ಅತ್ಯಾಚಾರ, ಕೊಲೆ ಬೆದರಿಕೆ ಆರೋಪ: ಮಾಜಿ ಶಾಸಕ ಪೊಲೀಸರ ವಶಕ್ಕೆ
ಉತ್ತರ ಪ್ರದೇಶದ ಮಾಜಿ ಶಾಸಕ ಭಗವಾನ್ ಶರ್ಮಾ ಅವರನ್ನು ಬೆಂಗಳೂರಿನಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ. ಆಗಸ್ಟ್ 16 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಅವರ ಮೇಲಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Aug 18, 2025
- 4:22 pm
ಟ್ರಯಾಂಗಲ್ ಲವ್ ಸ್ಟೋರಿ: ಹಳೇ ಬಾಯ್ ಫ್ರೆಂಡ್ನಿಂದ ಹೊಸ ಪ್ರಿಯಕರನಿಗೆ ಚಾಕು ಇರಿತ
ಇದೊಂದು ಟ್ರಯಾಂಗಲ್ ಲವ್ ಸ್ಟೋರಿ. ಮಾಜಿ ಪ್ರಿಯಕರ ಹಾಲಿ ಪ್ರಿಯಕರನಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ನಡೆದಿದೆ. ಚಾಕು ಇರಿತದಿಂದ ಗಾಯಗೊಂಡ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Aug 17, 2025
- 3:10 pm
ಬೆಂಗಳೂರು: ಹಾಡಹಗಲೇ ಲೇಡಿಸ್ ಪಿಜಿಗೆ ನುಗ್ಗಿದ ಖದೀಮ; ಚಾಕು ತೋರಿಸಿ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ
ಇತ್ತೀಚೆಗೆ ಬೆಂಗಳೂರಿನಲ್ಲಿ ಪಿಜಿ ಒಂದಕ್ಕೆ ವಿದ್ಯಾರ್ಥಿನಿ ಸೇರಿ ಕೇವಲ 10 ದಿನಲ್ಲಿ ಮಾಲೀಕನಿಂದಲೇ ಅತ್ಯಾಚಾರವೆಸಲಾಗಿತ್ತು. ಇದೀಗ ಮತ್ತೊಂದು ಘಟನೆ ನಡೆದಿದೆ. ಮಹಿಳಾ ಅಧಿಕಾರಿಗೆ ಚಾಕು ತೋರಿಸಿ ಬೆದರಿಸಿ ಲೈಂಗಿಕ ದೌರ್ಜನ್ಯವೆಸಗಿ ದರೋಡೆ ಮಾಡಿರುವಂತಹ ಕೃತ್ಯ ನಡೆದಿದೆ. ಸದ್ಯ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿದೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Aug 13, 2025
- 12:34 pm
ಬೆಂಗಳೂರಿನಲ್ಲಿ ಸಿಮ್ ಕರೆಗಳ ಕನ್ವರ್ಟ್ ಜಾಲ: ಸೈಬರ್ ಕ್ರೈಂ ಪೊಲೀಸರಿಂದ ಕೇರಳದ ಇಬ್ಬರ ಬಂಧನ
ಅವರಿಗೆ ವಿದೇಶದಲ್ಲಿರುವ ಬಡ ಕಾರ್ಮಿಕರೇ ಬಂಡವಾಳ. ದೂರದ ದೇಶದಿಂದ ತಮ್ಮವರಿಗೆ ಕರೆ ಮಾಡಬೇಕು ಅಂದರೆ ಅಪಾರ ಪ್ರಮಾಣದಲ್ಲಿ ಹಣ ಬೇಕಾಗುತ್ತದೆ. ಅದರೆ, ಬೆಂಗಳೂರಿನ ಈ ಇಬ್ಬರು ಆಸಾಮಿಗಳು ವಿದೇಶಿ ಕರೆಗಳನ್ನು ಕನ್ವರ್ಟ್ ಮಾಡುತ್ತೇವೆಂದು ಕೋಟ್ಯಂತರ ರೂ. ವಂಚಿಸಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Aug 5, 2025
- 9:16 am
ಬೆಂಗಳೂರು: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿಯಿಂದ ಅಸಭ್ಯ ವರ್ತನೆ!
