ನಾವು ಗೆಲ್ಲಿಸುವ ಸಂಸದರ ಸಂಬಳ, ಸಿಗುವ ಸೌಲಭ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದಲ್ಲಿ ಒಂದೂವರೆ ತಿಂಗಳ ಕಾಲ 7 ಹಂತಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ನಡೆದಿದೆ. ನಾವು ಮತ ಹಾಕಿ ಗೆಲ್ಲಿಸಿರುವ ಅಭ್ಯರ್ಥಿ ಸಂಸದರಾಗಿ ಸಂಸತ್ ಭವನವನ್ನು ಪ್ರವೇಶಿಸಲಿದ್ದಾರೆ. ಆದರೆ, ನಮ್ಮ ಕ್ಷೇತ್ರದ ಸಂಸದರಿಗೆ ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ? ಅವರಿಗೆ ಸಿಗುವ ವಿಶೇಷ ಭತ್ಯೆಗಳೇನು? ಸೌಲಭ್ಯಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು?

ನಾವು ಗೆಲ್ಲಿಸುವ ಸಂಸದರ ಸಂಬಳ, ಸಿಗುವ ಸೌಲಭ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?
ಸಂಸತ್
Follow us
ಸುಷ್ಮಾ ಚಕ್ರೆ
|

Updated on: Jun 05, 2024 | 10:10 PM

ನವದೆಹಲಿ: ಭಾರತದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿವೆ. ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) 272 ಸ್ಥಾನಗಳಲ್ಲಿ ಗೆಲ್ಲುವ ಪಕ್ಷ ಕೇಂದ್ರದಲ್ಲಿ ಸರ್ಕಾರ ರಚಿಸಲು ಅರ್ಹವಾಗಿರುತ್ತದೆ. ಪ್ರಧಾನಮಂತ್ರಿಯ (Prime Minister of India) ಆಯ್ಕೆಗಾಗಿ ನಾವು ಗೆಲ್ಲಿಸಿ ಕಳುಹಿಸುವ ಸಂಸದರು ದೆಹಲಿಯಲ್ಲಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಭಾರತದಲ್ಲಿ ಸಂಸತ್ತಿನ ಸದಸ್ಯರು (ಎಂಪಿಗಳು) ಲೋಕಸಭೆಯಲ್ಲಿ ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲು ಸಾರ್ವಜನಿಕರಿಂದ ಚುನಾಯಿತರಾಗುತ್ತಾರೆ. ಇದು ಭಾರತದ ಸಂಸತ್ತಿನ ಕೆಳಮನೆಯಾಗಿದೆ.

ಲೋಕಸಭೆಯು ಭಾರತೀಯ ಸಂಸತ್ತಿನ ಎರಡು ಸದನಗಳಲ್ಲಿ ಒಂದಾಗಿದೆ. ಲೋಕಸಭೆ ಕೆಳಮನೆಯಾದರೆ ರಾಜ್ಯಸಭೆಯು ಮೇಲ್ಮನೆಯಾಗಿದೆ. ಲೋಕಸಭೆಯು ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳ ಪ್ರಕ್ರಿಯೆಯ ಮೂಲಕ ಜನರಿಂದ ನೇರವಾಗಿ ಚುನಾಯಿತರಾದ ಪ್ರತಿನಿಧಿಗಳಿಂದ ಕೂಡಿದೆ. ಅದಕ್ಕೂ ಮೊದಲು ಸಂಸತ್ ವಿಸರ್ಜನೆಯಾಗುವುದಿಲ್ಲ. ನಾವು ಆಯ್ಕೆ ಮಾಡಿ ಕಳುಹಿಸುವ ಸಂಸದರ ಸಂಬಳ, ಸವಲತ್ತುಗಳು ಮತ್ತು ಭತ್ಯೆಗಳ ಬಗ್ಗೆ ತಿಳಿದುಕೊಳ್ಳಲು ನಿಮಗೂ ಕುತೂಹಲವಿದ್ದರೆ ಆ ಕುರಿತು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಕಲ್ಯಾಣ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಕಾಂಗ್ರೆಸ್ 

