AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NPS: ಶೇ. 80 ವಿತ್​ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್​ಪಿಎಸ್

Key amendments in National Pension System: ರಿಟೈರ್ಮೆಂಟ್​ಗೆಂದು ರೂಪಿಸಲಾಗಿರುವ ಎನ್​ಪಿಎಸ್ ಸ್ಕೀಮ್​ನಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. 5 ವರ್ಷದಷ್ಟಿದ್ದ ಲಾಕಿನ್ ಪೀರಿಯಡ್ ಅನ್ನು ಸರ್ಕಾರೀ ನೌಕರರೇತರರಿಗೆ ತೆಗೆದುಹಾಕಲಾಗಿದೆ. ಶೇ. 60 ಇದ್ದ ಲಂಪ್ಸಮ್ ವಿತ್​​ಡ್ರಾಯಲ್ ಮಿತಿಯನ್ನು ಶೇ. 80ಕ್ಕೆ ಏರಿಸಲಾಗಿದೆ. ಪ್ರೀಮೆಚ್ಯೂರ್ ವಿತ್​ಡ್ರಾಯಲ್ ನಿಯಮದಲ್ಲಿ ಬದಲಾವಣೆ ತರಲಾಗಿದೆ.

NPS: ಶೇ. 80 ವಿತ್​ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್​ಪಿಎಸ್
ನ್ಯಾಷನಲ್ ಪೆನ್ಷನ್ ಸಿಸ್ಟಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2025 | 4:49 PM

Share

ನವದೆಹಲಿ, ಡಿಸೆಂಬರ್ 17: ನ್ಯಾಷನಲ್ ಪೆನ್ಷನ್ ಸಿಸ್ಟಂ (NPS) ಯೋಜನೆಯಲ್ಲಿ ಕೆಲ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ರಿಟೈರ್ಮೆಂಟ್ ವಯಸ್ಸನ್ನು ವಿಸ್ತರಿಸುವ ಅವಕಾಶ ಸೇರಿದಂತೆ ಹಲವು ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಎನ್​ಪಿಎಸ್ ಸದಸ್ಯರು ತಮ್ಮ ಹಣ ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ನಿಯಂತ್ರಣ ಹೊಂದಬಹುದು. ಎನ್​ಪಿಎಸ್ ಅನ್ನು ನಿಯಂತ್ರಿಸುವ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಪಿಎಫ್​ಆರ್​ಡಿಎ) ನಿನ್ನೆ ಮಂಗಳವಾರ (ಡಿ. 16) ಎನ್​ಪಿಎಸ್​ನಲ್ಲಿ ಕೆಲ ಮಹತ್ವದ ತಿದ್ದುಪಡಿಗಳನ್ನು ಪ್ರಕಟಿಸಿದೆ. ಅವುಗಳ ಕೆಲ ಮಹತ್ವದ ಬದಲಾವಣೆಗಳ ವಿವರ ಮುಂದಿದೆ.

ಲಂಪ್ಸಮ್ ವಿತ್​ಡ್ರಾಯಲ್ 60:40 ಬದಲು 80:20

ಎನ್​ಪಿಎಸ್ ಸ್ಕೀಮ್​ನಲ್ಲಿ ಹೂಡಿಕೆಗಳನ್ನು ಪೂರ್ತಿಯಾಗಿ ಹಿಂಪಡೆಯಲು ಆಗುವುದಿಲ್ಲ. ರಿಟೈರ್ಮೆಂಟ್ ವಯಸ್ಸಾದಾಗ ಹಿಂದೆ ಇದ್ದ ನಿಯಮದ ಪ್ರಕಾರ ಒಟ್ಟೂ ಕಾರ್ಪಸ್​ನಲ್ಲಿ ಶೇ. 60ರಷ್ಟು ಹಣವನ್ನು ಲಂಪ್ಸಮ್ ಆಗಿ ವಿತ್​ಡ್ರಾ ಮಾಡಬಹುದು. ಇನ್ನುಳಿದ ಶೇ. 40ರಷ್ಟನ್ನು ಆ್ಯನುಟಿ ಪ್ಲಾನ್ (ಪಿಂಚಣಿ) ಖರೀದಿಸಲು ಬಳಸಬೇಕು.

ಈಗ ತಿದ್ದುಪಡಿ ಮಾಡಲಾದ ನಿಯಮದ ಪ್ರಕಾರ, ಎನ್​ಪಿಎಸ್​ನಲ್ಲಿ ಒಟ್ಟು ಕಾರ್ಪಸ್ 12 ಲಕ್ಷ ರೂಗಿಂತ ಹೆಚ್ಚಿದ್ದಲ್ಲಿ ಶೇ. 80ರಷ್ಟು ಮೊತ್ತವನ್ನು ಲಂಪ್ಸಮ್ ಆಗಿ ಹಿಂಪಡೆಯಲು ಅವಕಾಶ ಇರುತ್ತದೆ. ಶೇ. 20 ಅನ್ನು ಮಾತ್ರವೇ ಆ್ಯನುಟಿ ಖರೀದಿಸಲು ಬಳಸಬಹುದು. ಇದರಿಂದ ಎನ್​ಪಿಎಸ್ ಹಣದಲ್ಲಿ ಮುಕ್ಕಾಲು ಪಾಲಿಗಿಂತ ಹೆಚ್ಚಿನ ಮೊತ್ತವನ್ನು ಸದಸ್ಯರು ಹೇಗೆ ಬೇಕಾದರೂ ಉಪಯೋಗಿಸಲು ಸ್ವತಂತ್ರರಿರುತ್ತಾರೆ.