ಬೆಂಗಳೂರಿನ ಕೆಂಗೇರಿಯಲ್ಲಿ ಜಾಗದ ವಿಚಾರವಾಗಿ ಮಹಿಳೆ ಮತ್ತು ಸೆಕ್ಯೂರಿಟಿ ಮಧ್ಯೆ ಗಲಾಟೆ ಉಂಟಾಗಿದೆ. ಈ ವೇಳೆ ಸಾರ್ವಜನಿಕವಾಗಿ ಮಹಿಳೆಯನ್ನು ನಿಂದಿಸುವುದರೊಂದಿಗೆ ಪ್ಯಾಂಟ್ ಜಿಪ್ ಅನ್ನು ತೆಗೆದು ಮಾರ್ಮಾಂಗ ತೋರಿಸಲು ಮುಂದಾಗಿರುವಂತಹ ಘಟನೆ ನಡೆದಿದೆ. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Aug 4, 2025
- 1:37 pm
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯದಲ್ಲಿ ಏನಿದೆ?
ನಿಶ್ಚಿತ್ ಎಂಬ ಬಾಲಕನ ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಕನ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟ್ಯೂಷನ್ ಸೆಂಟರ್ನಿಂದ ಹೊರಬಂದ ನಂತರ ಹಂತಕರು ಬಾಲಕನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದರು.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Aug 2, 2025
- 10:48 am
ಪಿಸ್ತೂಲ್ ಮಿಸ್ ಫೈರ್: ಪ್ರಿಯಕರನ ಗನ್ನಿಂದ ಪ್ರೇಯಸಿಯ ಹೊಟ್ಟೆಗೆ ಹೊಕ್ಕಿದ ಬುಲೆಟ್
ಮಿಸ್ ಫೈರಿಂಗ್ ಘಟನೆಯಲ್ಲಿ ಬೆಂಗಳೂರಿನ ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಯುವತಿ, ಪ್ರಿಯಕರನ ಗನ್ ಪರಿಶೀಲಿಸುವಾಗ ಮಿಸ್ ಫೈರಿಂಗ್ ಆಗಿದೆ. ಗುಂಡು ತಗುಲಿದ ಪರಿಣಾಮ ಯುವತಿಯ ಒಂದು ಕಿಡ್ನಿಯನ್ನು ತೆಗೆಯಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Jul 30, 2025
- 3:37 pm
ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ: ಕಂಪನಿಯ ಸರ್ವರ್ ಹ್ಯಾಕ್, 378 ಕೋಟಿ ರೂ. ಮಾಯ
ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ನೆಬಿಲೊ ಟೆಕ್ನಾಲಜೀಸ್ನ ಸರ್ವರ್ ಹ್ಯಾಕ್ ಮಾಡಿ ಕೋಟ್ಯಾಂತರ ರೂಪಾಯಿ ಕಳವು ಮಾಡಲಾಗಿದೆ. ಪ್ರಕರಣ ಸಂಬಂಧ ಕಂಪನಿಯ ಉದ್ಯೋಗಿ ರಾಹುಲ್ ಅಗರ್ವಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಲ್ಯಾಪ್ಟಾಪ್ ಮೂಲಕ ಸರ್ವರ್ ಹ್ಯಾಕ್ ಆಗಿರುವುದು ತನಿಖೆಯಿಂದ ತಿಳಿದುಬಂದಿದೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Jul 30, 2025
- 2:57 pm
ಲವರ್ಸ್ ಜೊತೆ ಗೋವಾಕ್ಕೆ ಹೋಗಲು ಹಣ ಇಲ್ಲದೆ ಕಳ್ಳತನದ ಹಾದಿ ಹಿಡಿದ ವಿದ್ಯಾರ್ಥಿಗಳು
