ್ನು ಗಣಿಸಲಾಗುತ್ತದೆ. ಇಲ್ಲಿ ಗರಿಷ್ಠ ವೇತನ 15,000 ಇದೆ. ಹೆಚ್ಚಿನ ಇಪಿಎಫ್ ಸದಸ್ಯರಿಗೆ 7 ಲಕ್ಷ ರೂ ಇನ್ಷೂರೆನ್ಸ್ ಕವರೇಜ್ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




