ಈ ಎಸ್ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?
Slice small finance bank gives 5.25pc interest and daily compounding: ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ಗಳಿಗೆ ಮೂರು ತಿಂಗಳ ಲೆಕ್ಕದಲ್ಲಿ ಬಡ್ಡಿ, ಚಕ್ರಬಡ್ಡಿ ಗಣಿಸಲಾಗುತ್ತದೆ. ಆದರೆ, ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ದಿನವೂ ಚಕ್ರಬಡ್ಡಿ ಗಣಿಸಲಾಗುತ್ತದೆ. ಈ ಬ್ಯಾಂಕಲ್ಲಿ ಸೇವಿಂಗ್ಸ್ ಅಕೌಂಟ್ಗೆ ವಾರ್ಷಿಕ ಶೇ. 5.25ರಷ್ಟು ಬಡ್ಡಿ ಕೊಡಲಾಗುತ್ತದೆ.

ನವದೆಹಲಿ, ಜನವರಿ 6: ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Slice Small Finance Bank) ತನ್ನ ಸೇವಿಂಗ್ಸ್ ಅಕೌಂಟ್ಗಳಿಗೆ ಫಿಕ್ಸೆಡ್ ಡೆಪಾಸಿಟ್ನಷ್ಟು (Fixed Deposit) ಬಡ್ಡಿ ಆಫರ್ ಮಾಡುತ್ತಿದೆ. ಅಷ್ಟೇ ಅಲ್ಲ, ಕ್ವಾರ್ಟರ್ ಬದಲು ನಿತ್ಯವೂ ಚಕ್ರ ಬಡ್ಡಿ (interest compounding) ಜಮೆ ಮಾಡುತ್ತದೆ. ಸೇವಿಂಗ್ ಅಕೌಂಟ್ಗಳಿಗೆ ಸಾಮಾನ್ಯವಾಗಿ ಶೇ. 3ಕ್ಕಿಂತ ಹೆಚ್ಚು ಬಡ್ಡಿ ಸಿಗುವುದು ವಿರಳ. ಅಂಥದ್ದರಲ್ಲಿ ಸ್ಲೈಸ್ ಬ್ಯಾಂಕ್ ತನ್ನಲ್ಲಿರುವ ಸೇವಿಂಗ್ಸ್ ಅಕೌಂಟ್ಗಳಿಗೆ ಶೇ. 5.25ರವಷ್ಟು ವಾರ್ಷಿಕ ಬಡ್ಡಿ ಕೊಡುತ್ತಿದೆ.
ನಿತ್ಯವೂ ಚಕ್ರಬಡ್ಡಿ ಸಿಗುತ್ತೆ…
ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ತೆರೆಯಲಾಗುವ ಉಳಿತಾಯ ಖಾತೆಗಳಿಗೆ ಶೇ. 5.25 ವಾರ್ಷಿಕ ಬಡ್ಡಿ ಜೊತೆಗೆ ನಿತ್ಯ ಚಕ್ರ ಬಡ್ಡಿ ಜಮೆ ಆಗುತ್ತದೆ. ಬೇರೆ ಬ್ಯಾಂಕುಗಳಲ್ಲಿ ತ್ರೈಮಾಸಿಕವಾಗಿ ಬಡ್ಡಿ ಕಾಂಪೌಂಡಿಂಗ್ ಆಗುತ್ತದೆ. ಈ ಸಣ್ಣ ಬ್ಯಾಂಕಲ್ಲಿ ನಿತ್ಯವೂ ಕಾಂಪೌಂಡಿಂಗ್ ಆಗುತ್ತದೆ. ಒಂದು ದಿನದಲ್ಲಿ ಸೇವಿಂಗ್ಸ್ ಅಕೌಂಟ್ನಲ್ಲಿ ಎಷ್ಟೇ ಬ್ಯಾಲನ್ಸ್ ಇರಲಿ ಅಷ್ಟಕ್ಕೂ ಆ ದಿನದ ಬಡ್ಡಿ ಸೇರಿಸಲಾಗುತ್ತದೆ.
ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?
ದಿನವೂ ಚಕ್ರಬಡ್ಡಿ ಸೇರ್ಪಡೆಯಾದರೆ ಎಷ್ಟು ಲಾಭ?
ಬೇರೆ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ಗಳಿಗೆ ಬಡ್ಡಿ ಮೂರು ತಿಂಗಳಿಗೊಮ್ಮೆ ಕಾಂಪೌಂಡಿಂಗ್ ಆಗುತ್ತದೆ. ಕಾಂಪೌಂಡಿಂಗ್ ಎಂದರೆ ಬಡ್ಡಿ ಹಣಕ್ಕೂ ಬಡ್ಡಿ ಸೇರಿಸುವ ಚಕ್ರಬಡ್ಡಿ. ನೀವು ವಾರ್ಷಿಕ ಶೇ. 7.75 ಬಡ್ಡಿ ಇರುವ ಫಿಕ್ಸೆಡ್ ಡೆಪಾಸಿಟ್ನಲ್ಲಿ 1 ಲಕ್ಷ ರೂ ಠೇವಣಿ ಇಟ್ಟಾಗ, ತ್ರೈಮಾಸಿಕವಾಗಿ ಚಕ್ರಬಡ್ಡಿ ಜಮೆ ಆದರೆ ಒಂದು ವರ್ಷದಲ್ಲಿ 7,946 ರೂ ಬಡ್ಡಿ ಸಿಗುತ್ತದೆ.
ಅದೇ ದಿನದ ಚಕ್ರಬಡ್ಡಿಯಾದರೆ ಒಂದು ವರ್ಷದಲ್ಲಿ ಒಂದು ಲಕ್ಷ ರೂ ಹಣಕ್ಕೆ ಸಿಗುವ ಬಡ್ಡಿ ಹಣ 7,980 ರೂ ಆಗುತ್ತದೆ. ತ್ರೈಮಾಸಿಕ ಚಕ್ರಬಡ್ಡಿಗೆ ಹೋಲಿಸಿದರೆ ದಿನದ ಚಕ್ರಬಡ್ಡಿಯಿಂದ ಸಿಗುವ ಲಾಭ ಸಣ್ಣದಾದರೂ ಅದು ಲಾಭವೇ.
ಇದನ್ನೂ ಓದಿ: ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?
ವಾರ್ಷಿಕ ಬಡ್ಡಿದರ ಶೇ. 5.25 ಇದ್ದಲ್ಲಿ ಒಂದು ಲಕ್ಷ ರೂ ಹಣಕ್ಕೆ ಒಂದು ವರ್ಷದಲ್ಲಿ ನಿತ್ಯದ ಚಕ್ರಬಡ್ಡಿ ಹಾಕಿದಾಗ 22 ರೂ ಹೆಚ್ಚು ರಿಟರ್ನ್ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




