AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

India may overtake USA economy in 2075 says Goldman Sachs report: ಮುಂದಿನ 50 ವರ್ಷದಲ್ಲಿ ಚೀನಾದ ಜಿಡಿಪಿ 19 ಟ್ರಿಲಿಯನ್ ಡಾಲರ್​ನಿಂದ 57 ಟ್ರಿಲಿಯನ್ ಡಾಲರ್​ಗೆ ಬೆಳೆಯಲಿದೆ. ಅಮೆರಿಕದ ಜಿಡಿಪಿ 51.5 ಟ್ರಿಲಿಯನ್ ಡಾಲರ್ ಇರಲಿದೆ. ಭಾರತವು 2075ರಲ್ಲಿ ಅಮೆರಿಕವನ್ನು ಹಿಂದಿಕ್ಕಿ 52.5 ಟ್ರಿಲಿಯನ್ ಡಾಲರ್ ಆರ್ಥಿಕತೆ ಎನಿಸಲಿದೆ. ಪಾಕಿಸ್ತಾನ ಅತಿದೊಡ್ಡ ಆರ್ಥಿಕತೆಯಲ್ಲಿ ಆರನೇ ಸ್ಥಾನ ಪಡೆಯಬಹುದು.

50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?
ವಿಶ್ವದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 06, 2026 | 5:36 PM

Share

ನವದೆಹಲಿ, ಜನವರಿ 6: ಭಾರತದ ಆರ್ಥಿಕತೆ (India GDP) ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಅಪಾರ ವೇಗದಲ್ಲಿ ಬೆಳೆಯುತ್ತಿದೆ. ಕಳೆದೆರಡು ವರ್ಷದಲ್ಲಿ ಫ್ರಾನ್ಸ್, ಬ್ರಿಟನ್ ಆರ್ಥಿಕತೆಗಳನ್ನು ಹಿಂದಿಕ್ಕಿದೆ. ಈಗ ಜಪಾನ್ ಜಿಡಿಪಿಯನ್ನೂ ಮೀರಿಸಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಿದೆ ಭಾರತ. ಮುಂದಿನೆರಡು ವರ್ಷದಲ್ಲಿ ಜರ್ಮನಿಯನ್ನೂ ಹಿಂದಿಕ್ಕಿ ನಂ. 3 ಸ್ಥಾನಕ್ಕೆ ಏರುವ ನಿರೀಕ್ಷೆ ಇದೆ. ಆದರೆ, ಎರಡನೇ ಸ್ಥಾನಕ್ಕೇರಲು ಭಾರತಕ್ಕೆ ಬಹಳ ಸಮಯ ಬೇಕು. ಗೋಲ್ಡ್​ಮನ್ ಸ್ಯಾಕ್ಸ್ (Goldman Sachs) ವರದಿಯೊಂದರ ಪ್ರಕಾರ ಭಾರತ ಎರಡನೇ ಸ್ಥಾನಕ್ಕೇರಲು 2075 ಆಗಬಹುದು.

2075ರಲ್ಲಿ ಟಾಪ್ ಆರ್ಥಿಕತೆಗಳು

ಗೋಲ್ಡ್​ಮನ್ ಸ್ಯಾಕ್ಸ್ ಸಂಸ್ಥೆ ಮುಂದಿನ 50 ವರ್ಷದಲ್ಲಿ ಜಾಗತಿಕ ಆರ್ಥಿಕತೆಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ವಿಶ್ಲೇಷಿಸಿದೆ. ಇವತ್ತಿನ ಅನೇಕ ಮುಂದುವರಿದ ದೇಶಗಳು ಕೆಳಗಿಳಿಯುತ್ತವೆ. ಅಭಿವೃದ್ಧಿ ಮಂದಗೊಳ್ಳುತ್ತಿರುವುದು ಹಾಗು ಜನಸಂಖ್ಯೆ ಕಡಿಮೆ ಆಗುತ್ತಿರುವುದು ಅನೇಕ ಮುಂದುವರಿದ ದೇಶಗಳಿಗೆ ಹಿನ್ನಡೆಯ ಅಂಶಗಳೆನಿಸಿವೆ.

