AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST ಆಫೀಸರ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಹೌಸ್ ಕೀಪಿಂಗ್ ಸಿಬ್ಬಂದಿ! ಗುಟ್ಕಾ ವ್ಯಾಪಾರಿಗೆ ಬೆದರಿಸಿ ವಂಚನೆ

ಬೆಂಗಳೂರಿನಲ್ಲಿ ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಗುಟ್ಕಾ ವ್ಯಾಪಾರಿಗೆ ವಂಚನೆ ನಡೆದಿದೆ. ಜಿಎಸ್‌ಟಿ ಕಚೇರಿಯ ಹೊರಗುತ್ತಿಗೆ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ ದಾದಾಪೀರ್ ಮತ್ತು ನಾಗರಾಜ್ ನಕಲಿ ಗುರುತಿನ ಚೀಟಿ ಬಳಸಿ 5 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಬನಶಂಕರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಸಾರ್ವಜನಿಕರು ಇಂತಹ ಬೆದರಿಕೆಗಳಿಗೆ ಜಗ್ಗದಂತೆ ಪೊಲೀಸರು ಮನವಿ ಮಾಡಿದ್ದಾರೆ.

GST ಆಫೀಸರ್ ಹೆಸರಲ್ಲಿ  ಲಕ್ಷ ಲಕ್ಷ ದೋಚಿದ ಹೌಸ್ ಕೀಪಿಂಗ್ ಸಿಬ್ಬಂದಿ! ಗುಟ್ಕಾ ವ್ಯಾಪಾರಿಗೆ ಬೆದರಿಸಿ ವಂಚನೆ
ಸಾಂದರ್ಭಿಕ ಚಿತ್ರImage Credit source: TV9 Network
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Feb 26, 2026 | 7:49 AM

Share

ಬೆಂಗಳೂರು, ಫೆಬ್ರವರಿ 26: ಜಿಎಸ್‌ಟಿ (GST) ಅಧಿಕಾರಿಗಳ ಹೆಸರಿನಲ್ಲಿ ಗುಟ್ಕಾ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರು (Bangalore) ಬನಶಂಕರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳು ಕೇಂದ್ರ ಸರ್ಕಾರದ ಜಿಎಸ್‌ಟಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಬಂಧಿತರನ್ನು ದಾದಾಪೀರ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ. ಇವರು ಬನಶಂಕರಿಯ ಬಿಎಂಟಿಸಿ ಬಸ್ ನಿಲ್ದಾಣದ ಕಟ್ಟಡದಲ್ಲಿರುವ ಜಿಎಸ್‌ಟಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈ ಹಿಂದೆ ಇಂದಿರಾನಗರ ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಕಚೇರಿಗಳಲ್ಲೂ ಕೆಲಸ ನಿರ್ವಹಿಸಿ ಅಧಿಕಾರಿಗಳ ವಿಶ್ವಾಸ ಗಳಿಸಿದ್ದರು. 2016ರಿಂದ ಬನಶಂಕರಿ ಜಿಎಸ್‌ಟಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿಗಳ ಸೋಗಿನಲ್ಲಿ ಕೃತ್ಯ

ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಪೀಣ್ಯ ಭಾಗದ ಗುಟ್ಕಾ ವ್ಯಾಪಾರಿಯೊಬ್ಬರ ಮನೆಗೆ ತೆರಳಿದ್ದರು. ‘ನೀವು ನಿಯಮ ಉಲ್ಲಂಘನೆ ಮಾಡಿದ್ದೀರಿ, ನಿಮ್ಮ ಗೋಡೌನ್ ಹಾಗೂ ಕಚೇರಿಗೆ ದಾಳಿ ಮಾಡುತ್ತೇವೆ’ ಎಂದು ಬೆದರಿಸಿ ಐದು ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು. ಭಯಗೊಂಡ ವ್ಯಾಪಾರಿ ಹಣ ನೀಡಿದ್ದಾನೆ ಎನ್ನಲಾಗಿದೆ.

ಕಚೇರಿಯಲ್ಲೇ ಹಣ ಇಟ್ಟು ಲಾಕ್!

ಹಣ ಪಡೆದ ಬಳಿಕ, ವಿಚಾರ ಯಾರಿಗಾದರೂ ತಿಳಿಸಿದರೆ ಮತ್ತೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಆರೋಪಿಗಳು ಆ ಹಣವನ್ನು ಮನೆಗೆ ತೆಗೆದುಕೊಂಡು ಹೋಗದೆ ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದರು. ಇದೇ ವೇಳೆ ಜಿಎಸ್‌ಟಿ ಅಧಿಕಾರಿಗಳ ಪರಿಶೀಲನೆಯ ಸಂದರ್ಭದಲ್ಲಿ ಐದು ಲಕ್ಷ ರೂಪಾಯಿ ಪತ್ತೆಯಾಗಿ ಅನುಮಾನ ಮೂಡಿದೆ. ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ಜಿಎಸ್‌ಟಿ ಸೂಪರಿಂಟೆಂಡೆಂಟ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ನಕಲಿ ಗುರುತಿನ ಚೀಟಿ ತಯಾರಿಸಲು ಇನ್ನಾರದರೂ ಸಹಾಯ ಮಾಡಿದ್ದಾರೆ? ಇಂತಹ ಕೃತ್ಯವನ್ನು ಇದಕ್ಕೂ ಮೊದಲು ನಡೆಸಿದ್ದಾರೆಯೇ? ಎಂಬ ಕುರಿತು ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಬೆಂಗಳೂರು: ಅಕ್ರಮ ವಲಸಿಗರ ವಿರುದ್ಧ ಪೊಲೀಸರ ಭರ್ಜರಿ ಬೇಟೆ, ಒಂದೇ ದಿನ 2000ಕ್ಕೂ ಹೆಚ್ಚು ಮಂದಿಯ ವಿಚಾರಣೆ

ಅಧಿಕಾರಿಗಳ ಹೆಸರಿನಲ್ಲಿ ಯಾರಾದರೂ ಹಣದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಸಂಬಂಧಿತ ಕಚೇರಿಯೊಂದಿಗೆ ದೃಢಪಡಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!
ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