Fixed Deposit
ಫಿಕ್ಸೆಡ್ ಡೆಪಾಸಿಟ್
ಫಿಕ್ಸೆಡ್ ಡೆಪಾಸಿಟ್ ಅಥವಾ ನಿಶ್ಚಿತ ಠೇವಣಿ ಎಂಬುದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯೊಂದು ಮುಂದಿಡುವ ಒಂದು ಹೂಡಿಕೆ ಯೋಜನೆ. ಗ್ರಾಹಕರು ಈ ಪ್ಲಾನ್ನಲ್ಲಿ ಲಂಪ್ಸಮ್ ಆಗಿ ನಿಗದಿತ ಅವಧಿಯವರೆಗೆ ಹಣ ಇಡಬಹುದು. ಬ್ಯಾಂಕ್ನಿಂದ ಈ ಠೇವಣಿಗೆ ನಿಗದಿತ ಬಡ್ಡಿ ನೀಡಲಾಗುತ್ತದೆ. ಇದರಲ್ಲಿ ಹೂಡಿಕೆ ಅವಧಿ ಮತ್ತು ಬಡ್ಡಿದರ ಎರಡೂ ನಿಶ್ಚಿತವಾಗಿರುವುದರಿಂದ ಫಿಕ್ಸೆಡ್ ಡೆಪಾಸಿಟ್ ಎಂದು ಕರೆಯಲಾಗುತ್ತದೆ. ಪ್ರತೀ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ತಮ್ಮದೇ ಪ್ರತ್ಯೇಕ ಎಫ್ಡಿ ಪ್ಲಾನ್ಗಳನ್ನು ಹೊಂದಿರಬಹುದು. ಸಾಮಾನ್ಯವಾಗಿ 15 ದಿನದಿಂದ ಹಿಡಿದು 10 ವರ್ಷದವರೆಗೆ ಬೇರೆ ಬೇರೆ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳಿದ್ದು, ಬಡ್ಡಿದರವೂ ವ್ಯತ್ಯಾಸ ಇರಬಹುದು. ಬ್ಯಾಂಕುಗಳಿಗೆ ಸಾಲವೇ ಪ್ರಮುಖ ಆದಾಯ ಮೂಲ. ಗ್ರಾಹಕರಿಗೆ ಸಾಲ ನೀಡಲು ಬೇಕಾದ ಫಂಡಿಂಗ್ ಅನ್ನು ಫಿಕ್ಸೆಡ್ ಡೆಪಾಸಿಟ್ಗಳ ಮೂಲಕ ಬ್ಯಾಂಕು ಪಡೆಯುತ್ತದೆ