ಇದನ್ನೂ ಓದಿ: ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?

ಯುವಜನರ ಸಂಖ್ಯೆ ಹೆಚ್ಚಿರುವ ಭಾರತ ಮುಂದಿನ ಕೆಲ ದಶಕಗಳಲ್ಲಿ ಅಪಾರ ಬೆಳವಣಿಗೆ ಕಾಣಲಿದೆ. 2075ರಲ್ಲಿ ಅದು 52.5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರಲಿದೆ. ಅಮೆರಿಕವನ್ನು ಅದು ಹಿಂದಿಕ್ಕುತ್ತದೆ. 2075ರಲ್ಲಿ ಅಮೆರಿಕದ ಜಿಡಿಪಿ 51.5 ಟ್ರಿಲಿಯನ್ ಡಾಲರ್ ಇರುತ್ತದೆ. ಆದರೆ, ಚೀನಾ 57 ಟ್ರಿಲಿಯನ್ ಡಾಲರ್​ನೊಂದಿಗೆ ಅಗ್ರಸ್ಥಾನದಲ್ಲಿರುತ್ತದೆ ಎಂಬುದು ಗೋಲ್ಡ್​ಮನ್ ಸ್ಯಾಕ್ಸ್​ನ ವರದಿಯಲ್ಲಿ ತಿಳಿಸಲಾಗಿರುವ ಅಂಶ.

ಪಾಕಿಸ್ತಾನ ನಂ. 6

ಪಾಕಿಸ್ತಾನ, ಇಂಡೋನೇಷ್ಯಾ, ನೈಜೀರಿಯಾ ಇತ್ಯಾದಿ ಹೆಚ್ಚಿನ ಜನಸಂಖ್ಯೆ ಹಾಗೂ ಯುವಜನರ ಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಸರಿಯಾದ ಆರ್ಥಿಕ ನೀತಿ ಜಾರಿಗೆ ಬಂದರೆ ವೇಗದ ಬೆಳವಣಿಗೆ ಕಾಣಬಹುದು ಎಂಬುದು ಈ ವರದಿಯಲ್ಲಿ ಸೂಚಿಸಲಾಗಿದೆ. ಪಾಕಿಸ್ತಾನ 2075ರಲ್ಲಿ 12.3 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?

ಗೋಲ್ಡ್​ಮನ್ ಸ್ಯಾಕ್ಸ್ ರಿಪೋರ್ಟ್; 2075ರಲ್ಲಿ ಟಾಪ್-12 ಆರ್ಥಿಕತೆಗಳಿವು…

  1. ಚೀನಾ: 57 ಟ್ರಿಲಿಯನ್ ಡಾಲರ್
  2. ಭಾರತ: 52.5 ಟ್ರಿಲಿಯನ್ ಡಾಲರ್
  3. ಅಮೆರಿಕ: 51.5 ಟ್ರಿಲಿಯನ್ ಡಾಲರ್
  4. ಇಂಡೋನೇಷ್ಯಾ: 13.7 ಟ್ರಿಲಿಯನ್ ಡಾಲರ್
  5. ನೈಜೀರಿಯಾ: 13.1 ಟ್ರಿಲಿಯನ್ ಡಾಲರ್
  6. ಪಾಕಿಸ್ತಾನ: 12.3 ಟ್ರಿಲಿಯನ್ ಡಾಲರ್
  7. ಈಜಿಪ್ಟ್: 10.5 ಟ್ರಿಲಿಯನ್ ಡಾಲರ್
  8. ಬ್ರೆಜಿಲ್: 8.7 ಟ್ರಿಲಿಯನ್ ಡಾಲರ್
  9. ಜರ್ಮನಿ: 8.1 ಟ್ರಿಲಿಯನ್ ಡಾಲರ್
  10. ಮೆಕ್ಸಿಕೋ: 7.6 ಟ್ರಿಲಿಯನ್ ಡಾಲರ್
  11. ಬ್ರಿಟನ್: 7.6 ಟ್ರಿಲಿಯನ್ ಡಾಲರ್
  12. ಜಪಾನ್: 7.5 ಟ್ರಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