  1. ಸಂಸದರಿಗೆ ಪ್ರತಿ ತಿಂಗಳೂ 1 ಲಕ್ಷ ರೂ. ಸಂಬಳ ಸಿಗುತ್ತದೆ. ಹೆಚ್ಚುವರಿಯಾಗಿ, ಅವರ ಸಂಬಳವು ಪ್ರತಿ 5 ವರ್ಷಗಳಿಗೊಮ್ಮೆ ದೈನಂದಿನ ಭತ್ಯೆಗಳ ರೂಪದಲ್ಲಿ ಹೆಚ್ಚಾಗುತ್ತದೆ.
  2. 2010ರ ಸಂಸತ್ ಸದಸ್ಯರ (ತಿದ್ದುಪಡಿ) ಕಾಯ್ದೆ ಪ್ರಕಾರ, ಸಂಸದರ ಸಂಬಳ ತಿಂಗಳಿಗೆ 50,000 ರೂ. ಮೂಲ ವೇತನವನ್ನು ಒಳಗೊಂಡಿರುತ್ತದೆ.
  3. ಸಂಸದರು ಸಂಸತ್ ಅಧಿವೇಶನ ನಡೆಯುವಾಗ ಅಧಿವೇಶನಗಳಿಗೆ ಹಾಜರಾಗಲು ದಿನಕ್ಕೆ 2,000 ರೂ. ಭತ್ಯೆ ನೀಡಲಾಗುತ್ತದೆ.
  4. ಸಂಸದರು ರಸ್ತೆ ಮೂಲಕ ಪ್ರಯಾಣಿಸುತ್ತಿದ್ದರೆ ಪ್ರತಿ ಕಿ.ಮೀ.ಗೆ 16 ರೂ.ನಂತೆ ಪ್ರಯಾಣ ಭತ್ಯೆ ಪಡೆಯಬಹುದು.
  5. ಸಂಸದರು ತಮ್ಮ ಲೋಕಸಭಾ ಕ್ಷೇತ್ರಗಳಿಗೆ ಖರ್ಚು ಮಾಡಲು ಪ್ರತಿ ತಿಂಗಳಿಗೆ 45,000 ರೂ.ಗಳ ಕ್ಷೇತ್ರ ಭತ್ಯೆಯನ್ನೂ ನೀಡಲಾಗುತ್ತದೆ.
  6. ಇದಿಷ್ಟೇ ಅಲ್ಲದೆ, ಸ್ಥಾಯಿ ಮತ್ತು ಅಂಚೆ ವೆಚ್ಚಕ್ಕೆ 15,000 ಸೇರಿದಂತೆ ತಿಂಗಳಿಗೆ ಕಚೇರಿ ವೆಚ್ಚವಾಗಿ 45,000 ರೂ. ನೀಡಲಾಗುತ್ತದೆ.
  7. ಸಂಸದರಿಗೆ ಸಹಾಯ ಮಾಡಲು ಅಸಿಸ್ಟೆಂಟ್​ಗಳು ಬೇಕಾಗುತ್ತಾರೆ. ಹೀಗಾಗಿ, ಕಾರ್ಯದರ್ಶಿ, ಸಹಾಯಕರ ವೇತನ ನೀಡಲು ಭತ್ಯೆ ಬಳಸಿಕೊಳ್ಳಬಹುದು.
  8. ಪ್ರತಿ ತಿಂಗಳು ಸಂಸದರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ಪಡೆಯಲು 500 ರೂ. ನೀಡಲಾಗುತ್ತದೆ.
  9. ಸಂಸದರು ಸಭೆಗಳಿಗೆ ಹೋಗುವುದು ಸೇರಿದಂತೆ ತಮ್ಮ ಕರ್ತವ್ಯಗಳ ನಿರ್ವಹಣೆಯಲ್ಲಿ ಉಂಟಾದ ವೆಚ್ಚಗಳ ವಿವರ ನೀಡಿದರೆ ಆ ಹಣವನ್ನು ಮರುಪಾವತಿ ಮಾಡಲಾಗುತ್ತದೆ.
  10. ಸಂಸದರಿಗೆ ಅವರ ಅಧಿಕಾರಾವಧಿ ಮುಗಿಯುವವರೆಗೂ ದೆಹಲಿಯಲ್ಲಿ ಬಾಡಿಗೆ ರಹಿತವಾಗಿ ಸರ್ಕಾರದಿಂದಲೇ ಮನೆಯನ್ನು ನೀಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!