ಇದನ್ನೂ ಓದಿ: ತ್ಯೇಕ ಇಪಿಎಫ್ ಅಕೌಂಟ್​ಗಳಿವೆಯಾ? ಎಲ್ಲವನ್ನೂ ಒಂದಕ್ಕೇ ವಿಲೀನ ಮಾಡದಿದ್ದರೆ ಏನಾಗುತ್ತೆ?

ಹೂಡಿಕೆ ಅವಧಿ 60 ವರ್ಷ ದಾಟಿ 85 ವರ್ಷದವರೆಗೂ ವಿಸ್ತರಿಸಲು ಅವಕಾಶ

ಹಿಂದೆ ಇದ್ದ ಎನ್​ಪಿಎಸ್ ನಿಯಮದ ಪ್ರಕಾರ 60 ವರ್ಷಕ್ಕೆ ರಿಟೈರ್ಮೆಂಟ್ ಏಜ್. ಅಂದರೆ ಎನ್​ಪಿಎಸ್ ಸ್ಕೀಮ್​ನಲ್ಲಿ ನೀವು 60 ವರ್ಷ ವಯಸ್ಸಾಗುವವರೆಗೂ ಹೂಡಿಕೆಗೆ ಅವಕಾಶ ಇತ್ತು. ಈಗ ಅದನ್ನು 85 ವರ್ಷಕ್ಕೆ ವಿಸ್ತರಿಸುವ ಅವಕಾಶ ಕೊಡಲಾಗಿದೆ. ನೀವು ಬೇಕೆಂದರೆ 60 ವರ್ಷಕ್ಕೆ ಹೂಡಿಕೆ ನಿಲ್ಲಿಸಬಹುದು. ಇಲ್ಲವಾದರೆ 85 ವರ್ಷದವರೆಗೂ ಹೂಡಿಕೆ ಮುಂದುವರಿಸಬಹುದು.

ಲಾಕ್ ಇನ್ ಪೀರಿಯಡ್ ಇಲ್ಲ…

ಸರ್ಕಾರಿ ನೌಕರರು ಎನ್​ಪಿಎಸ್​ನಲ್ಲಿ ಕನಿಷ್ಠ 5 ವರ್ಷ ಹೂಡಿಕೆ ಹೊಂದಿರಬೇಕು ಎನ್ನುವ ನಿಯಮ ಇದೆ. ಆದರೆ, ಸರ್ಕಾರಿ ನೌಕರರಲ್ಲದ ಇತರರಿಗೆ ಈ ಲಾಕ್ ಇನ್ ಪೀರಿಯಡ್ ನಿಯಮವನ್ನು ತೆಗೆಯಲಾಗಿದೆ. ನೀವು 57ನೆ ವಯಸ್ಸಿನಲ್ಲಿ ಎನ್​ಪಿಎಸ್ ಸ್ಕೀಮ್ ಆರಂಭಿಸಿ, 60ನೆ ವಯಸ್ಸಿಗೆ ಹಣ ವಿತ್​ಡ್ರಾ ಮಾಡಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಟಿಡಿ ಸ್ಕೀಮ್​ನಲ್ಲಿ 1 ಲಕ್ಷ ರೂ ಹೂಡಿಕೆಗೆ 5 ವರ್ಷದಲ್ಲಿ ಸಿಗುವ ರಿಟರ್ನ್ಸ್ ಇಷ್ಟು…

15 ವರ್ಷಕ್ಕೆ ಎನ್​ಪಿಎಸ್​ನಿಂದ ಎಕ್ಸಿಟ್

ಎನ್​ಪಿಎಸ್ ಹಣವನ್ನು ಪ್ರೀಮೆಚ್ಯೂರ್ ಆಗಿ ವಿತ್​ಡ್ರಾ ಮಾಡಲು ಅವಕಾಶ ಇರುತ್ತದೆ. 15 ವರ್ಷ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಿ ನಿಲ್ಲಿಸಬಹುದು. ಒಟ್ಟು ಕಾರ್ಪಸ್ 8 ಲಕ್ಷ ರೂಗಿಂತ ಕಡಿಮೆ ಇದ್ದಲ್ಲಿ ಎಲ್ಲಾ ಹಣವನ್ನೂ ಬೇಕೆಂದರೆ ವಿತ್​ಡ್ರಾ ಮಾಡಬಹುದು.

ಎಂಟು ಲಕ್ಷ ರೂಗಿಂತ ಹೆಚ್ಚಿದ್ದರೆ ಶೇ. 80ರಷ್ಟು ಹಣವನ್ನು ಲಂಪ್ಸಮ್ ಆಗಿ ಹಿಂಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