AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇತನ ನಿರಾಕರಿಸಿದ ಇಬ್ಬರು ಸಂಸದರು ಯಾರು? ಸರ್ಕಾರಿ ಸೌಲಭ್ಯಗಳೂ ಬೇಡವಂತೆ

ವೇತನ ಮತ್ತು ಸರ್ಕಾರಿ ಸೌಲಭ್ಯಗಳನ್ನು ನಿರಾಕರಿಸಿದ ಇಬ್ಬರು ಸಂಸದರು ದೇಶದ ಗಮನ ಸೆಳೆದಿದ್ದಾರೆ. ಕುರುಕ್ಷೇತ್ರದ ನವೀನ್ ಜಿಂದಾಲ್ ಮತ್ತು ಇನ್ನರ್ ಮಣಿಪುರದ ಬಿಮೋಲ್ ಅಕೋಯಿಜಮ್ ಈ ನಿರ್ಧಾರ ಕೈಗೊಂಡಿದ್ದಾರೆ. ಜಿಂದಾಲ್ ಅವರು ಶ್ರೀಮಂತರಾಗಿದ್ದರೂ, ಅಕೋಯಿಜಮ್ ಅವರು ಮಧ್ಯಮ ವರ್ಗದವರಾಗಿದ್ದರೂ, ಇಬ್ಬರೂ ಸಾರ್ವಜನಿಕ ಸೇವೆಗೆ ಬದ್ಧರಾಗಿ ಸಂಬಳ ತ್ಯಜಿಸಿರುವುದು ಅಪರೂಪದ ಸಂಗತಿಯಾಗಿದೆ.

ವೇತನ ನಿರಾಕರಿಸಿದ ಇಬ್ಬರು ಸಂಸದರು ಯಾರು? ಸರ್ಕಾರಿ ಸೌಲಭ್ಯಗಳೂ ಬೇಡವಂತೆ
ಲೋಕಸಭೆ
ನಯನಾ ರಾಜೀವ್
|

Updated on: Mar 10, 2026 | 8:07 AM

Share

ನವದೆಹಲಿ, ಮಾರ್ಚ್​ 10: ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸುವಂತೆ ಸಂಸದ(Member Of Parliament)ರು ಆಗಾಗ ಸದನದಲ್ಲಿ ಕೂಗು ಕೇಳಿರಬರುತ್ತೆ. ಆದರೆ ಈ ಇಬ್ಬರು ಸಂಸದರು ತಮಗೆ ವೇತನವೂ ಬೇಡ, ಸರ್ಕಾರಿ ಸೌಲಭ್ಯಗಳು ಬೇಡ ಎಂದು ನಿರಾಕರಿಸಿರುವುದು ಅಚ್ಚರಿ ಮೂಡಿಸಿದೆ. ಲೋಕಸಭೆಯಲ್ಲಿ ಕೇವಲ ಇಬ್ಬರು ಸಂಸದರು (ಬಿಜೆಪಿಯಿಂದ ಒಬ್ಬರು ಮತ್ತು ಕಾಂಗ್ರೆಸ್‌ನಿಂದ ಒಬ್ಬರು) ತಮ್ಮ ಸಂಬಳವನ್ನು ಪಡೆಯದಿರಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕುರುಕ್ಷೇತ್ರದ ಬಿಜೆಪಿ ಸಂಸದ ನವೀನ್ ಜಿಂದಾಲ್ ಮತ್ತು ಇನ್ನರ್ ಮಣಿಪುರದ ಕಾಂಗ್ರೆಸ್ ಸಂಸದ ಡಾ. ಬಿಮೋಲ್ ಅಕೋಯಿಜಮ್ ಅಂಗೋಮ್ಚಾ ಈ ಇಬ್ಬರು ವೇತನ ಪಡೆಯಲು ನಿರಾಕರಿಸಿದ್ದಾರೆ. ಲೋಕಸಭಾ ಸಚಿವಾಲಯವು ನವೀನ್ ಜಿಂದಾಲ್ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಂಬಳವನ್ನು ಮಾತ್ರವಲ್ಲದೆ ಎಲ್ಲಾ ಸರ್ಕಾರಿ ಭತ್ಯೆಗಳು ಮತ್ತು ಸವಲತ್ತುಗಳನ್ನು ಸಂಪೂರ್ಣವಾಗಿ ಬೇಡ ಎಂದಿದ್ದಾರೆ. ಕುರುಕ್ಷೇತ್ರದಿಂದ ಇಂಫಾಲ್‌ವರೆಗಿನ ಎರಡು ವೈವಿಧ್ಯಮಯ ಕ್ಷೇತ್ರಗಳ ಪ್ರತಿನಿಧಿಗಳು ಈ ಕೆಲಸ ಮಾಡಿದ್ದಾರೆ.

ತಮ್ಮ ಸಂಬಳ ಮತ್ತು ಭತ್ಯೆಗಳನ್ನು ತ್ಯಜಿಸಿದ ಸಂಸದರ ಆರ್ಥಿಕ ಸ್ಥಿತಿಯಲ್ಲಿ ಭಾರಿ ವ್ಯತ್ಯಾಸವಿದೆ. ನವೀನ್ ಜಿಂದಾಲ್ 1,241 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಡಾ. ಬಿಮೋಲ್ ಅಕೋಯಿಜಮ್ ಸುಮಾರು 97 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಮತ್ತಷ್ಟು ಓದಿ:ನಾವು ಗೆಲ್ಲಿಸುವ ಸಂಸದರ ಸಂಬಳ, ಸಿಗುವ ಸೌಲಭ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಆರ್ಥಿಕ ಅಸಮಾನತೆಯ ಹೊರತಾಗಿಯೂ, ಇಬ್ಬರೂ ಸಾರ್ವಜನಿಕ ಸೇವೆಗಾಗಿ ಸಂಬಳವನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಜಿಂದಾಲ್ ಖಂಡಿತವಾಗಿಯೂ ಶ್ರೀಮಂತರು, ಆದರೆ ಅವರು ಸದನದ ಅತ್ಯಂತ ಶ್ರೀಮಂತ ಸಂಸದರಲ್ಲ, ಗುಂಟೂರಿನ ಟಿಡಿಪಿ ಸಂಸದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅತ್ಯಂತ ಶ್ರೀಮಂತ ಸಂಸದರಾಗಿದ್ದು, 5,705 ಕೋಟಿ ರೂ. ಹೆಚ್ಚು ಆಸ್ತಿ ಹೊಂದಿದ್ದಾರೆ.

ಚೆವೆಲ್ಲಾದ ಬಿಜೆಪಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ 4,568 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 543 ಲೋಕಸಭಾ ಸ್ಥಾನಗಳಲ್ಲಿ ಎರಡು ಸ್ಥಾನಗಳು ಪ್ರಸ್ತುತ ಖಾಲಿಯಾಗಿವೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ಲೋಕಸಭೆಯ 481 ಹಾಲಿ ಸದಸ್ಯರು ಪ್ರಸ್ತುತ ಸಂಬಳ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ: ರಾಜಣ್ಣ ಸ್ಫೋಟಕ ಹೇಳಿಕೆ
ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ: ರಾಜಣ್ಣ ಸ್ಫೋಟಕ ಹೇಳಿಕೆ
ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ
ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ
ವ್ಯಾನ್ ಪುಡಿಪುಡಿ, ಮೈ ಜುಂ ಎನಿಸುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವ್ಯಾನ್ ಪುಡಿಪುಡಿ, ಮೈ ಜುಂ ಎನಿಸುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