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬೆಂಗಳೂರಿನ ಕೊತ್ತನೂರು ಪೊಲೀಸರು ಮೂವರು ಬಿಕಾಂ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳ ಬಳಿ ಇದ್ದ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ ಮತ್ತು 10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕಳ್ಳತನ ಹಾದಿ ಹಿಡಿದ್ದು ಏಕೆ? ಇಲ್ಲಿದೆ ವಿವರ
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Jul 29, 2025
- 5:16 pm
ಕಲಾಸಿಪಾಳ್ಯದಲ್ಲಿ ಸ್ಫೋಟಕ ಪತ್ತೆ: 3 ಬಂಧನ, ವಿಚಾರಣೆ ವೇಳೆ ಅಸಲಿ ಸತ್ಯ ಬಾಯಿಬಿಟ್ಟ ಆರೋಪಿಗಳು
ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಜುಲೈ 23 ರಂದು ಪತ್ತೆಯಾದ ಸ್ಫೋಟಕಗಳ ಪ್ರಕರಣದಲ್ಲಿ ಪೊಲೀಸರು ಕೋಲಾರ ಮೂಲದ ಮೂವರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ 22 ಜಿಲೆಟಿನ್ ಕಡ್ಡಿ ಮತ್ತು 30 ಡಿಟೋನೇಟರ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಆರೋಪಿಗಳ ಹುಡುಕಾಟ ಕಾರ್ಯಚರಣೆ ಮುಂದುವರೆದಿದೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Jul 29, 2025
- 12:45 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಸುಂದರಿಯ ಹಿಂದೆ ಹೋದ ಟೆಕ್ಕಿಗೆ ಪಂಗನಾಮ
ಬೆಂಗಳೂರಿಲ್ಲಿ ಹನಿಟ್ರ್ಯಾಪ್ ಜಾಲ ಪಕ್ರರಣಗಳು ಮೇಲಿಂದ ಮೇಲೆ ದಾಖಲಾಗುತ್ತಿವೆ. ಇತ್ತೀಚಿಗಷ್ಟೇ ಓರ್ವ ಶಿಕ್ಷಕಿ ಹನಿಟ್ರ್ಯಾಪ್ ಮಾಡಿ ಓರ್ವ ಪೋಷಕನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಳು. ಈ ಬೆನ್ನಲ್ಲೇ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ದಾಖಲಾಗಿವೆ. ಆರೋಪಿಗಳು ಟೆಕ್ಕಿಯನ್ನು ತಮ್ಮ ಖೆಡ್ಡಗೆ ಕೆಡವಿಕೊಂಡು ಹೆದರಿಸಿ ಲಕ್ಷಾಂತರ ರೂಪಾಯಿ ಪಡೆದಿದ್ದಾರೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Jul 28, 2025
- 3:12 pm
Lokayukta Raid: ಆದಾಯಕ್ಕೂ ಮೀರಿ ಗಳಿಕೆ ಆರೋಪ; ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ
ಕರ್ನಾಟಕದ ವಿವಿಧೆಡೆ ಬುಧವಾರ ಲೋಕಾಯುಕ್ತ ದಾಳಿ ಮಾಡಿದೆ. ಅಕ್ರಮ ಆದಾಯ ಗಳಿಕೆ ಆರೋಪ ಕೇಳಿಬಂದ ಹಿನ್ನಲ್ಲೆ ಐಎಎಸ್ ಸೇರಿದಂತೆ ಹಲವು ಅಧಿಕಾರಿ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಆ ಮೂಲಕ ಬೆಳ್ಳಂ ಬೆಳಗ್ಗೆ ಶಾಕ್ ನೀಡಲಾಗಿದೆ. ಎಲ್ಲೆಲ್ಲಿ ಮತ್ತು ಯಾರ ಯಾರ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ ಎಂಬ ಮಾಹಿತಿ ಇಲ್ಲಿದೆ.
- ಪ್ರಜ್ವಲ್ ಕುಮಾರ್ ಎನ್ ವೈ
- Updated on: Jul 23, 2025
- 10:24 am